ಯಲಹಂಕ ಪೊಲೀಸರ ಕಾರ್ಯಾಚರಣೆ.
ಸ್ಕೂಟರ್‌ನಲ್ಲಿ ಅಂಗಡಿಗಳಿಗೆ ಸಿಗರೇಟ್ ಸರಬರಾಜು ಮಾಡುತ್ತಿದ್ದವರನ್ನು ಸುಲಿಗೆ ಮಾಡಿದ್ದ 5 ಜನರ ವಶ. ಸುಮಾರು 12 ಲಕ್ಷ ಮೌಲ್ಯದ ಮಾಲು ವಶ.
ಯಲಹಂಕ ಪೊಲೀಸ್ ಠಾಣಾ ವ್ಯಾಪ್ತಿಯ ಕೊಂಡಪ್ಪ ಲೇಔಟ್‌ನ ಅಂಗಡಿಯೊಂದಕ್ಕೆ ಪಿರಾದುದಾರರು ಸ್ಕೂಟರ್‌ನಲ್ಲಿ ಸಿಗರೇಟ್ ಸರಬರಾಜು ಮಾಡುತ್ತಿದ್ದ ಸಂದರ್ಭದಲ್ಲಿ, 05 ಜನ ಅಪರಿಚಿತರು ಮಚ್ಚು ತೋರಿಸಿ, ಹೆದರಿಸಿ, ಸಿಗರೇಟ್‌ಗಳು, ಸ್ಕೂಟರ್ ಹಾಗೂ ಹಣ ಸುಲಿಗೆ ಮಾಡಿಕೊಂಡು ಹೋದ ಬಗ್ಗೆ ಯಲಹಂಕ ಪೊಲೀಸ್ ಠಾಣೆಯಲ್ಲಿ ದಿನಾಂಕ:30.11.2023 ರಂದು ಪ್ರಕರಣದ ದಾಖಲಾಗಿರುತ್ತದೆ.
ಪ್ರಕರಣದ ತನಿಖೆ ಚುರುಕುಗೊಳಿಸಿದ ಪೊಲೀಸರ ತಂಡ ಕೃತ್ಯದಲ್ಲಿ ಭಾಗಿಯಾಗಿದ್ದ 5 ಜನರನ್ನು ವಶಕ್ಕೆ ಪಡೆದುಕೊಂಡಿರುತ್ತಾರೆ. ಅವರಿಂದ ಪ್ರಕರಣಕ್ಕೆ ಸಂಬಂಧಿಸಿದ ಸುಮಾರು ಕೆ 2 ಲಕ್ಷ ರೂ ಮೌಲ್ಯದ ಸಿಗರೇಟ್‌ಗಳು ಹಾಗೂ ಒಂದು ಸ್ಕೂಟರ್‌ನ್ನು ವಶಪಡಿಸಿಕೊಂಡಿದ್ದು, ಕೃತ್ಯಕ್ಕೆ ಬಳಸಿದ್ದ ಒಂದು ಸ್ಕೂಟರ್ ಮತ್ತು ಮಾರಕಾಸ್ತ್ರಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ.
ವಶಕ್ಕೆ ಪಡೆದವರಲ್ಲಿ ಒಬ್ಬನು ಈ ಹಿಂದೆ ನೆಲಮಂಗಲ ಪೊಲೀಸ್ ಠಾಣೆಯ ಡಕಾಯಿತಿ ಪ್ರಕರಣ, ಜ್ಞಾನಭಾರತಿ ಪೊಲೀಸ್ ಠಾಣೆ, ಕೆ.ಜಿ.ಹಳ್ಳಿ ಪೊಲೀಸ್ ಠಾಣೆ, ಮತ್ತು ತುಮಕೂರು ಜಿಲ್ಲೆಯ ತಿಲಕ್ ಪಾರ್ಕ್ ಪೊಲೀಸ್ ಠಾಣೆಯ ಕೊಲೆಯತ್ನ ಪ್ರಕರಣಗಳಲ್ಲಿ ಭಾಗಿಯಾಗಿ, ತಲೆಮರೆಸಿಕೊಂಡಿದ್ದ ಎಂದು ತನಿಖೆಯಿಂದ ತಿಳಿದುಬಂದಿರುತ್ತದೆ. ತನಿಖೆ ಮುಂದುವರೆದಿರುತ್ತದೆ.
ಯಲಹಂಕ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀ. ನರಸಿಂಹಮೂರ್ತಿ.ಪಿ ರವರ ನೇತೃತ್ವದಲ್ಲಿ, ಯಲಹಂಕ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಶ್ರೀ ಎಂ.ಎಲ್ ಕೃಷ್ಣಮೂರ್ತಿ, ಹಾಗೂ ಸಿಬ್ಬಂದಿಗಳ ತಂಡವು ಕಾರ್ಯಪ್ರವೃತ್ತರಾಗಿ ವ್ಯಕ್ತಿಗಳನ್ನು ವಶಕ್ಕೆ ಪಡೆದು, ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ.
ಮಾಲು