ಹುಬ್ಬಳ್ಳಿಯಿಂದ ಮುಧೋಳ ಮಾರ್ಗವಾಗಿ ಸಾಗಿಸುತ್ತಿದ್ದ ಐದು ಕೋಟಿ ರೂ ಹಣವನ್ನು ಮುಧೋಳ ಚುನಾವಣಾಧಿಕಾರಿಗಳು,ಪ್ಲೈಯಿಂಗ್ ಸ್ಕ್ವಾಡ್,ಲೋಕಾಪುರ ಪೊಲೀಸರು ಸೇರಿ ವಶಕ್ಕೆ ತೆಗೆದುಕೊಂಡಿದ್ದಾರೆ.
ಅಕ್ರಮವಾಗಿ ಸಾಗಿಸುತ್ತಿದ್ದ ಹಣಕ್ಕೆ ಸೂಕ್ತ ದಾಖಲೆಗಳು ಇಲ್ಲದ ಹಿನ್ನೆಲೆಯಲ್ಲಿ ಹಣವನ್ನು ವಶಕ್ಕೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.ಲೋಕಾಪುರ ಬಳಿ ಲಕ್ಷಾನಟ್ಟಿ ಚೆಕ್ ಪೋಸ್ಟ್ ನಲ್ಲಿ ವಾಹನ ತಪಾಸಣೆ ವೇಳೆ ಹಣವನ್ನು ಜಪ್ತಿ ಮಾಡಲಾಗಿದ್ದು ಮತ್ತು ಕಾರಿನಲ್ಲಿದ್ದ ಐವರನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.
ಈ ಹಣವು ಯುನಿಯನ್ ಬ್ಯಾಂಕ್ ಗೆ ಸೇರಿದ ಹಣ ಎನ್ನುವ ಮಾಹಿತಿ ಲಭ್ಯವಾಗಿದ್ದು, ಇದನ್ನು ಬೊಲೆರೋ ವಾಹನದಲ್ಲಿ ಹುಬ್ಬಳ್ಳಿಯ ಯುನಿಯನ್ ಬ್ಯಾಂಕ್ ನಿಂದ ಮುಧೋಳ್ ಯುನಿಯನ್ ಬ್ಯಾಂಕ್ ಗೆ ಸಾಗಿಸಲಾಗುತ್ತಿತ್ತು, ಆದರೆ ಸೂಕ್ತ ದಾಖಲೆಗಳು ಇಲ್ಲದ ಕಾರಣ ಈ ಹಣವನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.ಮತ್ತು ಈ ವಿಚಾರವಾಗಿ ಅವರು ಹೆಚ್ಚಿನ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.