ದಿನಾಂಕ.11.05.2024 ರ ಬೆಳಗಿನ ಜಾವ 04.30 ಗಂಟೆಯಲ್ಲಿ ಫಿರಾದಿಯವರು ತನ್ನ ಮನೆಯಿಂದ ಕೆಲಸಕ್ಕೆಂದು ಹೆಣ್ಣೂರು ಪೊಲೀಸ್ ಠಾಣಾ ಸರಹದ್ದಿನ ಹೆಚ್.ಬಿ.ಆರ್ ಲೇಔಟ್‌ನ 18ನೇ ಕ್ರಾಸ್‌ನಲ್ಲಿರುವ ಹೋಟೆಲ್ ಬಳಿ ನಡೆದುಕೊಂಡು ಹೋಗುತ್ತಿರಬೇಕಾದರೆ, ಹಿಂಬದಿಯಿಂದ ಬೈಕ್‌ನಲ್ಲಿ ಬಂದ ಮೂರು ಜನ ಅಪರಿಚಿತರು ಫಿರಾದಿರವರನ್ನು ತಡೆದು ಚಾಕು ತೋರಿಸಿ, ಬೆದರಿಸಿ ಬಲವಂತವಾಗಿ ಮೊಬೈಲ್ ಕಿತ್ತುಕೊಂಡು ಹೋಗಿರುತ್ತಾರೆ. ಈ ಸಂಬಂಧ ಫಿರಾದಿಯವರು ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ದೂರನ್ನು ಸಲ್ಲಿಸಿರುತ್ತಾರೆ. ಹೆಣ್ಣೂರು ಪೊಲೀಸರು ಪ್ರಕರಣವನ್ನು ದಾಖಲಿಸಿರುತ್ತಾರೆ ಪ್ರಕರಣದ ಪತ್ತೆ ಕಾರ್ಯ ಕೈಗೊಂಡ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ಕೈಗೊಂಡು, ಹಲವಾರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ನಂತರ ಭಾತ್ಮೀದಾರರ ಸಹಾಯದಿಂದ ದಿನಾಂಕ:16.06.2024 ರಂದು ಗೆದ್ದಲಹಳ್ಳಿ ಬಳಿ ಮೂರು ವ್ಯಕ್ತಿಗಳನ್ನು ವಶಕ್ಕೆ ಪಡೆದು ಕೊಂಡಿರುತ್ತಾರೆ.
ವಶಕ್ಕೆ ಪಡೆದ ವ್ಯಕ್ತಿಗಳನ್ನು ವಿಚಾರಣೆಗೊಳಪಡಿಸಿದಾಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ, ಆರೋಪಿಗಳು ತಪ್ಪೋಪ್ಪಿಕೊಂಡಿರುತ್ತಾರೆ. ನಂತರ ಅವರ ವಶದಿಂದ ಕೃತ್ಯಕ್ಕೆ ಬಳಸಿದ್ದ ಒಂದು ದ್ವಿ-ಚಕ್ರ ವಾಹನ ಮತ್ತು ಮೊಬೈಲ್ ಅನ್ನು ವಶಪಡಿಸಿ ಕೊಳ್ಳಲಾಗಿದೆ.
ಈ ಕಾರ್ಯಾಚರಣೆಯನ್ನು ಪೂರ್ವ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಶ್ರೀ ಡಿ.ದೇವರಾಜ ಹಾಗೂ ಬಾಣಸವಾಡಿ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀ.ಉಮಾಶಂಕರ್.ಎಂ.ಹೆಚ್ ರವರ ಮಾರ್ಗದರ್ಶನದಲ್ಲಿ ಹೆಣ್ಣೂರು ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಶ್ರೀ.ದೀಪಕ್ ಎಲ್ ಅಧಿಕಾರಿ/ಸಿಬ್ಬಂದಿ ರವರ ತಂಡ ಪ್ರಕರಣವನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿರುತ್ತಾರೆ.