


ಬೆಂಗಳೂರು: ದೇಶದಲ್ಲಿ ಇಂದು 75ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಗುತ್ತಿದೆ. ದೇಶದ ಮೂಲೆ ಮೂಲೆಯಲ್ಲೂ ಸಂಭ್ರಮ ಕಳೆಕಟ್ಟಿದೆ.
ಕೊರೊನಾ ಇರುವ ಹಿನ್ನೆಲೆ ಸರಳ ಹಾಗೂ ನಿಯಮದ ಪ್ರಕಾರವೇ ಸ್ವಾತಂತ್ರ್ಯ ಹಬ್ಬವನ್ನು ಆಚರಿಸಲಾಗುತ್ತಿದೆ.ರಾಜ್ಯದ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ಸರಳವಾಗಿ ಆಚರಿಸಲಾಯಿತು.
ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಗುವಾಗ ನಡೆದ ತ್ಯಾಗ ಬಲಿದಾನ ಸ್ಮರಣೆ ಮಾಡುತ್ತಾ ಬೆಂಗಳೂರು ನಗರ ಸುದ್ದಗುಂಟೆಪಾಳ್ಯ ಠಾಣೆ ಪೊಲೀಸರು ಧ್ವಜಾರೋಹಣ ನೆರವೇರಿಸುವ ಮೂಲಕ ಸಾಕ್ಷಿಯಾದರು.

ನಮ್ಮ ಮುಖ್ಯ ವರದಿಗಾರರು ಕರ್ನಾಟಕದಿಂದ,
