ದಿನಾಂಕ: 12/02/2024 ರಂದು ಬೆಂಗಳೂರು ನಗರ ಅಶೋಕನಗರ ಪೊಲೀಸ್ ಠಾಣಾ ವ್ಯಾಪ್ತಿಯ ನೀಲಸಂದ್ರದ ಸಾರ್ವಜನಿಕ ರಸ್ತೆಯಲ್ಲಿ ಓರ್ವ ವ್ಯಕ್ತಿಯು ಸಾರ್ವಜನಿಕರಿಂದ ಹಣವನ್ನು ಪಣವಾಗಿ ಕಟ್ಟಿಸಿಕೊಂಡು, ₹10/-ಕ್ಕೆ ₹80/- ಗಳನ್ನು ಕೊಡುವುದಾಗಿ ಹೇಳಿ, ಕಲ್ಯಾಣಿ ಮತ್ತು ಶ್ರೀದೇವಿ ಮಟ್ಕಾ ಜೂಜಾಟವನ್ನು ಆಡಿಸುತ್ತಿರುವ ಬಗ್ಗೆ ಸಿಸಿಬಿ ವಿಶೇಷ ವಿಚಾರಣಾ ದಳದ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಮಾಹಿತಿ ಬಂದಿರುತ್ತದೆ.
ಈ ಮಾಹಿತಿ ಮೇರೆಗೆ ದಾಳಿಯನ್ನು ಕೈಗೊಂಡು ಓರ್ವನನ್ನು ವಶಕ್ಕೆ ಪಡೆದು ಮಟ್ಕಾ ಜೂಜಾಟಕ್ಕೆ ಸಂಬಂಧಪಟ್ಟಂತೆ, ಆತನ ಕಡೆಯಿಂದ ಕಡೆಯಿಂದ 10,500/- ನಗದು ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ, ಅಶೋಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿರುತ್ತದೆ.