ನಿಮಗೆ ಕ್ರಿಸ್ಮಸ್ ಗಿಫ್ಟ್ ಕಳುಹಿಸುತ್ತಾ ಇದ್ದೇವೆ ಎಂದು ನಿಮ್ಮನ್ನು ನಂಬಿಸಿ ನಿಮ್ಮ ಅಡ್ರೆಸ್ ತೆಗೆದುಕೊಳ್ಳುತ್ತಾರೆ ಒಂದು ವಾರದ ನಂತರ. ನಿಮಗೆ ದೆಹಲಿಯಿಂದ ಕಸ್ಟಮ್ ಆಫೀಸಿನಿಂದ ಕರೆ ಮಾಡುತ್ತಿದ್ದೇವೆ ಎಂದು ಹೇಳುವ ಒಂದು ಪೋನ್ ಕಾಲ್ ಬರುತ್ತದೆ ನಿಮಗೆ ಅಮೇರಿಕಾದಿಂದ ಲ್ಯಾಪ್ ಟಾಪ್ ಐಪೋನ್ ಚಿನ್ನದ ಲಾಕೆಟ್ 2 ಲಕ್ಷ ರೂ ಹಣ ಮುಂತಾದ ಕೆಲವು ದುಬಾರಿ ಬೆಲೆಯ ವಸ್ತುಗಳ ಗಿಪ್ಟ್ ಪ್ಯಾಕ್ ಬಂದಿದೆ ದೆಹಲಿಯಲ್ಲಿ ಕಸ್ಟಮ್ ಆಫೀಸಿನಲ್ಲಿ ಹೋಲ್ಡ್ ಆಗಿದೆ ಅದು ಅಲ್ಲಿಂದ ರಿಲೀಸ್ ಆಗಿ ನಿಮ್ಮ ಮನೆಯ ಅಡ್ರೆಸ್ ಗೆ ಬರಲು 50,000 ರೂಗಳನ್ನು ಕಟ್ಟಬೇಕು ಎಂದು ಹೇಳಿ ನಿಮ್ಮನ್ನು ನಂಬಿಸುತ್ತಾರೆ ಹಣ ಕಳಿಸಿದ ನಂತರ ನಿಮಗೆ ಯಾವುದೇ ಗಿಫ್ಟ್ ಬರುವುದಿಲ್ಲ
ಇಂಥ ವಂಚನೆಯ ಜಾಲಕ್ಕೆ ಎಷ್ಟೋ ಜನರು ಸಿಲುಕಿ ತಮ್ಮ ಲಕ್ಷ ಲಕ್ಷ ಹಣವನ್ನು ಕಳೆದುಕೊಂಡಿರುತ್ತಾರೆ
ದಯವಿಟ್ಟು ಇಂಥ ವಂಚನೆಯ ಜಾಲದ ಕುರಿತು ಎಚ್ಚರಿಕೆಯಾಗಿರಿ….
ಸಾಮಾಜಿಕ ಜಾಲತಾಣವನ್ನು ಬಹಳ ಎಚ್ಚರದಿಂದ ಬಳಸಿ.
ಕೆಲವರು ಧರ್ಮದ ಹೆಸರಲ್ಲಿ ಇನ್ನು ಕೆಲವರು ಧಾರ್ಮಿಕ ಗುರುಗಳ, ಕನ್ಯಾ ಸಹೋದರಿಯಾರ ಫೋಟೋಗಳನ್ನು ದುರ್ಬಳಕೆ ಮಾಡಿಕೊಂಡು ಅಮಾಯಕ ಜನರನ್ನು ವಂಚಿಸುತ್ತಾರೆ.
ದುರಾಸೆಯೇ ದುಃಖಕ್ಕೆ ಮೂಲ, ಯಾರು ಸುಮ್ನೆ ಕೊಡುವುದಿಲ್ಲ.
ಕ್ರಿಸ್ತ ಜಯಂತಿಯ ಶುಭಾಶಯಗಳು ಹಾಗೂ ಹೊಸ ವರ್ಷದ ಶುಭಾಶಯಗಳು.
ವರದಿ : ಆಂಟೋನಿ ಬೇಗೂರು