ಆನೇಕಲ್ ತಾಲ್ಲೂಕಿನ ಸರ್ಜಾಪುರ ಪೋಲೀಸ್ ಠಾಣೆ ವ್ಯಾಪ್ತಿಯ ದ್ವಿ ಚಕ್ರ ವಾಹನಗಳ ಕಳ್ಳತನ ಮಾಡಿ ಸಿಕ್ಕಿ ಬಿದ್ದ ಆರೋಪಿಗಳಾದ ತಮಿಳುನಾಡಿನ ರಾಜ್ಯದ ಮೂಕಂಡಪಲ್ಲಿಯ ಪ್ರಕಾಶ್ ರಾಜ್ ಅಲಿಯಾಸ್ ಮಧನ,ಹೋಸೂರು ತಾಲ್ಲೂಕಿನ ಬಾಗಲೂರು ಬಳಿ ಇರುವ ಚೊಕ್ಕರಸನಹಳ್ಳಿಯ ಗೋಪಿ ಅಲಿಯಾಸ್ ಲೌವ್ಲಿ,ಜಿಗಣಿ ಹೋಬಳಿಯ ತಿರುಪಾಳ್ಯದ ನಂದೀಶ್,ಆನೇಕಲ್ ಕಾಜಿ ಮೊಹಲ್ಲಾ ಸ್ಮಾಶಾನದ ಹತ್ತಿರ ಇರುವ ಮಹಮದ್ ಶಾಹಿದ್,ತಮಿಳುನಾಡಿನ ಸೇವಗಾನಪಲ್ಲಿಯ ಬಳಿ ಇರುವ ಕೊತ್ತಪಲ್ಲಿ ನವೀನ್ ಕುಮಾರ್ ಅಲಿಯಾಸ್ ಬುಜ್ಜಿ ಎಂಬ ಅರೋಪಿಗಳಿಂದ ಸುಮಾರು ನಲವತ್ತು ಲಕ್ಷಗಳ ಬೆಲೆ ಬಾಳುವ ಇಪ್ಪತೈದು ದ್ವಿ ಚಕ್ರ ವಾಹನಗಳನ್ನು,ರಾತ್ರಿ 8:30 ರ ಸಮಯದಲ್ಲಿ ಸರ್ಜಾಪುರ ವ್ಯಾಪ್ತಿಯ ಹಂದೇನಹಳ್ಳಿ ರಸ್ತೆ ಬಳಿ ಇರುವ ಕ್ರಾಂತಿ ಲೇಔಟ್ ಬಳಿ ದರೋಡೆ ಮಾಡಲು ಬಂದ ನಾಲೈದು ಜನರ ಕಳ್ಳರು ಇರುವ ಮಾಹಿತಿ ಆಧರಿಸಿ ಹೊಂಚು ಹಾಕಿ ದರೋಡೆ ಮಾಡಲು ಯತ್ನಿಸುತ್ತಿದ್ದ ಕಳ್ಳರ ಮೇಲೆ ಲಕ್ಷ್ಮಿ ನಾರಾಯಣ್ ರವರ ನೇತೃತ್ವದಲ್ಲಿ ಸರ್ಕಲ್ ಇನ್ಸ್‌ಪೆಕ್ಟರ್ ಮಂಜು ಎಸ್ ಎಸ್,ಸಬ್ ಇನ್ಸ್‌ಪೆಕ್ಟರ್ ದುಂಡಪ್ಪ ಬಾರ್ಕಿ, ಸಿಬ್ಬಂದಿಗಳಾದ ಪ್ರಭುಕುಮಾರ್,ಸಂತೋಷ್ ಕುಮಾರ್ ರವರು ಒಳಗೊಂಡ ತಂಡದಿಂದ ನಡೆಸಿದ ದಾಳಿಯ ಸಂಧರ್ಭದಲ್ಲಿ,ದರೋಡೆ ಕೋರರ ಬಳಿ ಇದ್ದ ಮಾರಕಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಯಿತು.
ಸರ್ಜಾಪುರ ಪೋಲೀಸ್ ಠಾಣೆಯಲ್ಲಿ ದಾವೆ ದಾಖಲಿಸಿ ಆರೋಪಿಗಳ ವಿಚಾರಣಾ ಕಾಲದಲ್ಲಿ ಸರ್ಜಾಪುರ, ಹೊಸಕೋಟೆ,ಚಂದಾಪುರ,ಹೊಸೂರು,ಬಾಗಲೂರು,ಮಾಲೂರು ಪೋಲೀಸ್ ಠಾಣೆ ವ್ಯಾಪ್ತಿಯಲ್ಲಿ ಮನೆಯ ಹೊರಗೆ ನಿಲ್ಲಿಸಿರುವ ವಾಹನಗಳಿಗೆ ಹ್ಯಾಂಡಲ್ ಲಾಕ್ ಹಾಕಿದ್ದರು ಸಹ ಬಲಪ್ರಯೋಗದಿಂದ ಮುರಿದು, ಅವರ ಬಳಿ ಇರುವ ಪ್ಲಗ್ ನ ಸಹಾಯದಿಂದ ಕೀ ಇಲ್ಲದೇ ಬಂದು ಕಳ್ಳತನ ಮಾಡಿರುವುದಾಗಿ ತಿಳಿಸಿದ್ದಾರೆ ಎಂದು ಬೆಂಗಳೂರು ಗ್ರಾಮಾಂತರ ಪೋಲೀಸ್ ಅಧೀಕ್ಷಕರಾದ ಮಲ್ಲಿಕಾರ್ಜುನ ಬಾಲದಂಡೆ ತಿಳಿಸಿದರು,
ಇದೇ ಸಂಧರ್ಭದಲ್ಲಿ ಅಪರ ಪೋಲೀಸ್ ಅಧೀಕ್ಷಕರಾದ ಎಂ ಎಲ್ ಪುರಷೋತ್ತಮ್,ಆನೇಕಲ್ ಇಪ ವಿಭಾಗದ
ಡಿ ವೈ ಎಸ್ ಪಿ,ಎ ವಿ ಲಕ್ಷ್ಮಿ ನಾರಾಯಣ್ ಮತ್ತು ಸರ್ಜಾಪುರ ಪೋಲೀಸ್ ಠಾಣೆಯ ವೃತ್ತ ನಿರೀಕ್ಷರಾದ ಮಂಜು ಎಸ್ ಎಸ್,ಉಪ ನಿರೀಕ್ಷಕರಾದ ದುಂಡಪ್ಪ ಬಾರ್ಕಿ,ಸಿಬ್ಬಂದಿಗಳಾದ ಶಿವಲಿಂಗಯ್ಯ,ನಂಜೇಗೌಡ,
ಪುಟ್ಟಸ್ವಾಮಿ,ಪ್ರಭುಕುಮಾರ್,ಸಂತೋಷ್ ಕುಮಾರ್,ಎಸ್ ಎಸ್ ದಾಳಿ,ಪ್ರಕಾಶ್ ಇದ್ದರು.