ಶಿರ್ವ ಸಂತಮೇರಿ ಪಿ ಯು ಕಾಲೇಜಿನ ಸಭಾಂಗಣದಲ್ಲಿ ನಶೆ ಮುಕ್ತ ಭಾರತ ಅಭಿಯಾನದಡಿ ಶಿರ್ವ ಪೊಲೀಸ್ ಠಾಣೆ ವತಿಯಿಂದ ಕಾರ್ಯಗಾರ ನಡೆಯಿತು. ಈ ಕಾರ್ಯಗಾರದಲ್ಲಿ 375 ವಿದ್ಯಾರ್ಥಿಗಳು ಭಾಗವಹಿಸಿದರು. ಶಿರ್ವಾ ಠಾಣೆಯ ಠಾಣಾಧಿಕಾರಿ ಮಂಜುನಾಥ ಮರಬದ ವಿದ್ಯಾರ್ಥಿಗಳಿಗೆ ಕಾರ್ಯಾಗಾರವನ್ನು ನೆರವೇರಿಸಿದರು, ಹೆಡ್ ಕಾನ್ಸ್ಟೇಬಲ್ ಮಂಜುನಾಥ ಅಡಿಗ ಶಾಲಾ ಪ್ರಾಂಶುಪಾಲರಾದ ಜಯಶಂಕರ್ ಕೆ ಹಾಗೂ ಸಿಬ್ಬಂದಿಗಳು ಹಾಜರಿದ್ದರು.
“ಡ್ರಕ್ಸ್ ಫ್ರೀ ಇಂಡಿಯಾ” ವಿದ್ಯಾರ್ಥಿ ಜೀವನದಲ್ಲಿ ಕನಸು ಕಾಣುವ ಹಾಗೂ ಭವಿಷ್ಯ ಕಟ್ಟುವ ಸಮಯ ಈ ಸಮಯದಲ್ಲಿ ನಶೆ ಹಾಗೂ ಡ್ರಗ್ಸ್ ಅನ್ನು ದೂರವಿಡುವುದು ಉತ್ತಮ. ಸಿಗರೇಟ್, ಗಾಂಜಾ, ಚರಸ್ ಇತ್ಯಾದಿ ತಾತ್ಕಾಲಿಕ ಸುಖ ಕೊಡಬಹುದು, ಆದರೆ ಇದರಿಂದ ಮೆದುಳು ಡ್ಯಾಮೇಜ್ ಆಗಿ ಮೆಮೊರಿ ವೀಕ್ ಆಗಿ ಪರೀಕ್ಷೆ ಬರೆಯಲು ಹಾಗೂ ಖಿನ್ನತೆ ಬರುತ್ತದೆ. ಯಾರಾದರೂ ಅಥವಾ ಸ್ನೇಹಿತರು ನಶೆ ತೆಗೆದುಕೊಳ್ಳಬೇಕು ಎಂದಾಗ ನೋ ಎನ್ನರಿ, ಹಾಗೂ ಇಂಥ ಸಂದರ್ಭದಲ್ಲಿ ನಿಮ್ಮ ಶಿಕ್ಷಕರೊಂದಿಗೆ ಸಂಪರ್ಕಿಸಿ ಅಥವಾ ಹತ್ತಿರದ ಪೊಲೀಸ್ ಠಾಣೆಗೆ ಸಂಪರ್ಕಿಸಿ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿ ಇಡಲಾಗುವುದು.
“ಡ್ರಗ್ಸ್ ಗೆ ನೋ ಜೀವನಕ್ಕೆ ಎಸ್” ಎಂಬ ಸ್ಲೋಗನ್ ನೊಂದಿಗೆ
ಎಸ್ ಐ ಮಂಜುನಾಥ ಮರಬದ ಕಾರ್ಯಗಾರವನ್ನು ಮಕ್ಕಳ ಸಂವಾದದೊಂದಿಗೆ ಮುಗಿಸಿದರು.

ಉಡುಪಿಯ ನಮ್ಮ ವರದಿಗಾರ,

ವಿಲ್ಸನ್ ಡಿ’ಸೋಜ







