ಕೊಡಗು ಮತ್ತು ಹಾಸನ ಜಿಲ್ಲಾ ವ್ಯಾಪ್ತಿಯಲ್ಲಿ ವಾಹನಗಳನ್ನು ಕಳುವು ಮಾಡುತ್ತಿದ್ದ ಆರೋಪಿತರನ್ನು ಬಂಧಿಸುವಲ್ಲಿ ಶನಿವಾರಸಂತೆ ಪೊಲೀಸರು ಯಶಸ್ವಿಯಾಗಿದ್ದಾರೆ. ಶನಿವಾರಸಂತೆ ಠಾಣಾ ಸರಹದ್ದಿನ ಶನಿವಾರಸಂತೆ ಮತ್ತು ಕೊಡ್ಲಿಪೇಟೆ ಸುತ್ತಮುತ್ತ ಹಾಗೂ ಹಾಸನ ಕಡೆಗಳಲ್ಲಿ ಮನೆಯ ಹೊರಗಡೆ ನಿಲ್ಲಿಸಿದ್ದ ವಾಹನಗಳನ್ನು ಮತ್ತು ವಾಹನಗಳನ್ನು ನಿಲ್ಲಿಸಿ ವಾಹನದಲ್ಲಿ ಕೀ ಬಿಟ್ಟು ಹೋಗುವವರನ್ನು ಗಮನಿಸಿ ಕಾರು,ಬೈಕ್,ಸ್ಕೂಟಿಗಳನ್ನು ಕಳುವು ಮಾಡುತ್ತಿದ್ದು, ಈ ಬಗ್ಗೆ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಕಳವು ಪ್ರಕರಣ ದಾಖಲಾಗಿರುತ್ತದೆ.
ದಸ್ತಗಿರಿ ಮಾಡಿದ ಆರೋಪಿಗಳ ವಿವರ:-1) ಬಿಲ್ಲವರ ಜೀವನ್ ತಂದೆ ಗಣೇಶ ಪ್ರಾಯ 23 ವರ್ಷ ಕೂಲಿ ಕೆಲಸ ವಾಸ ಸುಳುಗಳಲೆ ಕಾಲೋನಿ ಶನಿವಾರಸಂತೆ 2)ರಿಯಾಜ್ ತಂದೆ ಮಹಮ್ಮದ್ ಅದ್ಲ ಪ್ರಾಯ 29 ವರ್ಷ ಕೂಲಿ ಕೆಲಸ ವಾಸ ಹೊಸೂರು ಗ್ರಾಮ ಯಸಳೂರು ಹೋಬಳಿ ಸಕಲೇಶಪುರ ತಾಲೋಕು ಹಾಸನ ಜಿಲ್ಲೆ ಆರೋಪಿಗಳಿಂದ ವಶಪಡಿಸಿಕೊಂಡ ಕಳುವು ಮಾಲಿನ ವಿವರ1) ಕೆಎ-04-ಎಂಇ-7788 ರ ಮಾರುತಿ 800 ಕಾರು 2)ಕೆಎ-45-ಕೆ-0679 ರ ಹೊಂಡಾ ಎಲಿವೇಟರ್ ಸ್ಕೂಟಿ3) ಕೆಎ-13-ಇಎಂ-3822 ರ ಸೂಪೆರ್ ಎಕ್ಸೆಲ್ ವಾಹನಗಳನ್ನು ವಶಪಡಿಸಿಕೊಳ್ಳಲಾಗಿರುತ್ತದೆ ಸದ್ರಿ ವಾಹನಗಳ ಒಟ್ಟು ಮೌಲ್ಯ 1,20,000 ರೂ ಆಗಿರುತ್ತದೆ.ಆರೋಪಿ ಜೀವನ್ 2019ರಲ್ಲಿ ಕಳವು ಪ್ರಕರಣದಲ್ಲಿ ಬಾಗಿಯಾಗಿ ಒಂದು ವರ್ಷ ಶಿಕ್ಷೆಯನ್ನು ಅನುಭವಿಸಿ ಹೊರಬಂದ ನಂತರ ಒಂದು ಮೋಟಾರು ಸೈಕಲನ್ನು ಕಳವು ಮಾಡಿ 2020 ನವಂಬರ್ವರೆಗೆ ಜೈಲಿನಲ್ಲಿದ್ದು ಪುನಃ ಹಳೆ ಚಾಳಿಯನ್ನು ಮುಂದುವರೆಸಿ ಕಳ್ಳ ತನ ಮಾಡುತ್ತಿರುವುದಾಗಿದೆ. ಆರೋಪಿಗಳ ಮೇಲೆ ವಾಹನ ಕಳ್ಳತನಕ್ಕೆ ಸಂಬಂದಿಸಿದಂತೆ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಹಾಗೂ ಹಾಸನ ಜಿಲ್ಲೆಯ ಬಾಣಾವಾರ ಪೊಲೀಸ್ ಠಾಣೆಯಲ್ಲಿ
ವಾಹನ ಕಳ್ಳತನಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಈ ಪ್ರಕರಣವನ್ನು ಪತ್ತೆ ಮಾಡುವಲ್ಲಿ ಶನಿವಾರಸಂತೆ ಠಾಣಾ ಪೊಲೀಸ್ ನಿರೀಕ್ಷಕರಾದ ಎಸ್. ಪರಶಿವಮೂರ್ತಿ ನೇತೃತ್ವದ ಪಿ.ಎಸ್.ಐ. ದೇವರಾಜು ಹೆಚ್.ಇ. ಎ.ಎಸ್.ಐ. ಜಯಕುಮಾರ್, ಸಿಬ್ಬಂದಿಗಳಾದ ಲೋಕೇಶ್, ಶಶಿಕುಮಾರ್ ಹೆಚ್.ಬಿ., ಬಿ.ಡಿ.ಮುರುಳಿ, ಪ್ರದೀಪ್, ವಿನಯ್, ಸಂತೋಷ್, ಪ್ರದೀಪ, ಕುಮಾರ್ ರವರನ್ನೊಳಗೊಂಡ ತಂಡ ಕಾರ್ಯಚರಣೆಯಲ್ಲಿ ಭಾಗವಹಿಸಿ ಆರೋಪಿಗಳನ್ನು ಮತ್ತು ಕಳುವು ಮಾಲನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿರುತ್ತಾರೆ. ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯವರ ಕಾರ್ಯವನ್ನು ಶ್ಲಾಘಿಸಲಾಗಿದೆ.
ನಮ್ಮ ಮುಖ್ಯ ವರದಿಗಾರರು ಕರ್ನಾಟಕದಿಂದ,
ಜೆ .ಜಾನ್ ಪ್ರೇಮ್