ದಿನಾಂಕ.06.01.2022 ರಂದು ರಾತ್ರಿ 10.45 ಗಂಟೆ ಸಮಯದಲ್ಲಿ ಬಿಳಿಕೆರೆ ಮಾರ್ಗವಾಗಿ ಕೇರಳದ ಕೂತುಪುರಂಗೆ ತುಮಕೂರಿನ ಸನ್ ವೀಕ್ ಕಂಪೆನಿಯಿಂದ ಕಬ್ಬಿಣವನ್ನು ತುಂಬಿಕೊಂಡು ಹೋಗುತ್ತಿದ್ದ ಲಾರಿಯ ಚಾಲಕನನ್ನು ಟಯೋಟಾ ಇಟಿಯೋಸ್ ಕಾರಿನಲ್ಲಿ ಬಂದ 05 ಜನ ಅಪರಿಚಿತರು, ಲಾರಿ ಚಾಲಕನ ಬಳಿಯಿದ್ದ 10ಸಾವಿರ ನಗದು ಹಣ, ಲಾರಿ ಕೀ ಮತ್ತು ಒಂದು ರಿಯಲ್ ಮೀ ಮೊಬೈಲ್ ಫೋನ್ ಅನ್ನು ಕಿತ್ತುಕೊಂಡು ಹೋಗಿರುತ್ತಾರೆ. ಈ ಬಗ್ಗೆ ಬಿಳಿಕೆರೆ ಪೊಲೀಸ್ ಠಾಣೆ ಯಲ್ಲಿ ಪ್ರಕರಣವನ್ನು ದಾಖಲು ಮಾಡಿಕೊಂಡು ಆರೋಪಿಗಳನ್ನು ಬಂಧಿಸಿ ಮತ್ತು ಕೃತ್ಯಕ್ಕೆ ಬಳಸಿದ ಕಾರನ್ನು ವಶಪಡಿಸಿಕೊಳ್ಳಲಾಗಿರುತ್ತದೆ. ಸದರಿ ಪತ್ತೆ ಕಾರ್ಯವನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ.ಚೇತನ್.ಆರ್.ಐಪಿಎಸ್ ರವರು ಶ್ಲಾಘಿಸಿರುತ್ತಾರೆ.