2023ನೇ ಸಾಲಿನ ನವೆಂಬರ್ ತಿಂಗಳಲ್ಲಿ ಬೆಂಗಳೂರು ನಗರ ವಿದ್ಯಾರಣ್ಯಪುರ ಪೊಲೀಸರು ಬಂಧಿಸಿದ್ದರು. ಈತನು ರೂಢಿಗತ ವಿದೇಶಿ ಡಗ್ ಪೆಡ್ಲರ್ ಆಗಿರುತ್ತಾನೆ. ಈತನ ಬಳಿ ನಗದು ಹಣ ಮತ್ತು ವಿವಿಧ ಬ್ಯಾಂಕ್‌ಗಳ ಪಾಸ್‌ುಕ್, ಡೆಬಿಟ್ ಕಾರ್ಡ್‌ಗಳು ಇರುವ ಬಗ್ಗೆ ಮಾಹಿತಿಯನ್ನು ಸಿಸಿಬಿಯ ಮಾದಕದ್ರವ್ಯ ನಿಗ್ರಹ ದಳದ ಅಧಿಕಾರಿಗಳು ಸಂಗ್ರಹಿಸಿದ್ದರು. ಈ ಕುರಿತು ಪ್ರಕರಣದ ತನಿಖೆಯನ್ನು ಮುಂದುವರಿಸಿರುತ್ತಾರೆ. ತನಿಖಾ ಕಾಲದಲ್ಲಿ ಈ ವಿದೇಶಿ ಡಗ್ ಪೆಡ್ಲರ್‌ನ ಪತ್ನಿಯ ಎರಡು ಬ್ಯಾಂಕ್ ಖಾತೆಯಿಂದ Rs. 2,55,050/- ಎರಡು ಲಕ್ಷದ ಐವತ್ತೈದು ಸಾವಿರದ ಐವತ್ತು ರೂಪಾಯಿಗಳು) ಹಾಗೂ ಇತರೆ ಹೆಸರಿನಲ್ಲಿದ್ದ 05 ಬ್ಯಾಂಕ್ ಖಾತೆಗಳಲ್ಲಿದ್ದ Rs. 4.90.232/-(ನಾಲ್ಕು ಲಕ್ಷದ ತೊಂಬತ್ತು ಸಾವಿರದ ಇನ್ನೊರ ಮೂವತ್ತೇರಡು ರೂಪಾಯಿಗಳು) ಹಣದ ವಿವರಗಳನ್ನು ತನಿಖೆಯಿಂದ ದೃಡಪಡಿಸಿಕೊಂಡರು. ಎನ್.ಡಿ.ಪಿ.ಎಸ್ ಕಾಯ್ದೆ-1985 ರ ಅಧ್ಯಾಯ 5(ಎ) ರಲ್ಲಿರುವ ಕಲಂ-68(ಇ) & (ಎಫ್) ರೀತ್ಯಾ ತನಿಖಾಧಿಕಾರಿಗಳಿಗಿರುವ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ನಗದು ಹಣ ಮತ್ತು 07 ಬ್ಯಾಂಕ್ ಖಾತೆಗಳಲ್ಲಿ ಹೊಂದಿದ್ದ ಒಟ್ಟು Rs. 12,60,282/-(ಹನ್ನೇರಡು ಲಕ್ಷದ ಅರವತ್ತು ಸಾವಿರದ ಇನ್ನೂರ ಎಂಬತ್ತೆರಡು ರೂಪಾಯಿಗಳು) ಹಣವನ್ನು ದಿನಾಂಕ 18/12/2023 ರಂದು ಮುಟ್ಟುಗೋಲು ಹಾಕಿಕೊಂಡು ಆದೇಶವನ್ನು ಹೊರಡಿಸಿರುತ್ತಾರೆ.
ನಂತರ ಈ ಆದೇಶವನ್ನು ಸಕ್ಷಮ ಪ್ರಾಧಿಕಾರ ಮತ್ತು ಆಡಳಿತಾಧಿಕಾರಿಗಳಾದ SAFEMA (FOP) & NDPSA, Chennai ರವರು ಎನ್.ಡಿ.ಪಿ.ಎಸ್ ಕಾಯ್ದೆ ಅಧ್ಯಾಯ 5(ಎ) ಕಲಂ, 68(ಎಫ್)(2) ರಲ್ಲಿ ವಿಚಾರಣೆ ಕೈಗೊಂಡು, ದಿನಾಂಕ:- 11/01/2024 ರಂದು ಈ ಮುಟ್ಟುಗೋಲು ಆದೇಶವನ್ನು ಅನುಮೋದಿಸಿರುತ್ತಾರೆ.
ಈ ವಿದೇಶಿ ಡಗ್ ಪೆಡ್ಲರ್ 2018ನೇ ಇಸವಿಯಲ್ಲಿ ಭಾರತ ದೇಶಕ್ಕೆ ವೈದ್ಯಕೀಯಾ ವೀಸಾದಲ್ಲಿ ಬಂದಿರುತ್ತಾನೆ. ನಂತರ 2022ನೇ ಇಸವಿಯಲ್ಲಿ ಮಣಿಪುರ ರಾಜ್ಯದ ಓರ್ವಳನ್ನು ಮದುವೆಯಾಗಿರುತ್ತಾನೆ. ಆಕೆಯ ಹೆಸರಿನಲ್ಲಿ ಬೆಂಗಳೂರು ನಗರದಲ್ಲಿ ಎರಡು ಬ್ಯಾಂಕ್ ಖಾತೆಗಳನ್ನು ಹಾಗೂ ನಕಲಿ ದಾಖಲಾತಿಗಳನ್ನು ನೀಡಿ ಇತರರ ಹೆಸರಿನಲ್ಲಿ ಐದು ಬ್ಯಾಂಕ್ ಖಾತೆಗಳು ಸೇರಿದಂತೆ ಒಟ್ಟು ಏಳು ಬ್ಯಾಂಕ್ ಖಾತೆಗಳನ್ನು ಹೊಂದಿರುತ್ತಾನೆ. ಈ ಖಾತೆಗಳಿಂದ ಗೂಗಲ್ ಪೇ & ಸೋನ್ ಪೇ ಮೂಲಕ ಡಗ್ ಪೆಡ್ಲಿಂಗ್ ಹಣದ ವಹಿವಾಟನ್ನು ನಿರ್ವಹಿಸುತ್ತಿದ್ದ ಅಂಶಗಳು ತನಿಖೆಯಿಂದ ತಿಳಿದುಬಂದಿರುತ್ತದೆ.
ಈ ಮುಟ್ಟುಗೋಲು ಪ್ರಕ್ರಿಯೆಯನ್ನು ಮಾನ್ಯ ಹೆಚ್ಚುವರಿ ಪೊಲೀಸ್ ಆಯುಕ್ತರು. ಅಪರಾಧ, ಬೆಂಗಳೂರು ನಗರ ರವರಾದ ಡಾ|| ಚಂದ್ರಗುಪ್ತ, ಐಪಿಎಸ್ ರವರ ಮಾರ್ಗದರ್ಶನದಲ್ಲಿ, ಉಪ ಪೊಲೀಸ್ ಆಯುಕ್ತರು, ಅಪರಾಧ-2 ರವರಾದ ಶ್ರೀ. ಆರ್. ಶ್ರೀನಿವಾಸಗೌಡ. ಐಪಿಎಸ್ ರವರ ಮೇಲ್ವಿಚಾರಣೆಯಲ್ಲಿ ಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳದ ಪಿಐ ಶ್ರೀ. ಮೊಹಮ್ಮದ್ ಮುಖಾರಮ್ ಮತ್ತು ಸಿಬ್ಬಂದಿಗಳ ತಂಡವು ಯಶಸ್ವಿಯಾಗಿ ನಿರ್ವಹಿಸಿರುತ್ತಾರೆ.