ಉತ್ತರಕನ್ನಡ ಜಿಲ್ಲೆಯ ರಾಮನಗರ ಪೊಲೀಸ್ ಠಾಣೆಯ ಕ್ಯಾಸರಲಾಕ್ದ ರೈಲ್ವೆ ಸ್ಟೇಷನ ಹತ್ತಿರ ನಡೆದ ಕೋರ್ ಕೇಬಲ್ ಕಳ್ಳತನ ಪ್ರಕರಣದಲ್ಲಿ ಆರೋಪಿತರ ಮತ್ತು ಕಳ್ಳತನ ಆಗಿರುವ ಕೇಬಲ್ಗ ಳನ್ನು ಪತ್ತೆಗಾಗಿ ಮಾನ್ಯ ಪೊಲೀಸ್ ಅಧೀಕ್ಷಕರು ಉತ್ತರ ಕನ್ನಡ ಶ್ರೀ ಶಿವಪ್ರಕಾಶ ದೇವರಾಜು ಐ.ಪಿ.ಎಸ್, ಮಾನ್ಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಉತ್ತರಕನ್ನಡ ಶ್ರೀ ಬದ್ರಿನಾಥ ಎಸ್, ಮಾನ್ಯ ಪೊಲೀಸ್ ಉಪಾಧೀಕ್ಷಕರು ದಾಂಡೇಲಿ ಉಪ ವಿಭಾಗ ಶ್ರೀ ಕೆ.ಎಲ್ ಗಣೇಶ ರವರ ಮಾರ್ಗದರ್ಶನದಲ್ಲಿ ಸಿ.ಪಿ.ಐ ದಾಂಡೇಲಿ ಪ್ರಭಾರ ಜೋಯಿಡಾ ಶ್ರೀ ಪ್ರಭು ಆರ್ ಗಂಗೆನಹಳ್ಳಿ ಮುಂದಾಳತ್ವದಲ್ಲಿ, ರಾಮನಗರ ಪೊಲೀಸ್ ಠಾಣೆಯ ಪಿ.ಎಸ್.ಐ(ಕಾ&ಸು)ಕಿರಣಕುಮಾರ ಪಾಟೀಲ್, ಪಿ.ಎಸ್.ಐ(ಅಪರಾಧ) ಎಲ್.ಎಲ್ ಪೂಜಾರಿ, ಪೊಲೀಸ್ ಸಿಬ್ಬಂದಿಗಳ ತಂಡವು ರಾಮನಗರ ಪೊಲೀಸ್ ಠಾಣಾ ಗುನ್ನಾ ನಂ : 44/2021 ಕಲಂ : 379 ಐಪಿಸಿ ಪ್ರಕರಣದಲ್ಲಿ ಈ ಕೆಳಗಿನ ಆಪಾದಿತರಾದ
1) ಯಲ್ಲಪ್ಪ ತಂದೆ ಬಸವಣ್ಣಿ ಕುಪ್ಪನ್ನವರ ಪ್ರಾಯ-38 ವರ್ಷ, ರೈಲ್ವೆ ಉದ್ಯೋಗಿ, ಸಾ|| ದಾಸನಟ್ಟಿ ತಾ|| ಗೋಕಾಕ ಜಿ|| ಬೆಳಗಾವಿ ಹಾಲಿ ಮನೆ ನಂ : 26/ಎ, ರೈಲ್ವೆ ಕ್ವಾಟ್ರಸ್, ಕ್ಯಾಸಲರಾಕ್ ತಾ|| ಜೋಯಿಡಾ
2) ಅಜಯ ತಂದೆ ಬಬನ ಕಂಜರಬಾಟ ಪ್ರಾಯ-30 ವರ್ಷ ಕೂಲಿಕೆಲಸ ಸಾ|| ಗಾಂಧಿನಗರ, ದಾಂಡೇಲಿ
3) ಸೋನು ತಂದೆ ಅನೀಲ ಕಂಜರಬಾಟ ಪ್ರಾಯ-25 ವರ್ಷ ಕೂಲಿಕೆಲಸ ಸಾ|| ಗಾಂಧಿನಗರ, ದಾಂಡೇಲಿ
4) ಜಿತೇಂದ್ರ ತಂದೆ ರಮೇಶ ಮಾಸ್ರಿ ಪ್ರಾಯ-38 ವರ್ಷ ಕೂಲಿಕೆಲಸ ಸಾ|| ಗಾಂಧಿನಗರ, ದಾಂಡೇಲಿ
5) ದೀಪಕ ತಂದೆ ಸೂರಜ ಕಂಜರಬಾಟ ಪ್ರಾಯ-32 ವರ್ಷ ಕೂಲಿಕೆಲಸ ಸಾ|| ಗಾಂಧಿನಗರ, ದಾಂಡೇಲಿ
6) ಜಿಗನು ತಂದೆ ಮುನ್ಸಿ ಕಂಜರಬಾಟ ಪ್ರಾಯ-45 ವರ್ಷ ಕೂಲಿಕೆಲಸ ಸಾ|| ಗಾಂಧಿನಗರ, ದಾಂಡೇಲಿ ಇವರು ಸುಮಾರು 15 ಲಕ್ಷ ರೂಪಾಯಿ ಮೌಲ್ಯದ ಕೇಬಲನ್ನು ಕಳ್ಳತನ ಮಾಡಿದವರನ್ನು ದಸ್ತಗಿರಿ ಮಾಡಿ, ಅಪಾದಿತರಿಂದ ಸುಟ್ಟು ತೆಗೆದ ಒಟ್ಟು 470 ಕೆ.ಜಿ ತಾಮ್ರದ ತಂತಿಯನ್ನು ವಶಪಡಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ.
ರಾಮನಗರ ಪೊಲೀಸ್ ಠಾಣೆಯ ಅಧಿಕಾರಿ ಹಾಗೂ ಸಿಬ್ಬಂದಿಗಳ ಈ ಪತ್ತೆ ಕಾರ್ಯವನ್ನು ಮಾನ್ಯ ಪೊಲೀಸ್ ಅಧೀಕ್ಷಕರು ಉ.ಕ. ಜಿಲ್ಲೆ ಕಾರವಾರ ಹಾಗೂ ಮಾನ್ಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಉ.ಕ. ಜಿಲ್ಲೆ ಕಾರವಾರ ರವರು ಶ್ಲಾಘಿಸಿರುತ್ತಾರೆ.
ನಮ್ಮ ಮುಖ್ಯ ವರದಿಗಾರರು ಕರ್ನಾಟಕದಿಂದ,
ಜೆ .ಜಾನ್ ಪ್ರೇಮ್