ಆರ್.ಎಂ.ಸಿ.ಯಾರ್ಡ್ ಪೊಲೀಸರ ಕಾರ್ಯಾಚರಣೆ.
ಮೊಬೈಲ್ ಫೋನ್ ಮತ್ತು ನಗದು ಹಣವನ್ನು ದರೋಡೆ ಮಾಡಿದ್ದ 8 ಜನ ವ್ಯಕ್ತಿಗಳ ಬಂಧನ.
ಆರ್.ಎಂ.ಸಿ.ಯಾರ್ಡ್ ಪೊಲೀಸ್ ವ್ಯಾಪ್ತಿಯಲ್ಲಿ ಪಿರಾದಿಯು ತನ್ನ ಸ್ನೇಹಿತರೊಂದಿಗೆ ದಿನಾಂಕ:13-11-2023 ರಂದು ಬೆಳಗಿನ ಜಾವ 3-00 ಗಂಟೆ ಸಮಯದಲ್ಲಿ ಊಟ ಮಾಡಿಕೊಂಡು ಮನೆಗೆ ವಾಪಸು ಹೋಗಲು ನಡೆದುಕೊಂಡು ತುಮಕೂರು ರಸ್ತೆಯ ಎ.ಪಿ.ಎಂ.ಸಿ.ಯಾರ್ಡ್‌ನ 1ನೇ ಗೇಟ್ ರಸ್ತೆಯ ಕಾಶಿವಿಶ್ವನಾಥ ದೇವಸ್ಥಾನದ ಮುಂಭಾಗಕ್ಕೆ ಬಂದು ಕ್ಯಾಬ್ ಬುಕ್ ಮಾಡಿ, ಕ್ಯಾಬ್‌ಗೆ ಕಾಯುತ್ತಿರುವಾಗ ಕೆ.ಟಿ.ಎಂ.ಬೈಕ್ ಮತ್ತು ಗೂಡ್ಸ್ ವಾಹನದಲ್ಲಿ ಸುಮಾರು 9-10 ಜನ ಅಪರಿಚಿತ ವ್ಯಕ್ತಿಗಳು ಪಿರಾದಿಯ ಬಳಿ ಬಂದು ಪಿರಾದಿಗೆ ಮರದ ದೊಣ್ಣೆಯಿಂದ ಬೆದರಿಸಿ ಪಿತ್ಯಾದಿ ಮತ್ತು ಅವರ ಜೊತೆಯಲ್ಲಿದ್ದವರಿಂದ 2 ಮೊಬೈಲ್ ಫೋನ್‌ಗಳನ್ನು ಹಾಗೂ ಕ 5,200/- ನಗದು ಹಣವನ್ನು ಕಿತ್ತುಕೊಂಡು, ಅದರಲ್ಲಿ ಒಬ್ಬರ ತಲೆಗೆ ಮರದ ದೊಣ್ಣೆಯಿಂದ ಹೊಡೆದು ರಕ್ತ ಗಾಯ ಪಡಿಸಿ ಹೋಗಿರುತ್ತಾರೆ. ಗಾಯಾಳುವನ್ನು ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕ್ಕಿತ್ಸೆಗೆ ಒಳರೋಗಿಯಾಗಿ ದಾಖಲಿಸಿರುತ್ತಾರೆ. ಈ ಸಂಬಂಧ ಆರ್.ಎಂ.ಸಿ.ಯಾರ್ಡ್ ಪೊಲೀಸ್ ಠಾಣೆಯಲ್ಲಿ ದರೋಡೆ ಪ್ರಕರಣ ದಾಖಲಾಗಿರುತ್ತದೆ.
ಈ ಪ್ರಕರಣದಲ್ಲಿ ತನಖೆ ಕೈಗೊಂಡ ಪೊಲೀಸರು ಈ ಕೃತ್ಯದಲ್ಲಿ ಭಾಗಿಯಾಗಿದ್ದ 5 ಜನ ಆರೋಪಿತ ವ್ಯಕ್ತಿಗಳನ್ನು ವಶಕ್ಕೆ ಪಡೆದುಕೊಂಡು ಹೆಚ್ಚಿನ ವಿಚಾರಣೆಗೊಳಪಡಿಸಿ ಉಳಿದ ಆರೋಪಿಗಳ ಬಗ್ಗೆ ಮಾಹಿತಿ ಕಲೆ ಹಾಕಿ, ದಿನಾಂಕ:22-II-2023 ರಂದು 3 ಜನ ಆರೋಪಿತ ವ್ಯಕ್ತಿಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಪ್ರಕರಣದಲ್ಲಿ ಒಟ್ಟು 8 ಜನ ಆರೋಪಿಗಳನ್ನು ದಸ್ತಗಿರಿ ಮಾಡಿ, ಅವರುಗಳಿಂದ 1-ಮೊಬೈಲ್ ಫೋನ್ ಮತ್ತು 5,200/- ನಗದು ಹಣ ಹಾಗೂ ಕೃತ್ಯಕ್ಕೆ ಬಳಸಿದ್ದ ಗೂಡ್ಸ್ ವಾಹನ ಮತ್ತು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಪ್ರಕರಣದಲ್ಲಿ ಗಾಯಾಳುವಾಗಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿಯು ದಿನಾಂಕ:22-11-2023 ರಂದು ಮಧ್ಯಾಹ್ನ ಗಾಯಾಳು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾನೆ.
ಈ ಪ್ರಕರಣದಲ್ಲಿ ಹೆಚ್ಚುವರಿಯಾಗಿ ದರೋಡೆ ಪ್ರಕರಣದೊಂದಿಗೆ, ಕೊಲೆ ಪ್ರಕರಣ ಕಲಂಗಳನ್ನು ಅಳವಡಿಸಿಕೊಂಡು ತನಿಖೆ ಮುಂದುವರೆಸಿದ್ದು, ಈ ಪ್ರಕರಣದಲ್ಲಿ ಇಬ್ಬರು ವ್ಯಕ್ತಿಗಳು ತಲೆಮರೆಸಿಕೊಂಡಿದ್ದು, ಅವರುಗಳ ಪತ್ತೆ ಕಾರ್ಯ ಪ್ರಗತಿಯಲ್ಲಿದೆ.
ಈ ಪ್ರಕರಣದ ಪತ್ತೆ ಕಾರ್ಯವನ್ನು ಉತ್ತರ ವಿಭಾಗ ಉಪ ಪೊಲೀಸ್ ಆಯುಕ್ತರಾದ ಶ್ರೀ. ಸೈದುಲು ಅಡಾವತ್ ಐ.ಪಿ.ಎಸ್. ರವರ ಮಾರ್ಗದರ್ಶನದಲ್ಲಿ ಶ್ರೀ. ಸದಾನಂದ ಎ ತಿಪ್ಪಣ್ಣವರ್, ಸಹಾಯಕ ಪೊಲೀಸ್ ಆಯುಕ್ತರು ಪೀಣ್ಯ ಉಪ ವಿಭಾಗ ರವರ ನೇತೃತ್ವದಲ್ಲಿ, ಆರ್.ಎಂ.ಸಿ.ಯಾರ್ಡ್ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಶ್ರೀ. ಸುರೇಶ್ ಪಿ. ಮತ್ತು ಸಿಬ್ಬಂದಿಯವರುಗಳು ಆರೋಪಿತ ವ್ಯಕ್ತಿಗಳನ್ನು ದಸ್ತಗಿರಿ ಮಾಡುವಲ್ಲಿ ಯಶಸ್ವಿಯಾಗಿರುತ್ತಾರೆ.