ವೈಯಾಲಿ ಕಾವಲ್ ಪೊಲೀಸ್ ಠಾಣಾ ಸರಹದ್ದಿನಲ್ಲಿ, ದಿನಾಂಕ: 07/07/2023 ರಂದು ಒಬ್ಬ ಬ್ಯಾಂಕ್ ಉದ್ಯೋಗಿ ಮಹಿಳೆಯು ಕೆಲಸಕ್ಕೆಂದು ಬೆಳಗ್ಗೆ ನಡೆದುಕೊಂಡು ಹೋಗುತ್ತಿರುವಾಗ ಇಬ್ಬರು ಅಪರಿಚಿತ ವ್ಯಕ್ತಿಗಳು ಒಂದು ದ್ವಿಚಕ್ರ ವಾಹನದಲ್ಲಿ ಹಿಂದಿನಿಂದ ಅವರ ಹತ್ತಿರ ಬಂದು ಸದರಿ ದ್ವಿಚಕ್ರ ವಾಹನದ ಹಿಂಬಾಗದಲ್ಲಿ ಕುಳಿತಿದ್ದ ವ್ಯಕ್ತಿಯು ಏಕಾಏಕಿ ಅವರ ಕೈಯಲಿದ್ದ ಒಪ್ಪೋ ಮೊಬೈಲ್ ಪೋನ್ ನ್ನು ಕಿತ್ತುಕೊಂಡು ಅದೇ ದ್ವಿಚಕ್ರ ವಾಹನದಲ್ಲಿ ವೇಗವಾಗಿ ಹೊರಟು ಹೋಗಿರುತ್ತಾರೆ. ಅವರು ಕಿತ್ತುಕೊಂಡು ಹೋಗಿರುವ ಅವರ ಓಪ್-ಎ ಮೊಬೈಲ್ ಫೋನ್ ಬೆಲೆ ಸುಮಾರು ರೂ.15,000/- ಆಗಿರುತ್ತದೆ. ಅವರಿಗೆ ಗಾಬರಿಯಲ್ಲಿ ಯಾವ ದ್ವಿಚಕ್ರ ವಾಹನ ಎಂದು ಗುರುತಿಸಲು ಆಗಿರುವುದಿಲ್ಲ. ಈ ಸಂಬಂಧವಾಗಿ ವೈಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ ರಾಬರಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುತ್ತೆ.
ತನಿಖೆ ಕೈಗೊಂಡ ಪೊಲೀಸರು ಲಭ್ಯ ಸಾಕ್ಷಾಧಾರಗಳಿಂದ ಹಾಗೂ ಭಾತ್ಮಿದಾರರಿಂದ ಪಡೆದ ಮಾಹಿತಿ ಮೇರೆಗೆ ಸದರಿ ಪ್ರಕರಣದಲ್ಲಿ ಮೊಬೈಲ್ ಮೊನ್ ಕಿತ್ತುಕೊಂಡು ಹೋದ ಇಬ್ಬರು ಆಸಾಮಿಗಳಲ್ಲಿ ಒಬ್ಬ ಕಾನೂನು ಸಂರ್ಘಷಕ್ಕೊಳಗಾದ ಬಾಲಕನಾಗಿದ್ದು, ಆತನನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ಆತನು ನೀಡಿದ ಮತ್ತೊಬ್ಬ ಆಸಾಮಿಯ ವಿವರವನ್ನು ತಿಳಿಸಿದ ಮೇರೆಗೆ, ವಿಶೇಷ ತಂಡವನ್ನು ರಚಿಸಿಕೊಂಡು ಪತ್ತೆ ಹಚ್ಚುವ ಕಾರ್ಯದಲ್ಲಿ ತೊಡಗಿದ್ದಾಗ, ಶೇಷಾದ್ರಿಪುರ ಪೊಲೀಸ್ ಇನ್ಸಪೆಕ್ಟರ್ ಹಾಗೂ ಸಿಬ್ಬಂದಿಗಳು ಬೆಳಗಿನ ಜಾವದ ವಿಶೇಷ ಗಸ್ತು ಕರ್ತವ್ಯದಲ್ಲಿರುವಾಗ ಸದರಿ ಆರೋಪಿಯು ಪುನಃ ಕೃತ್ಯವೆಸಗಲು ಬಂದಿದ್ದು, ಆತನನ್ನು ವಶಕ್ಕೆ ಪಡೆದುಕೊಳ್ಳಲು ಹೋದಾಗ ಸಿಬ್ಬಂದಿಗಳ ಮೇಲೆ ಹಲ್ಲೆ ಮಾಡಿದ್ದು, ಕೂಡಲೆ ದಸ್ತಗಿರಿ ಮಾಡಿ ಆತನನ್ನು ಬಂಧಿಸುವಲ್ಲಿ ವಿಶೇಷ ತಂಡ ಯಶಸ್ವಿಯಾಗಿರುತ್ತೆ.
ದಸ್ತಗಿರಿ ಮಾಡಿದ ಆಸಾಮಿಯನ್ನು ಹೆಚ್ಚಿನ ವಿಚಾರಣೆಗೊಳಪಡಿಸಿದಾಗ ಆತನು ಹೆಬ್ಬಾಳ ಪೊಲೀಸ್ ಠಾಣೆಯ ಎಂಒ ಆಸಾಮಿಯಾಗಿದ್ದು, ಆತನು ನೀಡಿದ ಮಾಹಿತಿ ಮೇರೆಗೆ ಹೆಬ್ಬಾಳ-02, ಶ್ರೀರಾಮ್‌ಪುರ ಪೊಲೀಸ್ ಠಾಣೆಯ-೧ ಒಟ್ಟು ಹಳೆಯ 03 ಪಕರಣಗಳು, ಮತ್ತು ರಾಜಾಜೀನಗರ, ಆಶೋಕ್‌ನಗರ ಪೊಲೀಸ್ ಠಾಣೆಯ ತಲಾ 02 ಪ್ರಕರಣಗಳು ಹಾಗೂ ವೈಯಾಲಿ ಕಾವಲ್, ಸುಬ್ರಮಣ್ಯ ನಗರ ಪೊಲೀಸ್ ಠಾಣೆಯ ತಲಾ 11 ಪ್ರಕರಣಗಳು ಸೇರಿದಂತೆ ಒಟ್ಟು 06 ಹೊಸ ಪ್ರಕರಣಗಳು ಪತ್ತೆಯಾಗಿರುತ್ತದೆ.
ಬೆಂಗಳೂರು ನಗರ ಕೇಂದ್ರ ವಿಭಾಗದ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ, ವೈಯಾಲಿಕಾವಲ್
ಪೊಲೀಸ್ ಇನ್ಸ್ಪೆಕ್ಟರ್ ಶ್ರೀ. ಶ್ರೀನಿವಾಸ್.ಎಂ.ಎಸ್. ಶೇಷಾದ್ರಿಪುರ ಪೊಲೀಸ್ ಇನ್ಸಪೆಕ್ಟರ್ ಶ್ರೀ.ಹೇಮಂತ್ ಕುಮಾರ್.ಎಸ್ ಹಾಗೂ ಹೈಗೊಂಡ್ ಪೊಲೀಸ್ ಇನ್ಸಪೆಕ್ಟರ್ ಶ್ರೀಶಿವಸ್ವಾಮಿ ಸಿ.ಬಿ ರವರ ವಿಶೇಷ ತಂಡ ಪ್ರಕರಣವನ್ನು ಭೇದಿಸುವಲ್ಲಿ
ಯಶಸ್ವಿಯಾಗಿರುತ್ತಾರೆ.
ಈ ಉತ್ತಮ ಕಾರ್ಯವನ್ನು ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಶ್ರೀ. ಬಿ.ದಯಾನಂದ ಮತ್ತು ಪಶ್ಚಿಮ ವಿಭಾಗದ ಅಪರ ಪೊಲೀಸ್ ಆಯುಕ್ತರಾದ ಶ್ರೀ. ಎನ್.ಸತೀಶ್ ಕುಮಾರ್, ರವರು ಶ್ಲಾಘಿಸಿರುತ್ತಾರೆ.