ಮಾನ್ಯ ಗೃಹ ಸಚಿವರಾದ ಡಾ.ಜಿ.ಪರಮೇಶ್ವರ್ ಜಿ ರವರು ಇಂದು ಇಂದು ಮೈಸೂರಿನಲ್ಲಿ ದಕ್ಷಿಣ ವಲಯ ಪೊಲೀಸ್ ಅಧಿಕಾರಿಗಳ ಮತ್ತು ಮೈಸೂರು ಆಯುಕ್ತಾಲಯದ ಇಲಾಖಾ ಮಟ್ಟದ ಸಭೆಯನ್ನು ನಡೆಸಿ ಇಲಾಖೆಯಲ್ಲಿ ಗುಣಾತ್ಮಕ ಬದಲಾವಣೆ ಗಳನ್ನು ಅಳವಡಿಸಿಕೊಳ್ಳಲು ಮತ್ತು ಇಲಾಖೆಯು ಜನಸ್ನೇಹಿಯನ್ನಾಗಿಸಲು ಮೈಸೂರು ನಗರ & ದಕ್ಷಿಣ ವಲಯವು ಮಾದಕ ವಸ್ತು ಮುಕ್ತ, ಪ್ರಕರಣಗಳ ತ್ವರಿತ ವಿಲೇವಾರಿ, ಹಾಗೂ ಉತ್ತಮ ಸಂಚಾರ ವ್ಯವಸ್ಥೆಯ ಜಾಗೃತಿ ಮೂಡಿಸಲು ಅನುಸರಿಸಬೇಕಾದ ಕ್ರಮಗಳ ಕುರಿತು ಸೂಚನೆ ನೀಡಿದರು.

ಸಭೆಯಲ್ಲಿ ದಕ್ಷಿಣ ವಲಯ ಐಜಿಪಿ ಬೋರಲಿಂಗಯ್ಯ, ಆಯುಕ್ತ ರಮೇಶ ಬಾನೋಟ್ ಮತ್ತು ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.
