ಜಿಲ್ಲಾ ಪೊಲೀಸ್ ಅಧೀಕ್ಷಕರಾದರಾದ ಶ್ರೀ.ಚೇತನ್.ಆರ್.ಐಪಿಎಸ್ ರವರ ಮಾರ್ಗದರ್ಶನದಂತೆ ದಿನಾಂಕ 14-09-2021 ಮೈಸೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಸೈಂಟ್ ಅರ್ನಾಲ್ಡ್ ಶಾಲೆಯ ವಿದ್ಯಾರ್ಥಿಗಳಿಗಾಗಿ \”ತೆರೆದ ಮನೆ \” ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು . ಡಿವೈಎಸ್ಪಿ ಮೈಸೂರು ಗ್ರಾಮಾಂತರ ಶ್ರೀ. ಸುಮಿತ್ ರವರು ವಿದ್ಯಾರ್ಥಿಗಳಿಗೆ ಸೈಬರ್ ಅಪರಾಧ, ಮಾದಕ ವಸ್ತುಗಳ ಬಳಕೆ ಮಾಡದಿರುವ ಬಗ್ಗೆ, ಬಾಲ್ಯ ವಿವಾಹ ತಡೆ, ಬ್ಯಾಂಕ್ ವಂಚನೆಗಳ ಬಗ್ಗೆ ಅರಿವು ಮೂಡಿಸಿ ತುರ್ತು ಸಮಯದಲ್ಲಿ ನಮ್ಮ112 ಸಹಾಯವಾಣಿಯನ್ನು ಬಳಸಿಕೊಳ್ಳುವಂತೆ ತಿಳಿಸಿದರು.

ನಂತರ ಠಾಣಾ ಒಳಾವರಣಕ್ಕೆ ಕರೊದೊಯ್ದು ಠಾಣೆಯಲ್ಲಿ ಅಧಿಕಾರಿ ಸಿಬ್ಬಂದಿಗಳ ಕರ್ತವ್ಯದ ವಿಧಾನದ ಬಗ್ಗೆ ಹೇಳಿ, ಠಾಣೆಗೆ ಬಂದಾಗ ಸಹಾಯಕ್ಕಾಗಿ ಯಾರನ್ನು ಭೇಟಿ ಮಾಡಬೇಕು ಎಂಬಿತ್ಯಾದಿಯಾಗಿ ತಿಳಿಸಿದರು. ದಕ್ಷಿಣ ಪೊಲೀಸ್ ಠಾಣಾ ಪಿಐ ಶ್ರೀ.ಶಶಿಕುಮಾರ್ ರವರು , ಇತರ ಅಧಿಕಾರಿ ಸಿಬ್ಬಂದಿಗಳು ಹಾಜರಿದ್ದರು. ಸೈಂಟ್ ಅರ್ನಾಲ್ಡ್ ಶಾಲೆಯ ವಿದ್ಯಾರ್ಥಿಗಳು ಬಹಳ ಕೌತುಕದಿಂದ ಭಾಗವಹಿಸಿ , ಪೊಲೀಸರ ಕರ್ತವ್ಯದ ವಿಧಾನದ ಬಗ್ಗೆ ತಿಳಿದುಕೊಂಡರು.
ನಮ್ಮ ಮುಖ್ಯ ವರದಿಗಾರರು ಕರ್ನಾಟಕದಿಂದ,
