08:08.12.2023 ರಂದು ಓರ್ವ ಮಹಿಳೆ ಕೆಲಸ ಮುಗಿಸಿಕೊಂಡು ರಾತ್ರಿ ಸಮಯದಲ್ಲಿ ಇಂದಿರಾನಗರ ಮೇಟ್ರೋ ಸ್ಟೇಷನ್‌ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವಾಗ, ಇಂದಿರಾನಗರದ 6ನೇ ಮೈನ್, ಬಳಿ ಯಾರೋ ಅಪರಿಚಿತ ವ್ಯಕ್ತಿ ಆಕೆಯ ಹಿಂಭಾಗದಿಂದ ಬಂದು, ಕತ್ತಿನಲ್ಲಿದ್ದ ಒಂದು ಚಿನ್ನದ ಚೈನನ್ನು ಕಿತ್ತುಕೊಂಡು ಹೋಗಿರುತ್ತಾರೆಂದು, ಕೊಟ್ಟ ದೂರಿನ ಮೇರೆಗೆ ಇಂದಿರಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ದಾಖಲಾಗಿರುತ್ತದೆ.
ಪ್ರಕರಣದ ತನಿಖೆಯನ್ನು ಕೈಗೊಂಡ ಇಂದಿರಾನಗರ ಪೊಲೀಸರು, ತನಿಖೆಯ ಸಮಯದಲ್ಲಿ ಮೂರು ವ್ಯಕ್ತಿಗಳನ್ನು ದಿನಾಂಕ:17.02.2024 ರಂದು ವಶಕ್ಕೆ ಪಡೆದುಕೊಂಡಿರುತ್ತಾರೆ. ವಶಕ್ಕೆ ಪಡೆದ ವ್ಯಕ್ತಿಗಳನ್ನು ಹೆಚ್ಚಿನ ವಿಚಾರಣೆಗೊಳಪಡಿಸಿದಾಗ ಅವರುಗಳು ನೀಡಿದ ಮಾಹಿತಿ ಮೇರೆಗೆ, 75 ಗ್ರಾಂ ತೂಕದ ಚಿನ್ನದ ಸರಗಳು ಮೌಲ್ಯ ಕ್ಷ 4.20,000/- (ನಾಲ್ಕು ಲಕ್ಷದ ಇಪ್ಪತ್ತುಸಾವಿರ ರೂಪಾಯಿ) ಹಾಗೂ 2 ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ.
ಈ ಪ್ರಕರಣದ ತನಿಖೆಯಿಂದ ಇಂದಿರಾನಗರ ಪೊಲೀಸ್ ಠಾಣೆಯ-01 ಸರಗಳ್ಳತನ ಪ್ರಕರಣ, 2-ದ್ವಿಚಕ್ರ ವಾಹನ ಕಳವು ಪ್ರಕರಣ ಮತ್ತು ಬಾಣಸವಾಡಿ ಪೊಲೀಸ್ ಠಾಣೆಯ-01 ಸರಗಳ್ಳತನ ಪ್ರಕರಣ, ಜೆ.ಬಿ.ನಗರ ಪೊಲೀಸ್ ಠಾಣೆಯ-01 ಸರಗಳ್ಳತನ ಪ್ರಕರಣ, ಮಾರತಹಳ್ಳಿ ಪೊಲೀಸ್ ಠಾಣೆಯ-01 ಸರಗಳ್ಳತನ ಪ್ರಕರಣ ಹಾಗೂ ಮಹದೇವಪುರ ಪೊಲೀಸ್ ಠಾಣೆಯ-01 ದ್ವಿಚಕ್ರ ವಾಹನ ಕಳವು ಪ್ರಕರಣ, ಒಟ್ಟು 04 ಸರಗಳ್ಳತನ ಪ್ರಕರಣ ಮತ್ತು 03 ದ್ವಿಚಕ್ರ ವಾಹನ ಕಳವು ಪ್ರಕರಣ ಪತ್ತೆಯಾಗಿರುತ್ತವೆ.
ಈ ಕಾರ್ಯಾಚರಣೆಯನ್ನು ಪೂರ್ವ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಶ್ರೀ.ಡಿ.ದೇವರಾಜ್, ಐಪಿಎಸ್ ರವರ ಮಾರ್ಗದರ್ಶನದಲ್ಲಿ, ಹಲಸೂರು ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀ.ಟಿ.ರಂಗಪ್ಪ ರವರ ನೇತೃತ್ವದಲ್ಲಿ, ಇಂದಿರಾನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಹಾಗೂ ಅಧಿಕಾರಿ/ಸಿಬ್ಬಂದಿಗಳು ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿರುತ್ತಾರೆ.