ದಾವಣಗೆರೆ :05.06.2023 ರಂದು ಡಾ. ತಿಪ್ಪೇಸ್ವಾಮಿ, ವಾಸ- ಡಾಲರ್ ಕಾಲೋನಿ ಶಾಮನೂರು ದಾವಣಗೆರೆ ರವರು ಠಾಣೆಗೆ ಹಾಜರಾಗಿ ದಿನಾಂಕ:03.06.2023 ರಂದು ನಮ್ಮ ಮನೆಯ ಬಾಗಿಲು ಹಾಕಿಕೊಂಡು ಬೆಂಗಳೂರಿಗೆ ಹೋಗಿದ್ದು, ದಿನಾಂಕ: 04.06.2023 ರಂದು ವಾಪಸ್ಸು ಒಂದು ನೋಡಲಾಗಿ ಯಾರೋ ಕಳ್ಳರು ನಮ್ಮ ಮನೆಯ ಬಾಗಿಲನ್ನು ಹೊಡೆದು ಒಟ್ಟು 31,34582/-ರೂ ಬೆಲೆ ಬಾಳುವ ಬೆಳ್ಳಿ ಬಂಗಾರ ಮತ್ತು ಇತರೆ ವಸ್ತುಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ದೂರನ್ನು ನೀಡಿದ್ದು, ಈ ಬಗ್ಗೆ ವಿದ್ಯಾನಗರ ಪೊಲೀಸ್ ಠಾಣೆ ಗುನ್ನೆ ನಂ:124/2023 ಕಲಂ 454 457 380 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತೆ.
ಪ್ರಕರಣದಲ್ಲಿ ಕಳುವಾದ ಮಾಲು ಮತ್ತು ಆರೋಪಿತರನ್ನು ಪತ್ತೆ ಮಾಡಲು ಹೆಚ್ಚುವರಿ ಪೊಲೀಸ್ ಅಧೀಕ್ಷಕರವರಾದ ಶ್ರೀ ಆರ್.ಬಿ ಬಸರಗಿ ರವರು ಮತ್ತು ದಾವಣಗೆರೆ ನಗರ ಉಪ ವಿಭಾಗದ ಡಿವೈಎಸ್‌ಪಿ ಶ್ರೀ ಮಲ್ಲೇಶ್ ದೊಡ್ಡಮನಿ ರವರ ಮಾರ್ಗದರ್ಶನದಲ್ಲಿ ತನಿಖಾಧಿಕಾರಿ ಶ್ರೀಮತಿ ಪ್ರಭಾವತಿ ಸಿ ಶೇತಸನದಿ ಪೊಲೀಸ್ ಇನ್ಸ್‌ಪೆಕ್ಟರ್ ವಿದ್ಯಾನಗರ ಪೊಲೀಸ್ ಠಾಣೆ, ಶ್ರೀ ಮಂಜುನಾಥ ಕಲ್ಲದೇವರು ಪಿ.ಎಸ್.ಐ ದಾವಣಗೆರೆ ರವರ ನೇತೃತ್ವದಲ್ಲಿ ವಿದ್ಯಾನಗರ ಪೊಲೀಸ್ ಠಾಣೆ ಸಿಬ್ಬಂದಿಯನ್ನೊಳಗೊಂಡ ತಂಡವನ್ನು ರಚಿಸಿದ್ದು. ಸದರಿ ತಂಡವು ಹಾವೇರಿ ಜಿಲ್ಲೆ ರಾಣೇಬೆನ್ನೂರು ಗೋವಿಂದ ಬಡಾವಣೆಯ 1] ಶಿವರಾಜ ಲಮಾಣಿ ( ರಾಜಿ, 26 ವರ್ಷ, 2] ಮಾರುತಿ, 25 ವರ್ಷ, 3] ಸುನೀಲ್ ಬಿ ಲಮಾಣಿ, 22 ವರ್ಷ, 4] ಮನೋಜ್ ಡಿ ಲಮಾಣಿ, 25 ವರ್ಷ, 5] ಅಭಿಷೇಕ್ @ ಅಭಿ, 22 ವರ್ಷ, 6] ಮಾಲತೇಶ್, 25 ವರ್ಷ ರವರನ್ನು ಪತ್ತೆ ಮಾಡಿ ಆರೋಪಿತರಿಂದ ಕಳ್ಳತನ ಮಾಡಿದ್ದ 23,35,200/-ರೂ ಬೆಲೆ ಬಾಳುವ 417ಗ್ರಾಂ ಬಂಗಾರದ ಆಭರಣ, 60,000/-ರೂ ಬೆಲೆ ಬಾಳುವ 328ಗ್ರಾಂ ಬೆಳ್ಳಿಯ ಆಭರಣ ಮತ್ತು ಕೃತ್ಯಕ್ಕೆ ಬಳಿಸಿದ್ದ 1,80,000/-ರೂ ಬೆಲೆ ಬಾಳುವ 02 ಬೈಕ್‌ಗಳನ್ನು ಅಮಾನತ್ತು ಪಡಿಸಿಕೊಂಡಿದ್ದು, ತನಿಖೆ ಮುಂದುವರೆದಿರುತ್ತದೆ.
ಮೇಲ್ಕಂಡ ಪ್ರಕರಣದಲ್ಲಿ ಆರೋಪಿತರನ್ನು ಪತ್ತೆ ಮಾಡಿದ ದಾವಣಗೆರೆ ನಗರ ಉಪ ವಿಭಾಗದ ಡಿವೈಎಸ್‌ಪಿ ಶ್ರೀ ಮಲ್ಲೇಶ್ ದೊಡ್ಡಮನಿ ರವರನ್ನು, ತನಿಖಾಧಿಕಾರಿಯಾದ ಶ್ರೀಮತಿ ಪ್ರಭಾವತಿ ಸಿ ಶೇತಸನದಿ ಪೊಲೀಸ್ ಇನ್ಸ್‌ಪೆಕ್ಟರ್ ವಿದ್ಯಾನಗರ ಠಾಣೆ, ಶ್ರೀಮತಿ ರೇಣುಕಾ ಜಿ.ಎಂ ವಿದ್ಯಾನಗರ ಪೊಲೀಸ್ ಠಾಣೆ, ಶ್ರೀ ಮಂಜುನಾಥ ಕಲ್ಲದೇವರು ಪಿ.ಎಸ್.ಐ ಹಾಗೂ ಸಿಬ್ಬಂದಿಗಳಾದ ಆನಂದ ಮುಂದಲಮನಿ, ಭೋಜಪ್ಪ ಕಿಚಡಿ, ಯೋಗೀಶ್ ನಾಯ್ಕ, ಮಂಜಪ್ಪಟಿ, ಗೋಪಿನಾಥ ಬಿ ನಾಯ್ಕ, ಲಕ್ಷ್ಮಣ್ ಆರ್, ನಾಗರಾಜ, ಮಂಜುನಾಥ ಬಿ.ವಿ. ರಾಮಚಂದ್ರಪ್ಪ, ಅಜಯ್, ಮಂಜುನಾಥ ಹಾಗೂ ಅಕ್ತರ್, ನಾಗರಾಜ ಕುಂಬಾರ್, ಮಾರುತಿ, ವಿರೇಶ್, ರಾಘವೇಂದ್ರ, ಶಾಂತರಾಜ್ ರವರುಗಳನ್ನು ಮಾನ್ಯ ಪೊಲೀಸ್ ಅಧೀಕ್ಷಕರವರಾದ ಶ್ರೀ ಡಾ. ಅರುಣ್ ಕೆ ಐ.ಪಿ.ಎಸ್ ರವರು ಶ್ಲಾಘಿಸಿರುತ್ತಾರೆ.