ದಿನಾಂಕ:11-08-2023 ರಂದು ರಾತ್ರಿ 10-00 ಗಂಟೆಯಿಂದ ದಿನಾಂಕ:-12-08-2023 ರಂದು ಬೆಳಿಗ್ಗೆ 06-00 ಗಂಟೆಯ ಅವಧಿಯಲ್ಲಿ ಯಾರೋ ಕಳ್ಳರು ಹರಿಹರ ತಾಲ್ಲೂಕ್ ನಂದಿತಾವರೆ ಗ್ರಾಮದಲ್ಲಿ ಬೀಗ ಹಾಕಿದ ನಾಗಮ್ಮ ರವರ ವಾಸದ ಮನೆಯ ಬಾಗಿಲ ಬೀಗವನ್ನು ಮುರಿದು ಒಳ ಪ್ರವೇಶ ಮಾಡಿ, ಮನೆಯಲ್ಲಿದ್ದ 10,000/- ರೂ ನಗದು ಹಣ ಹಾಗೂ 2,16,000/-ರೂ ಬೆಲೆಯ ಬೆಳ್ಳಿ-ಬಂಗಾರದ ಆಭರಣಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕ್ರಮ ಜರುಗಿಸಿ ಅಂತಾ ನೀಡಿದ ದೂರಿನ ಮೇರೆಗೆ ಮಲೇಬೆನ್ನೂರು ಪೊಲೀಸ್ ಠಾಣೆಯಲ್ಲಿ ಗುನ್ನೆ ನಂ:201/2023, ಕಲಂ: 457,380 ಐಪಿಸಿ ರಿತ್ಯಾ ಕೇಸು ದಾಖಲಾಗಿರುತ್ತೆ.
ಸದರಿ ಪ್ರಕರಣದ ತನಿಖೆಯನ್ನು ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ ಆರ್.ಬಿ.ಬಸರಗಿ ರವರ ಹಾಗೂ ದಾವಣಗೆರೆ ಗ್ರಾಮಾಂತರ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರವರಾದ ಶ್ರೀ ಬಸವರಾಜ ಬಿ.ಎಸ್. ಮಾರ್ಗದರ್ಶನದಲ್ಲಿ ಹರಿಹರ ವೃತ್ತ ನಿರೀಕ್ಷಕರವರಾದ ಶ್ರೀ ಸುರೇಶ ಸಗರಿ ರವರು ಹಾಗೂ ಸಿಬ್ಬಂದಿಗಳನ್ನೋಳಗೊಂಡ ಪೊಲೀಸ್ ತಂಡ ಮೇಲ್ಕಂಡ ಪ್ರಕರಣದ ಆರೋಪಿತರರಾದ 1) ಮಹಮ್ಮದ ಕರೀಂ @ ಕರೀಂ, 22 ವರ್ಷ, ಹಣ್ಣಿನ ವ್ಯಾಪಾರ, ಶಿವಮೊಗ್ಗ 2) ಮಹಮ್ಮದ್ ತಬಾಜ್ @ ಶಾಬಾ, 21 ವರ್ಷ, ಹಣ್ಣಿನ ವ್ಯಾಪಾರ, ಶಿವಮೊಗ್ಗ 3) ತಬ್ರೇಜ್ ಅಹಮ್ಮದ್, 36 ವರ್ಷ, ಹಣ್ಣಿನ ವ್ಯಾಪಾರ, ಶಿವಮೊಗ್ಗ ಇವರುಗಳನ್ನು ದಸ್ತಗಿರಿ ಮಾಡಿದ್ದು, ಆರೋಪಿತರಿಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 38 ಗ್ರಾಂ ತೂಕದ ಸುಮಾರು 1.90,000 ಬೆಲೆ ಬಾಳುವ ಬಂಗಾರದ ಆಭರಣಗಳು, 3000/- ರೂ ಬೆಲೆ ಬಾಳುವ ಬೆಳ್ಳಿಯ ಉಡುದಾರ ಮತ್ತು ಕೃತ್ಯಕ್ಕೆ ಉಪಯೋಗಿಸಿದ 2 ಆಟೋಗಳು, 2 ಮೊಬೈಲ್ ಗಳು ಹಾಗೂ ಕಬ್ಬಿಣದ ರಾಡನ್ನು ಅಮಾನತ್ತು ಪಡಿಸಿಕೊಂಡಿದ್ದು, ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುತ್ತದೆ.
ಕಳ್ಳತನ ಪ್ರಕರಣದ ಆರೋಪಿತರನ್ನು ಬಂಧಿಸಿ, ಸ್ವತ್ತನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾದ ಶ್ರೀ ಸುರೇಶ ಸಗರಿ ಸಿಪಿಐ, ಮಲೇಬೆನ್ನೂರು ಪೊಲೀಸ್ ಠಾಣೆಯ ಪಿಎಸ್‌ಐ ಶ್ರೀ ಪ್ರಭು, ಡಿ ಕೆಳಗಿನ ಮನೆ, ಜಿಲ್ಲಾ ಪೊಲೀಸ್ ಕಛೇರಿಯ ಶ್ರೀ ಮಂಜುನಾಥ ಎಸ್ ಕಲ್ಲೇದೇವರ ಹಾಗೂ ಸಿಬ್ಬಂದಿಯವರಾದ ಪೈರೋಜ್ ಖಾನ್, ಮಂಜಪ್ಪ, ಶಿವಕುಮಾರ, ವೆಂಕಟರಮಣ, ವಿರೇಶಪ್ಪ, ಕಡೆಮನಿ ನಾಗಪ್ಪ, ಸಂತೋಷ ಕುಮಾರ ರವರುಗಳನ್ನು ಮಾನ್ಯ ಪೊಲೀಸ್ ಅಧೀಕ್ಷಕರಾದ ಡಾ.ಅರುಣ್ ಕೆ ಐಪಿಎಸ್, ದಾವಣಗೆರೆ ಜಿಲ್ಲೆ ರವರು ಪ್ರಶಂಸನೆ ವ್ಯಕ್ತಪಡಿಸಿರುತ್ತಾರೆ.