ಮಡಿವಾಳ ಪೊಲೀಸ್ ಠಾಣೆ ಪೊಲೀಸರು ಮೋಟಾರ್ ಸೈಕಲ್ ಗಳನ್ನು ಕಳವು ಮಾಡುತ್ತಿದ್ದ ಆರೋಪಿ ಬಂಧನ ಆರೋಪಿಯಿಂದ ಒಟ್ಟು ಸುಮಾರು 5,67,000/- ರೂ ಬೆಳೆಬಾಳುವ 1ಆಟೋರಿಕ್ಷಾ ಮತ್ತು 6ಮೋಟರ್ ಸೈಕಲ್ ಗಳು ವಶ .
ಆರೋಪಿ ಮತ್ತು ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕ ರಿಂದ ,1ಆಟೋರಿಕ್ಷಾ, 1ಬಜಾಜ್ ಪಲ್ಸಾರ್ ,2ಹೋಂಡಾ ಡಿಯೋ ,1ಟಿವಿಎಸ್ ಸ್ಕೂಟರ್ ,1ಸುಜುಕಿ ಮೋಟಾರ್ ಬೈಕ್, 1ಹೀರೋ ಹೊಂಡಾ ಸ್ಪ್ಲೆಂಡರ್ ವಾಹನಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ .
ಇವರುಗಳಿಂದ ಮಡಿವಾಳ ಪೋಲಿಸ್ ಠಾಣೆಯ 3ಪುಲಕೇಶಿ ನಗರ ಪೊಲೀಸ್ ಠಾಣೆಯ- 1,ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯ -1,ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯ -1, ಕೆಪಿ ಅಗ್ರಹಾರ ಪೊಲೀಸ್ ಠಾಣೆಯ -1,ಪ್ರಕರಣ ಸೇರಿದಂತೆ ಒಟ್ಟು 7ಪ್ರಕರಣಗಳು ಪತ್ತೆಯಾಗಿರುತ್ತವೆ .
ಬೆಂಗಳೂರು ನಗರ ಆಗ್ನೇಯ ವಿಭಾಗ ಮಾನ್ಯ ಉಪ ಪೊಲೀಸ್ ಕಮಿಷನರ್ ಅಪರಾಧ ಶ್ರೀಯುತ. ಶ್ರೀನಾಥ್ ಮಹದೇವ್ ಜೋಶಿ ಅವರು ನಿರ್ದೇಶನದಲ್ಲಿ ಮಡಿವಾಳ ಉಪವಿಭಾಗದ ಸಹಾಯಕ ಪೊಲೀಸ್ ಕಮೀಷನರ್ ಶ್ರೀಯುತ. ಸುಧೀರ್ ಎಂ ಹೆಗ್ಡೆ ರವರುಗಳ ಮಾರ್ಗದರ್ಶನದಲ್ಲಿ ಮಡಿವಾಳ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ಶ್ರೀ .ಸುನೀಲ್ ವೈ ನಾಯಕ್ ರವರ ನೇತೃತ್ವದಲ್ಲಿ ತಂಡ ಒಳಗೊಂಡ ಅಧಿಕಾರಿ ಮತ್ತು ಸಿಬ್ಬಂದಿಗಳಾದ ಪಿ .ಎಸ್. ಐ. ಶ್ರೀ ಪ್ರಕಾಶ್ ಕೆ. ಬಿ, ಹಾಗೂ ಸಿಬ್ಬಂದಿಗಳಾದ ಶ್ರೀ. ಶಂಕರ ಎ. ಎಸ್. ಐ. ಶ್ರೀ. ಚಂದನ್ ಎಸ್ ಗೌಡ ಶ್ರೀ. ಎ ಪಿ. ಸುರೇಶ್. ಶ್ರೀ.ಪ್ರಕಾಶ್. ಶ್ರೀ. ಮೊಹಮ್ಮದ್ ರಫಿ .ಶ್ರೀ. ಪ್ರವೀಣ್ ಕಾಮನೂರು ರವರುಗಳು ಈ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿರುತ್ತಾರೆ .

ಈ ಕಾರ್ಯವನ್ನು ಮಾನ್ಯ ಪೊಲೀಸ್ ಆಯುಕ್ತರು ಮತ್ತು ಅಪರ ಪೊಲೀಸ್ ಆಯುಕ್ತರು ಪೂರ್ವ ರವರುಗಳು ಪ್ರಶಂಸಿಸಿರುತ್ತಾರೆ
ನಮ್ಮ ಮುಖ್ಯ ವರದಿಗಾರರು ಕರ್ನಾಟಕದಿಂದ,

ಜೆ .ಜಾನ್ ಪ್ರೇಮ್