OLX ಆಪ್ ಮೂಲಕ ಕ್ಯಾಮರಾಗಳನ್ನು ಬಾಡಿಗೆಗೆ ಪಡೆದು ಮೋಸ ಮಾಡುತ್ತಿದ್ದ ಮತ್ತು ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡುತ್ತಿದ್ದ ಆರೋಪಿಗಳ ಪತ್ತೆಗಾಗಿ ಬೆಂಗಳೂರು ನಗರ ಆಗ್ನೇಯ ವಿಭಾಗದ ಮಾನ್ಯ ಉಪ ಪೊಲೀಸ್ ಕಮೀಷನರ್ ಆದ ಶ್ರೀಯುತ.ಶ್ರೀನಾಥ್ ಮಹಾದೇವ್ ಜೋಷಿ ರವರ ನಿರ್ದೇಶನದಲ್ಲಿ ಮಡಿವಾಳ ಉಪವಿಭಾಗದ ಮಾನ್ಯ ಸಹಾಯಕ ಪೊಲೀಸ್ ಕಮೀಷನರ್ ಶ್ರೀಯುತ. ಎಂ ಎನ್ ಕರಿಬಸವನಗೌಡ ರವರುಗಳ ಮಾರ್ಗದರ್ಶನದಲ್ಲಿ ಮಡಿವಾಳ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಶ್ರೀ . ಸುನೀಲ್ ವೈ ನಾಯಕ್ ರವರ ನೇತೃತ್ವದ ತಂಡ ಪಿ.ಎಸ್.ಐ ರವರಾದ ಶ್ರೀ .ನಾಗರಾಜ್ ಎಸ್ .ಶೆಟ್ಟರ್ ಮತ್ತು ಸಿಬ್ಬಂದಿಯವರು ಶ್ರೀ .ಚಂದನ್ ಗೌಡ ,ಶ್ರೀ.ಸುರೇಶ್ ಎಪಿ ,ಶ್ರೀ.ಮುನಿರಾಜ್, ಶ್ರೀ.ಹೇಮಂತ್ . ಶ್ರೀ .ಪ್ರವೀಣ್ ,ಶ್ರೀಮತಿ ಪ್ರೇಮಲತಾ ರವರುಗಳು ಒಳಗೊಂಡಂತೆ ತನಿಖಾ ತಂಡವನ್ನು ರಚಿಸಲಾಗಿತ್ತು .
ಆರೋಪಿಗಳನ್ನು ದಸ್ತಗಿರಿ ಮಾಡಿದ್ದು ಆರೋಪಿಗಳ ವಶದಿಂದ ಮಡಿವಾಳ ಪೋಲಿಸ್ ಠಾಣಾ ಭಾರತಿನಗರ ಪೊಲೀಸ್ ಠಾಣೆ ಹಾಗೂ ಬೆಂಗಳೂರು ನಗರದ ವಿವಿಧ ಪೋಲೀಸ್ ಠಾಣೆಗಳ ದಾಖಲಾಗಿರುವ ನಂಬಿಕೆ ದ್ರೋಹ ಮತ್ತು ದ್ವಿಚಕ್ರ ವಾಹನಗಳ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ನಿಕಾನ್ ಮತ್ತು ಕೆನಾನ್ ಕಂಪನಿಯ 7ಕ್ಯಾಮೆರಾಗಳು ಮತ್ತು ಬಜಾಜ್ ಪಲ್ಸರ್ ಯಮಹಾ ಹೋಂಡಾ ಕಂಪೆನಿಯ 4ದ್ವಿಚಕ್ರ ವಾಹನಗಳು ಅಮಾನತುಪಡಿಸಿ ಕೊಂಡಿರುತ್ತದೆ .ಅಮಾನತ್ತು ಪಡಿಸಿಕೊಂಡಿದ್ದಾರೆ ವಾಹನಗಳ ಹಾಗೂ ಕ್ಯಾಮೆರಾಗಳ ಒಟ್ಟು ಅಂದಾಜು ಮೌಲ್ಯ 7,15,000/- ರೂ ಗಳು ಆಗಿರುತ್ತದೆ .
ನಮ್ಮ ಮುಖ್ಯ ವರದಿಗಾರರು ಕರ್ನಾಟಕದಿಂದ,
ಜೆ .ಜಾನ್ ಪ್ರೇಮ್