ಬೆಂಗಳೂರು ನಗರದಲ್ಲಿ ಅನೇಕ ಕಡೆಗಳಲ್ಲಿ ಮನೆ ಕಳ್ಳತನದಲ್ಲಿ ತೊಡಗಿಕೊಂಡಿದ್ದ ಆರೋಪಿಗಳನ್ನು ಬಂಧಿಸಿ ಯಶಸ್ವಿಯಾಗಿದ್ದಾರೆ .ಆರೋಪಿಯಾದ ನಾಗರಾಜ್ ಮತ್ತು ನಂಜುಂಡ ಎಂಬವರನ್ನು ಬಂಧಿಸಿದ್ದಾರೆ. ಸುಮಾರು 18 ಕ್ಕೂ ಹೆಚ್ಚು ದರೋಡೆ ಪ್ರಕರಣಗಳಲ್ಲಿ ಬೆಂಗ್ಳೂರು ಆಂಧ್ರಪ್ರದೇಶ ಮತ್ತು ತಮಿಳುನಾಡಿನ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ .
ಮಡಿವಾಳ ಠಾಣಾ ಪೊಲೀಸ್ ಇನ್ಸ್ ಪೆಕ್ಟರ್ ಶ್ರೀ. ಸುನೀಲ್ ವೈ ನಾಯಕ್ , ಸಬ್ ಇನ್ಸ್ ಪೆಕ್ಟರ್ ಶ್ರೀ. ವಿನೋದ್ ,ಸಬ್ ಇನ್ಸ್ ಪೆಕ್ಟರ್ ಶ್ರೀ. ನಾಗರಾಜ್ ಮತ್ತವರ ತಂಡದಿಂದ ಆರೋಪಿಗಳನ್ನು ಬಂಧಿಸಿ ದರೋಡೆ ಮಾಡಿದ ಹಣ ಮತ್ತು ಕೃತ್ಯಕ್ಕೆ ಬಳಸಿದ ವಾಹನಗಳನ್ನು ವಶಕ್ಕೆಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ .ಬಂಧಿತ ಆರೋಪಿಗಳಿಂದ ರೂ.4,70,000/- ನಗದು ಹಣ ದರೋಡೆ ಕೃತ್ಯಕ್ಕೆ ಬಳಸಿದ ಕಾರು ಮತ್ತು ಜೀಪ್ ಸೇರಿ ಅಮಾನತ್ತು ಪಡೆದುಕೊಂಡಿರುವುದರ ಒಟ್ಟು ಮೌಲ್ಯ ರೂ .10,20,000/-.
ಮಡಿವಾಳ ಠಾಣಾ ಇನ್ಸ್ ಪೆಕ್ಟರ್ ಶ್ರೀ. ಸುನೀಲ್ ವೈ ನಾಯಕ್ ಅವರು ಠಾಣಾಧಿಕಾರಿಯಾಗಿ ಚಾರ್ಜ್ ತೆಗೆದುಕೊಂಡು ಒಂದೂವರೆ ತಿಂಗಳು ಅವಧಿಯಲ್ಲಿ ಅನೇಕ ಪ್ರಕರಣಗಳನ್ನು ಬಗೆಹರಿಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿ ಜನತೆಯ ಮನ ಗೆದ್ದಿದ್ದಾರೆ.
ನಮ್ಮ ಮುಖ್ಯ ವರದಿಗಾರರು ಕರ್ನಾಟಕದಿಂದ,
ಜೆ .ಜಾನ್ ಪ್ರೇಮ್