ಬೆಂಗಳೂರು ನಗರದ ವಿಜಯನಗರದ ಎಂ.ಸಿ ಲೇಔಟ್‌ನಲ್ಲಿ AKSHAYA FORTUNE DEVELOPERS (A.F Developers) ಎಂಬ ಸಂಸ್ಥೆಯನ್ನು ಪ್ರಾರಂಭಿಸಿರುತ್ತಾರೆ. ಸಂಸ್ಥೆಯಲ್ಲಿ ಹಣ ಹೂಡಿಕೆ ಮಾಡಿದ್ದಲ್ಲಿ, ಮಾಸಿಕ ಶೇ.25% ಲಾಭಾಂಶ ಕೊಡುವುದಾಗಿ ಹಾಗೂ ಈ ಸಂಸ್ಥೆಗೆ ಇತರೆ ಜನರನ್ನು ಕರೆತಂದು ಚೈನ್ ಲಿಂಕ್ ನಲ್ಲಿ ಹಣ ಹೂಡಿಕೆ ಮಾಡಿಸಿದರೆ – 1 ಲಕ್ಷಕ್ಕೆ 7 -5,000 ಹಣವನ್ನು ಕೊಡುವುದಾಗಿ ಸಾರ್ವಜನಿಕರಿಗೆ ನಂಬಿಸಿ, ಸಾರ್ವಜನಿಕರಿಂದ ಹಣ ಹೂಡಿಕೆ ಮಾಡಿಸಿಕೊಳ್ಳುತ್ತಿದ್ದರು.
ಈ ಕುರಿತು A.F Developers ನ ಮಾಲೀಕ ಹಾಗೂ ವ್ಯವಸ್ಥಾಪಕನ ವಿರುದ್ಧ ಗೋವಿಂದರಾಜನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ. ಈ ಪ್ರಕರಣವನ್ನು ಸಿಸಿಬಿಯ ಆರ್ಥಿಕ ಅಪರಾಧ ದಳಕ್ಕೆ ವರ್ಗಾವಣೆ ನೀಡಿದ್ದು, ತನಿಖೆ ಮುಂದವರೆದಿದೆ. ಈ ಸಂಸ್ಥೆಯ ಮಾಲಿಕ ಹಾಗೂ ವ್ಯವಸ್ಥಾಪಕ ಇಬ್ಬರು ತಲೆಮರೆಸಿಕೊಂಡಿದ್ದು, ಅವರ ಪತ್ತೆ ಕಾರ್ಯ
ಮುಂದುವರೆದಿದೆ.