ದಿ :29-10-2021 ರಂದು ಜನಪ್ರಿಯ ಚಿತ್ರ ನಟ ಪುನೀತ್ ರಾಜಕುಮಾರ್ ಅವರು ಅಕಾಲಿಕ ಮರಣ ಹೊಂದಿದ ಸಮಯದಲ್ಲಿ ಲಕ್ಷಾಂತರ ಜನರು ಅಗಲಿದ ನಾಯಕನ ಅಂತಿಮ ದರ್ಶನಕ್ಕೆ ಕಂಠೀರವ ಕ್ರೀಡಾಂಗಣಕ್ಕೆ ಈ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗೆ ಅವಕಾಶ ಕೊಡದೆ ಶ್ರೇಷ್ಠ ಮಟ್ಟದಲ್ಲಿ ಜನನ ನಿಯಂತ್ರಣ ಮಾಡಿ ಬಂದೋಬಸ್ತ್ ಕರ್ತವ್ಯ ಪೋಲಿಸರು ನಿರ್ವಹಿಸಿದರು .
ನಂತರ ದಿ :31-10-2021 ರಂದು ದಿವಗಂತ ಅಂತ್ಯಕ್ರಿಯೆ ಮುಕ್ತಾಯಗೊಳ್ಳುವವರೆಗೆ ಸತತವಾಗಿ 48 ಗಂಟೆಗಳ ಕಾಲ ಪರಿಶ್ರಮದಿಂದ ಕರ್ತವ್ಯ ನಿರ್ವಹಿಸಿ ಬಂದೋಬಸ್ತ್ ವ್ಯವಸ್ಥೆಯನ್ನು ಯಶಸ್ವಿಗೊಳಿಸಿದರು .ಸಮಾಜದ ಎಲ್ಲ ವರ್ಗಗಳಿಂದ ಪ್ರಶಂಸೆಗೆ ಪಾತ್ರರಾಗಿರುತ್ತಾರೆ .
ಬಂದೋಬಸ್ತ್ ಕರ್ತವ್ಯದಲ್ಲಿ ಪಾಲ್ಗೊಂಡ ಎಲ್ಲಾ ಪೋಲಿಸ್ ಅಧಿಕಾರಿ ಮತ್ತು ಸಿಬ್ಬಂದಿ ಅವರಿಗೆ ಬೆಂಗ್ಳೂರು ನಗರ ಪೊಲೀಸ್ ಆಯುಕ್ತರಾದ ಶ್ರೀ. ಕಮಲ್ ಪಂತ್ ಅವರು ಎಲ್ಲರಿಗೂ ಧನ್ಯವಾದಗಳು ಮತ್ತು ಅಭಿನಂದನೆ ಸಲ್ಲಿಸಿದರು .



ನಮ್ಮ ಮುಖ್ಯ ವರದಿಗಾರರು ಕರ್ನಾಟಕದಿಂದ,

ಜೆ .ಜಾನ್ ಪ್ರೇಮ್