ಬೆಂಗಳೂರು ನಗರಾದ್ಯಂತ ಪೊಲೀಸ್ ಆಯುಕ್ತರ ವ್ಯಾಪ್ತಿಯಲ್ಲಿ ದಿನಾಂಕ:11/05/2024 ರಂದು ನಡೆಸಲಾದ ವಿಶೇಷ ಡ್ರೈವ್ ಪರಿಶೀಲನೆಯ ವರದಿ.
ದಿನಾಂಕ:11/05/2024 ರಂದು ಕಾನೂನು ಉಲ್ಲಂಘನೆ ಮಾಡುವವರ ವಿರುದ್ಧ ಪರಿಶೀಲನೆ ಮಾಡಿ
ಕ್ರಮ ಕೈಗೊಂಡಿರುತ್ತದೆ. ಪರಿಶೀಲನೆ ಮಾಡಿದ ಒಟ್ಟು 535 ವೈನ್ ಸ್ಟೋರ್, 838 ರೆಸ್ಟೋರೆಂಟ್, 1823 ಟೀ ಸ್ಟಾಲ್/ಬೇಕರಿ, 707 ಲಾಡ್ಜ್‌ಗಳು, 931 ಪಿಜಿ ಗಳು, 526 ಪ್ರತ್ಯೇಕವಾದ ಸ್ಥಳಗಳು ಮತ್ತು ಇತರ ಸ್ಥಳಗಳನ್ನು ಪರಿಶೀಲಿಸಲಾಯಿತು. ಒಟ್ಟಾರೆಯಾಗಿ 5,225 ವಾಣಿಜ್ಯ ಸಂಕೀರ್ಣಗಳು/ಸ್ಥಳಗಳನ್ನು
ಪರಿಶೀಲನೆ ನಡೆಸಲಾಯಿತು.
ಪರಿಶೀಲನೆ ಮಾಡಿದ ಒಟ್ಟು 5,225 ವಾಣಿಜ್ಯ ಸಂಕೀರ್ಣಗಳು/ಸ್ಥಳಗಳ ಪೈಕಿ, ಕಾನೂನು ಉಲ್ಲಂಘನೆ ಮಾಡಿದವರ ವಿರುದ್ಧ ಕಾನೂನು ಕ್ರಮ ಕೈಗೊಂಡಿರುವ ವಿವರ (1) ಕರ್ನಾಟಕ ಪೊಲೀಸ್ ಕಾಯ್ದೆ ಅಡಿಯಲ್ಲಿ 907 ಪ್ರಕರಣಗಳು (2) ಸಿಗರೇಟ್ ಮತ್ತು ಇತರ ತಂಬಾಕು ಉತ್ಪನ್ನಗಳ ಕಾಯ್ದೆ COTPA ಅಡಿಯಲ್ಲಿ 2,744 ಪ್ರಕರಣಗಳು (3) ಬಾಲಾಪರಾಧಿ ಕಾಯ್ದೆ ಅಡಿಯಲ್ಲಿ 03 ಪ್ರಕರಣಗಳು (4) ಎನ್.ಡಿ.ಪಿ.ಎಸ್ 01 ಪ್ರಕರಣ (5) ಭಾರತೀಯ ದಂಡ ಸಂಹಿತೆಯ 02 ಪ್ರಕರಣಗಳು (6) ಮುಂಜಾಗ್ರತಾ ಕಾನೂನು ಕ್ರಮದ ಅಡಿಯಲ್ಲಿ 11 ಪ್ರಕರಣಗಳು ದಾಖಲಾಗಿರುತ್ತವೆ. ಒಟ್ಟಾರೆ 3,667 ಪ್ರಕರಣಗಳು ದಾಖಲಾಗಿರುತ್ತವೆ.
ಅಲ್ಲದೆ 734 ರೌಡಿ ಶೀಟರ್, 434 ಎಂ.ಓ.ಬಿ ವ್ಯಕ್ತಿಗಳು, ಎಂ.ಸಿ.ಸಿ.ಟಿ.ಎನ್.ಎಸ್ ಬೆರಳು ಮುದ್ರೆ ಸ್ಕ್ಯಾನರ್‌ನಿಂದ 4,138 ವ್ಯಕ್ತಿಗಳನ್ನು ಹಾಗೂ 90 ದುರ್ನಡತೆಯ ವ್ಯಕ್ತಿಗಳನ್ನು ಪರಿಶೀಲಿಸಲಾಯಿತು.
ಮುಂದುವರೆದು, ಒಟ್ಟು 13,468 ವಾಹನಗಳ ತಪಾಸಣೆ ನಡೆಸಲಾಯಿತು (ದ್ವಿ-ಚಕ್ರ ವಾಹನ, ಮೂರು ಚಕ್ರದ ವಾಹನ ಹಾಗೂ ನಾಲ್ಕು ಚಕ್ರದ ವಾಹನಗಳು) ಈ 13,468 ವಾಹನಗಳ ಪೈಕಿ ಮಧ್ಯಪಾನ ಸೇವಿಸಿ ವಾಹನ ಚಾಲನೆ ಮಾಡುತ್ತಿದ್ದ ಒಟ್ಟು 196 ಚಾಲಕರು/ರೈಡರ್ ರವರುಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ.