210 ಗ್ರಾಂ ಚಿನ್ನದ ಆಭರಣಗಳು, 1,030 ಗ್ರಾಂ. ತೂಕದ ಬೆಳ್ಳಿಯ ಪದಾರ್ಥಗಳ ವಶ. ಮೌಲ್ಯ 7, 13,35,000/-
ಆರ್.ಆರ್.ನಗರದ ವ್ಯಾಪ್ತಿಯಲ್ಲಿರುವ ಬೆಮೆಲ್ ಲೇಔಟ್‌ನ ಪಿರಾದುದಾರರು ದಿನಾಂಕ:19/02/2024 ರಂದು ಬೆಳಗ್ಗೆ ಮನೆಗೆ ಬೀಗ ಹಾಕಿಕೊಂಡು ಚನ್ನಪಟ್ಟಣಕ್ಕೆ ಹೋಗಿರುತ್ತಾರೆ. ದಿ:10-03-2024 ರಂದು ಬೆಳಗ್ಗೆ ಪಿರಾದುದಾರರ ಮನೆಗೆಲಸದಾಕೆ ಕೆಲಸಕ್ಕೆಂದು ಬಂದು ನೋಡಿದಾಗ, ಮನೆಯಲ್ಲಿರುವ ವಸ್ತುಗಳು ಚಲ್ಲಾಪಿಲ್ಲಿಯಾಗಿ ಹರಡಿರುವುದನ್ನು ಕಂಡು, ಪಿರಾದುದಾರರಿಗೆ ಫೋನ್ ಮುಖಾಂತರ ತಿಳಿಸಿರುತ್ತಾರೆ. ನಂತರ ಪಿರಾದುದಾರರು ಮನೆಗೆ ಬಂದು ನೋಡಲಾಗಿ, ಯಾರೋ ಕಳ್ಳರು ಮನೆಯ ಟೆರಸ್‌ನಲ್ಲಿ ಹಾಕಿದ್ದ ಸಿಲಿಕಾನ್ ಪರದೆಯನ್ನು ಹರಿದು, ಒಳಪ್ರವೇಶಿಸಿ ನಂತರ ಪ್ಯಾಸೇಜ್‌ನ ಬಾಗಿಲಿನ ಬೀಗವನ್ನು ಮುರಿದು, ಮನೆಯ ಒಳಗೆ ಪ್ರವೇಶ ಮಾಡಿರುತ್ತಾರೆ. ಮನೆಯಲ್ಲಿನ ರೂಂಗಳಲ್ಲಿ ಅಳವಡಿಸಿದ್ದ ಕಬೋರ್ಡ್‌ಗಳನ್ನು ತೆಗೆದು ಪರಿಶೀಲಿಸಿದಾಗ, ಕಬೋರ್ಡ್‌ನಲ್ಲಿದ್ದ 6 ಚಿನ್ನದ ಬಳೆಗಳು, 2 ಲಾಂಗ್ ಚಿನ್ನದ ಸರಗಳು ಜೊತೆಗೆ 01 ನಕ್ಲಸ್ ಕಳುವಾಗಿರುವುದು ಕಂಡಬಂದಿರುತ್ತದೆ.
ಇವುಗಳ ಅಂದಾಜು ತೂಕ 400 ಗ್ರಾಂಗಳಾಗಿರುತ್ತದೆ. ಈ ಕುರಿತು ಆರ್.ಆರ್. ನಗರ ಪೊಲೀಸ್ ಠಾಣೆಯಲ್ಲಿ ಹಗಲು-ರಾತ್ರಿ ಕನ್ನಕಳುವು ಪ್ರಕರಣ ದಾಖಲಾಗಿರುತ್ತದೆ.
ಪ್ರಕರಣದ ತನಿಖೆಯನ್ನು ಮುಂದುವರೆಸಿದ ಪೊಲೀಸರು, ಹಲವಾರು ಸಿಸಿ ಟಿವಿಗಳನ್ನು ಪರಿಶೀಲಿಸಿ ದಿನಾಂಕ:15/04/2024 ರಂದು ಪ್ರಕರಣದ ಆರೋಪಿಯನ್ನು ಚೆನ್ನಸಂದ್ರ ಮುಖ್ಯರಸ್ತೆಯ ಹೋಟೆಲೊಂದರ ಬಳಿ ವಶಕ್ಕೆ ಪಡೆದುಕೊಂಡಿರುತ್ತಾರೆ. ಆತನನ್ನು ವಿಚಾರಣೆಗೊಳಪಡಿಸಿದಾಗ, ತಾನು ಕಳುವು ಮಾಡಿರುವ ಬಗ್ಗೆ ಒಪ್ಪಿಕೊಂಡಿರುತ್ತಾನೆ. ನಂತರ ಆತನನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರಡಿಸಿ, ಆರು ದಿನಗಳ ಕಾಲ ಪೊಲೀಸ್ ಅಭಿರಕ್ಷೆಗೆ ಪಡೆಯಲಾಯಿತು.
ಆರೋಪಿಯನ್ನು ಸುದೀರ್ಘವಾಗಿ ವಿಚಾರಣೆಗೊಳಪಡಿಸಿದಾಗ, ಆತನು ರಾಜರಾಜೇಶ್ವರಿನಗರ ಪೊಲೀಸ್ ಠಾಣೆ, ಸುಬ್ರಮಣ್ಯಪುರ ಪೊಲೀಸ್ ಠಾಣೆ, ಚಂದ್ರಾಲೇಔಟ್ ಪೊಲೀಸ್ ಅನ್ನಪೂರ್ಣೇಶ್ವರಿನಗರ ಪೊಲೀಸ್ ಠಾಣೆಗಳ ವ್ಯಾಪ್ತಿಗಳಲ್ಲಿ ಕಳುವು ಮಾಡಿರುವ ಬಗ್ಗೆ ತಪ್ಪೋಪ್ಪಿಕೊಂಡು, ಈ ಪ್ರಕರಣಗಳಿಗೆ ಸಂಬಂಧಿಸಿದಂತೆ 210 ಗ್ರಾಂ. ತೂಕದ ಚಿನ್ನದ ಆಭರಣಗಳು ಹಾಗೂ 1,030 ಕೆಜಿ ತೂಕದ ಬೆಳ್ಳಿಯ ಪದಾರ್ಥಗಳನ್ನು ವಶಪಡಿಸಿಕೊಂಡಿರುತ್ತದೆ. ಇವುಗಳ ಒಟ್ಟು ಅಂದಾಜು ಮೌಲ್ಯ: 3 13,35,000 (ಹದಿಮೂರು ಲಕ್ಷದ ಮೂವತ್ತೈದು ಸಾವಿರ ರೂಪಾಯಿ) ಆಗಿರುತ್ತವೆ.
ಈ ಕಾರ್ಯಚರಣೆಯನ್ನು ಬೆಂಗಳೂರು ನಗರದ ಪಶ್ಚಿಮ ವಿಭಾಗದ ಮಾನ್ಯ ಉಪ ಪೊಲೀಸ್ ಆಯುಕ್ತರಾದ ಶ್ರೀ. ಗಿರೀಶ್ ಎಸ್ ಹಾಗೂ ಬ್ಯಾಟರಾಯನಪುರ ಉಪ ವಿಭಾಗದ ಮಾನ್ಯ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀ ಭರತ್.ಎಸ್.ರೆಡ್ಡಿ ಕೆ.ಎಸ್.ಪಿ.ಎಸ್. ರವರುಗಳ ಮಾರ್ಗದರ್ಶನದಲ್ಲಿ ರಾಜರಾಜೇಶ್ವರಿನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಹಾಗೂ ಅಧಿಕಾರಿ/ಸಿಬ್ಬಂದಿಯವರು ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿರುತ್ತಾರೆ.