ದಿನಾಂಕ: 08, 09/01/2024 ಎರಡೂ ದಿವಸ ಕಲಬುರಗಿ ಪೊಲೀಸ್ ಕವಾಯತ್ ಮೈದಾನದಲ್ಲಿ ಜರುಗಿದ ಈಶಾನ್ಯ ವಲಯ ಮಟ್ಟದ ಪೊಲೀಸ್ ಕರ್ತವ್ಯ ಕೂಟ-2023 ಕ್ಕೆ ಶ್ರೀ, ನ್ಯಾಮೇ ಗೌಡರ, ಡಿ.ಎಸ್ಪಿ ಹುಮನಾಬಾದ ನೋಡಲ್ ಅಧಿಕಾರಿಯವರು ಶ್ರೀ, ಶ್ರೀನಿವಾಸ ಅಲ್ಲಾಪೂರೆ, ಸಿ.ಪಿ.ಐ ಬೀದರ ಗ್ರಾಮೀಣ ವೃತ್ತ ರವರ ನೇತೃತ್ವದಲ್ಲಿ ಬೀದರ ಜಿಲ್ಲೆಯಿಂದ ಒಟ್ಟು 21 ಜನ ಪೊಲೀಸ್ ಅಧಿಕಾರಿ, ಸಿಬ್ಬಂದಿಯವರನ್ನೊಳಗೊಂಡ ತಂಡವನ್ನು ಆಯ್ಕೆ ಮಾಡಿ ಕಳುಹಿಸಿದ್ದು, ಕ್ರೀಡೆಯಲ್ಲಿ ಕಲಬುರಗಿ ನಗರ, ಕಲಬುರಗಿ ಜಿಲ್ಲೆ, ಯಾದಗಿರಿ ಜಿಲ್ಲೆ, ಬೀದರ ಜಿಲ್ಲೆಗಳಿಂದ ಪೊಲೀಸ್ ತಂಡಗಳು ಭಾಗ ವಹಿಸಿದ್ದು, ಒಟ್ಟು 6 ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿದ್ದು, ಬೀದರ ಜಿಲ್ಲಾ ಪೊಲೀಸ್ ತಂಡವು ಒಟ್ಟು 6 ಸ್ಪರ್ದೆಯಲ್ಲಿ16 ಪದಕವನ್ನು ಬಾಚಿಕೊಂಡು ಪ್ರಥಮ ಸ್ಥಾನ ಪಡೆದು, ತಂಡವು ರಾಜ್ಯ ಮಟ್ಟದ ಕ್ರೀಡೆ ಗೆ ಆಯ್ಕೆಯಾಗಿರುತ್ತದೆ.

ಅದರಂತೆ ಬೀದರ ಜಿಲ್ಲಾ ಪೊಲೀಸ್ 2023 ನೇ ಸಾಲಿನಲ್ಲಿ ಅತ್ಯುತ್ತಮ ಕೆಲಸಕ್ಕೆ ಮಾನ್ಯ ಡಿ.ಜಿ.ಪಿ ಸಾಹೇಬರಿಂದ ಪ್ರಶಂಸೆಗೆ ಪಾತ್ರರಾಗಿ ಬಹುಮಾನ ಪಡೆದಿದ್ದು, ಸ್ಪರ್ಧೆಯಲ್ಲಿಯೂ ಸಹ ಪ್ರಥಮ ಸ್ಥಾನ ಗಳಿಸಿ ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಪೊಲೀಸ್ ಅಧಿಕಾರಿ, ಸಿಬ್ಬಂದಿಯವರ ತಂಡಕ್ಕೆ ಅಭಿನಂದನೆಗಳು.
ವರದಿ :- ಸಿದ್ದು ಪಟ್ಟೇದಾರ್