15 ಅಗಸ್ಟ್ 2021 ರಂದು ಮುಂಜಾನೆ 7.30 ಗಂಟೆಗೆ 75 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಜಿಲ್ಲಾ ಪೊಲೀಸ್ ಕಛೇರಿಯಲ್ಲಿ ಆಚರಿಸಲಾಯಿತು. ಮಾನ್ಯ ಶ್ರೀ ನಾಗೇಶ್ ಡಿ.ಎಲ್ ಐ.ಪಿ.ಎಸ್. ಜಿಲ್ಲಾ ಪೊಲೀಸ್ ವರೀಷ್ಠಾಧಿಕಾರಿಗಳು ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಡಾ. ಗೋಪಾಲ್ ಬ್ಯಾಕೋಡ್ ರವರು ಮತ್ತು ಅಧಿಕಾರಿ ಸಿಬ್ಬಂದಿಯವರುಗಳು ಹಾಜರಿದ್ದರು. ಹಾಗು ಮುಂಜಾನೆ 9 ಗಂಟೆಗೆ ಜಿಲ್ಲಾಡಳಿತದ ವತಿಯಿಂದ ಜಿಲ್ಲಾ ಪೊಲೀಸ್ ಕಛೇರಿಯ ಪರೇಡ್ ಮೈದಾನದಲ್ಲಿ ಮಾನ್ಯ ಜಿಲ್ಲಾ ಉಸ್ತುವಾರಿ ಮಂತ್ರಿಗಳಾದ ಶ್ರೀ ಪ್ರಭು ಚವ್ಹಾನ ರವರು ಧ್ವಜಾರೋಹಣ ಮಾಡುವ ಮೂಲಕ ಸ್ವತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಸಭೆಯಲ್ಲಿ ರಾಜಕೀಯ ಧುರೀಣರು ಮತ್ತು ಪೊಲೀಸ್ ಅಧಿಕಾರಿ ಸಿಬ್ಬಂದಿಗಳು ಹಾಗು ಸಾರ್ವಜನಿಕರು ಹಾಜರಿದ್ದರು.
ನಮ್ಮ ಮುಖ್ಯ ವರದಿಗಾರರು ಕರ್ನಾಟಕದಿಂದ,