ಗಣೇಶೋತ್ಸವ ಆಚರಣೆ ಕುರಿತು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಹೇಳಿಕೆ ನೀಡಿದ್ದು, 1 ವಾರ್ಡ್‌ಗೆ 1 ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಮಾತ್ರ ಅವಕಾಶ. ಗಣೇಶ ಮೂರ್ತಿ ಕೂರಿಸುವ ಆಯೋಜಕರು 2 ಡೋಸ್ ಕೊರೊನಾ ಲಸಿಕೆಯನ್ನು ಪಡೆದಿರಬೇಕು. ಎಲ್ಲಿ ಮೂರ್ತಿ ಇಡಬೇಕು ಎಂದು ಇನ್ಸ್‌ಪೆಕ್ಟರ್, ಎಸಿಪಿಗಳು ಪರಿಶೀಲಿಸಿ ಸ್ಥಳ ಗುರುತಿಸುತ್ತಾರೆ. ಈ ಬಗ್ಗೆ ಪೊಲೀಸ್ ಆಯುಕ್ತರು, ಅಧಿಕಾರಿಗಳ ಜತೆ ಚರ್ಚಿಸಿದ್ದೇವೆ. 3 ದಿನಕ್ಕಿಂತ ಹೆಚ್ಚು ಗಣೇಶಮೂರ್ತಿಯನ್ನ ಇಡುವಂತಿಲ್ಲ ಎಂದು ತಿಳಿಸಿದ್ದಾರೆ.
ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಸುದ್ದಿಗಾರರೊಂದಿಗೆ ಮಾತನಾಡಿ ಬಿಬಿಎಂಪಿ ಅನುಮತಿ ಪಡೆದು ಗಣೇಶ ಪ್ರತಿಷ್ಠಾಪಿಸಬೇಕು ಹಾಗೂ ಸರ್ವರಿಗೂ ಗಣೇಶೋತ್ಸವ ಸರ್ಕಾರ ಅನುಮತಿ ನೀಡಿದರೂ ಜನ ಗುಂಪು ಗುಂಪಾಗಿ ಸೇರುವಂತಿಲ್ಲ .ಗಣೇಶೋತ್ಸವ ಮೇಲೆ ಭಜನೆ ಪೂಜೆ ಮಾತ್ರ ಅವಕಾಶವಿದೆ .ಮಾಧ್ಯಮಗೋಷ್ಠಿ ಸೇರಿ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಅನುಮತಿ ನಿರಾಕರಿಸಲಾಗಿದೆ ,ಕನಿಷ್ಠ ಪಕ್ಷ 20 ಜನ ಮಾತ್ರ ಇರಬೇಕು .ಅನಧಿಕೃತವಾಗಿ ಗಣೇಶ ಪ್ರತಿಷ್ಠಾಪಿಸಲು ಅವಕಾಶವಿಲ್ಲ .ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು 2ಬಾರಿ ಸಭೆ ನಡೆಸಿ ಗೈಡ್ ಲೈನ್ಸ್ ಹೊರಡಿಸಿದ್ದಾರೆ .ಆದ್ದರಿಂದ ಸಾರ್ವಜನಿಕರು ಸರ್ಕಾರ ನಿಯಮ ಕಡ್ಡಾಯವಾಗಿ ಪಾಲಿಸಬೇಕು ಎಂದು ನಗರ ಪೊಲೀಸ್ ಶ್ರೀ .ಆಯುಕ್ತ ಕಮಲ್ ಪಂತ್ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ .
ನಮ್ಮ ಮುಖ್ಯ ವರದಿಗಾರರು ಕರ್ನಾಟಕದಿಂದ,