ಬಂಟ್ವಾಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಿನಾಂಕ 27.04.2022 ರಂದು ರಾತ್ರಿ ಬಂಟ್ವಾಳ ಮಣಿಹಳ್ಳ ಎಂಬಲ್ಲಿ ನಡೆದ ಸುಮಾರು 1 ಲಕ್ಷ ಮೌಲ್ಯದ ಮೋಟಾರ್ ಸೈಕಲ್ ಕಳವು ಪ್ರಕರಣಕ್ಕೆ ಸಂಬಂಧಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗಿ
1) ಸಿದ್ದಿಕ್ @ ಅಬೂಬ್ಬಕ್ಕರ್ ಸಿದ್ದಿಕ್, ಪ್ರಾಯ 27 ವರ್ಷ ತಂದೆ: ಹಮೀದ್, ವಾಸ : ಸಬರಬೈಲು ಮನೆ, ಕುವೆಟ್ಟು ಗ್ರಾಮ, ಬೆಳ್ತಂಗಡಿ ತಾಲೂಕು.
2) ಅಕ್ಬರ್, ಪ್ರಾಯ 32 ವರ್ಷ, ತಂದೆ: ಯೂಸುಫ್, ವಾಸ: ನೆಹರುನಗರ ಮನೆ, ನರಿಕೊಂಬು ಗ್ರಾಮ, ಬಂಟ್ವಾಳ ತಾಲೂಕು ಹಾಗೂ
3) ಸಮೀರ್ @ ಮೊಹಮ್ಮದ್ ಸಮೀರ್, ಪ್ರಾಯ 23 ವರ್ಷ, ತಂದೆ: ಶರೀಫ್ ಮಹಮ್ಮದ್ ಬಾವ, ಉರ್ಕೆದಬೈಲು ಮನೆ, ಮಾಲಾಡಿ ಗ್ರಾಮ, ಬೆಳ್ತಂಗಡಿ ತಾಲೂಕು ಎಂಬವರನ್ನು ದಸ್ತಗಿರಿ ಮಾಡಿ ಕೂಲಂಕುಷವಾಗಿ ತನಿಖೆ ನಡೆಸಿದಾಗ ಸದರಿ ಆರೋಪಿಗಳು ದಿನಾಂಕ: 23.04.2022 ರಂದು ಮಧ್ಯರಾತ್ರಿ ಬಂಟ್ವಾಳ ರೈಲ್ವೇ ಸ್ಟೇಷನ್ ಬಳಿ ಇನ್ನೊಂದು ಮೋಟಾರ್ ಸೈಕಲನ್ನು ಕಳವುಗೈದಿರುವುದು ತಿಳಿದುಬಂದಿರುತ್ತದೆ. ಆರೋಪಿಗಳಿಂದ ಕಳವು ಮಾಡಲಾದ 2 ಮೋಟಾರ್ ಸೈಕಲ್‌ಗಳು ಹಾಗೂ ಕೃತ್ಯಕ್ಕೆ ಉಪಯೋಗಿಸಿದ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಸದ್ರಿ ಪತ್ತೆ ಕಾರ್ಯದಲ್ಲಿ ಮಾನ್ಯ ಪೊಲೀಸ್ ಅಧೀಕ್ಷಕರು ದ.ಕ. ಜಿಲ್ಲೆ ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕರು ದ.ಕ. ಜಿಲ್ಲೆ ಮಂಗಳೂರು ರವರ ಮಾರ್ಗದರ್ಶನದಂತೆ, ವಿಶೇಷ ತಂಡ ಪತ್ತೆ ಕಾರ್ಯದಲ್ಲಿ ಭಾಗವಹಿಸಿರುತ್ತಾರೆ.