ಪ್ರತಿಷ್ಠಿತ ಕಂಪನಿಗಳ Electric Copper Wire ಗಳನ್ನು ನಕಲು ಮಾಡಿ ಮಾರಾಟ ಮಾಡುತ್ತಿದ್ದ ಅಂಗಡಿ ಮೇಲೆ ಸಿಸಿಬಿ ದಾಳಿ, 7 6.20 ಲಕ್ಷ ಮೌಲ್ಯದ ನಕಲಿ ಕಾಪರ್ ವೈರ್ ವಶ.
ಮಹದೇವಪುರ ಪೊಲೀಸ್ ಸರಹದ್ದಿನ ಗರುಡಾಚಾರ್ ಪಾಳ್ಯ,ಮಹದೇವಪುರ ಅಂಗಡಿವೊಂದರಲ್ಲಿ ಪ್ರತಿಷ್ಠಿತ AV Guard, RR, Poly Cab, Anchor, Great White, Havell ಕಂಪನಿಗಳ ನಕಲಿ Electric Copper Wire ಗಳನ್ನು ದಾಸ್ತಾನು ಮಾಡಿಕೊಂಡು, ಕಂಪನಿಯ ಅಸಲಿ ಮಾಲುಗಳೆಂದು ಸಾರ್ವಜನಿಕರಿಗೆ ನಂಬಿಸಿ ಮಾರಾಟ ಮಾಡುತ್ತಿದ್ದಾರೆಂದು, ಬಾತ್ಮೀದಾರರಿಂದ ಬಂದ ಖಚಿತ ಮಾಹಿತಿ ಮೇರೆಗೆ, ಸಿಸಿಬಿಯ ಆರ್ಥಿಕ ಅಪರಾಧ ದಳದ ಅಧಿಕಾರಿ/ಸಿಬ್ಬಂದಿಯವರುಗಳು ದಿನಾಂಕ:18/07/2024 ರಂದು ದಾಸ್ತಾನು ಮಾಡಿಕೊಂಡಿದ್ದ ಅಂಗಡಿಯ ಮೇಲೆ ದಾಳಿ ನಡೆಸಿ, ಮಾರಾಟದಲ್ಲಿ ತೊಡಗಿದ್ದ ಓರ್ವ ವ್ಯಕ್ತಿಯನ್ನು ವಶಕ್ಕೆ ಪಡೆದುಕೊಂಡಿರುತ್ತಾರೆ. 6,20,000/- (ಆರು ಲಕ್ಷದ ಇಪ್ಪತ್ತು ಸಾವಿರ ರೂಪಾಯಿ) ಮೌಲ್ಯದ ನಕಲಿ ಕಾಪರ್‌ವೈರ್‌ಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶ್ವಸಿಯಾಗಿರುತ್ತಾರೆ.
ಈ ಕುರಿತು ಆರೋಪಿತನ ವಿರುದ್ಧ ಮಹದೇವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ಕಾನೂನು ಕ್ರಮ ಕೈಗೊಂಡಿರುತ್ತದೆ.
ಈ ಕಾರ್ಯಾಚರಣೆಯನ್ನು ಸಿಸಿಬಿ ಆರ್ಥಿಕ ಅಪರಾಧ ದಳದ ಅಧಿಕಾರಿ ಹಾಗೂ ಸಿಬ್ಬಂದಿಯವರುಗಳು ಯಶಸ್ವಿಯಾಗಿ ಕೈಗೊಂಡಿರುತ್ತಾರೆ.