ಒಟ್ಟು ₹ 7, 30 ಲಕ್ಷ ಬೆಲೆ ಬಾಳುವ 120 ವಿವಿಧ ಕಂಪನಿಯ ಮೊಬೈಲ್ ಫೋನ್‌ಗಳ ವಶ.
ಮಹದೇವಪುರ ಪೊಲೀಸ್ ಠಾಣಾ ಸರಹದ್ದಿನಲ್ಲಿ, ಪಿರಾದುದಾರರು ದಿನಾಂಕ:-07/02/2024 ರಂದು ಬಸ್‌ನಲ್ಲಿ ಪ್ರಯಾಣ ಮಾಡುತ್ತಿರುವ ಸಮಯದಲ್ಲಿ ಅವರ ಮೊಬೈಲ್ ಫೋನ್ ಕಳೆದುಕೊಂಡಿರುವುದಾಗಿ ನೀಡಿದ ದೂರಿನ ಮೇರೆಗೆ ಮಹದೇವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ತನಿಖೆ ಕೈಗೊಂಡ ಪೊಲೀಸರು ಪಿರಾದುದಾರರು ನೀಡಿದ ಸುಳಿವಿನ ಮೇರೆಗೆ ಕ್ಷೇತ್ರ ಕಾರ್ಯಚರಣೆ ನಡೆಸಿ, ಪ್ರಕರಣಕ್ಕೆ ಸಂಬಂಧಿಸಿದಂತೆ ದಿನಾಂಕ:08/02/2024 ರಂದು ಆಂಧ್ರಪ್ರದೇಶ ಮೂಲದ ಮೂವರು ಮಹಿಳೆಯರು ಸೇರಿದಂತೆ ಒಟ್ಟು ಐವರು ಮಹಿಳೆಯನ್ನು ವಶಕ್ಕೆ ಪಡೆದುಕೊಂಡು, ಸುದೀರ್ಘವಾಗಿ ವಿಚಾರಣೆಗೆ ಒಳಪಡಿಸಿದಾಗ, ಅವರುಗಳು ಮೊಬೈಲ್ ಫೋನ್‌ಗಳನ್ನು ಕಳವು ಮಾಡಿದ ಬಗ್ಗೆ ಮಾಹಿತಿಯನ್ನು ನೀಡಿರುತ್ತಾರೆ. ನಂತರ ಅವರುಗಳಿಂದ ಕೆ 30 ಲಕ್ಷ (ಮೂವತ್ತು ಲಕ್ಷ ರೂಪಾಯಿಗಳು) ಬೆಲೆ ಬಾಳುವ ಒಟ್ಟು 120 ವಿವಿಧ ಕಂಪನಿಯ ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ.
ವಶಕ್ಕೆ ಪಡೆದ ಐವರು ಮಹಿಳೆಯರು ಮಖ್ಯವಾಗಿ ಬೆಂಗಳೂರು ನಗರದ ಜನನಿಬಿಡ ಬಸ್ ನಿಲ್ದಾಣಗಳು ಹಾಗೂ ಜನಜಂಗುಳಿ ಇರುವ ದಿನಗಳಂದು ಹೆಚ್ಚು ಜನ ಇರುವ ಬಸ್‌ಗಳನ್ನು ಹತ್ತಿಕೊಂಡು ಬಸ್‌ನಲ್ಲಿ ನೂಕುನೂಗ್ಗಲು ಉಂಟುಮಾಡಿ, ಸಾರ್ವಜನಿಕರ ಬ್ಯಾಗ್‌ನಲ್ಲಿರುವ ಮತ್ತು ಜೇಬಿನಲ್ಲಿರುವ ಮೊಬೈಲ್‌ಗಳನ್ನು ಕಳ್ಳತನ ಮಾಡಿಕೊಂಡು ಕದ್ದ ಮೊಬೈಲ್‌ಗಳನ್ನು ತಮ್ಮ ವಾಸದ ಮನೆಯಲ್ಲಿ ಶೇಖರಿಸಿ ಇಟ್ಟಿರುತ್ತಾರೆ. ನಂತರ ಆಂಧ್ರಪ್ರದೇಶ ಮೂಲದ ಓರ್ವ ವ್ಯಕ್ತಿಗೆ ಕದ್ದ ಮೊಬೈಲ್ ಫೋನ್‌ಗಳನ್ನು ಮಾರಾಟ ಮಾಡುತ್ತಿದ್ದಾಗಿ ತನಿಖೆಯಿಂದ ತಿಳಿದುಬಂದಿರುತ್ತದೆ. ಇವರುಗಳು ಮಹಿಳಾ ಪ್ರಯಾಣಿಕರನ್ನು ಗುರಿಯಾಗಿಸಿಕೊಂಡು ಕೃತ್ಯವೆಸಗಿರುತ್ತಾರೆ.
ಈ ರೀತಿಯ ಘಟನೆಗಳು ಕಂಡುಬಂದಲ್ಲಿ ಹೆದರದೆ ದೈರ್ಯವಾಗಿ ಡಿ.ಸಿ.ಪಿ. ವೈಟ್ ಫೀಲ್ಡ್ ವಿಭಾಗ ಮೊಬೈಲ್ ನಂ. 9480801084, ಎ.ಸಿ.ಪಿ. ವೈಟ್ ಫೀಲ್ಡ್ ಉಪ ವಿಭಾಗ ಮೊಬೈಲ್ ನಂ. 9480801607 ಅಥವಾ ಪೊಲೀಸ್ ಇನ್ಸ್ಪೆಕ್ಟರ್ ಮಹದೇವಪುರ ಪೊಲೀಸ್ ಠಾಣೆ ಮೊಬೈಲ್ 9480801230 ರವರನ್ನು ನೇರವಾಗಿ ಸಂಪರ್ಕಿಸಿ ನಿರ್ಭೀತಿಯಿಂದ ದೂರು ನೀಡಬಹುದಾಗಿದೆ.
ಈ ಕಾರ್ಯಾಚರಣೆಯನ್ನು ವೈಟ್ ಫೀಲ್ಡ್ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಶ್ರೀ.ಶಿವಕುಮಾರ್, ರವರ ಮಾರ್ಗದರ್ಶನದಲ್ಲಿ, ಸಹಾಯಕ ಪೊಲೀಸ್ ಆಯುಕ್ತರು, ವೈಟ್ ಫೀಲ್ಡ್ ಉಪ ವಿಭಾಗ ರವರ ನೇತೃತ್ವದಲ್ಲಿ, ಮಹದೇವಪುರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಹಾಗೂ ಅಧಿಕಾರಿ/ಸಿಬ್ಬಂದಿಗಳು ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿರುತ್ತಾರೆ.