16 ಲಕ್ಷ ಬೆಲೆ ಬಾಳುವ ವಿವಿಧ ಕಂಪನಿಯ 50 ಲ್ಯಾಪ್ ಟ್ಯಾಪ್ ಮತ್ತು 7 ಮೊಬೈಲ್ ಫೋನ್‌ಗಳ ವರ
ಯಶವಂತಪರ ಪೊಲೀಸ್ ಠಾಣಾ ಸರಹದ್ದಿನಲ್ಲಿ ಕೆಲವು ದಿನಗಳಿಂದ ಪಿ.ಜಿ, ಹಾಸ್ಟೆಲ್, ಲಾಡ್ಜ್‌ಗಳಲ್ಲಿ ಮೊಬೈಲ್ ಮೋನ್ ಮತ್ತು ಲ್ಯಾಪ್‌ಟಾಪ್‌ಗಳು ಕಳವಾಗಿರುವ ಪ್ರಕರಣಗಳು ಹೆಚ್ಚಾಗಿ ವರದಿಯಾಗಿರುತ್ತದೆ. ಈ ಸಂಬಂಧ ಆರೋಪಿಗಳ ಪತ್ತೆಗಾಗಿ ಅಪರಾಧ ವಿಭಾಗದ ಸಿಬ್ಬಂದಿಯವರುಗಳನ್ನು ನಿಯೋಜಿಸಿರುತ್ತೆ. ಸಿಬ್ಬಂದಿಯವರು ದಿನಾಂಕ 29-II-2023 ರಂದು ಸಂಜೆ ವೇಳೆಯಲ್ಲಿ ಯಶವಂತಪುರ ಠಾಣಾ ಸರಹದ್ದಿನ ಮತ್ತಿಕೆರೆ, ರಾಮಯ್ಯ ಕಾಲೇಜ್ ಬಳಿ ಗಸ್ತಿನಲ್ಲಿರುವಾಗ ಮೂರು ಜನ ವ್ಯಕ್ತಿಗಳು ಅನುಮಾನಾಸ್ಪದವಾಗಿ ಓಡಾಡುತ್ತಿದ್ದರು ಅವರುಗಳನ್ನು ಹಿಡಿದು ಪತ್ನಿಸಲಾಗಿ ಅವರುಗಳ ಬಳಿ 7 ಮೊಬೈಲ್ ಫೋನ್‌ಗಳು ಪತ್ತೆಯಾಗಿರುತ್ತದೆ. ಅವರುಗಳನ್ನು ಠಾಣೆಗೆ ಕರೆತಂದು ವಿಚಾರ ಮಾಡಿದಾಗ ಲ್ಯಾಪ್‌ಟಾಪ್ ಕಳವು ಮಾಡಿರುವ ಬಗ್ಗೆ ನುಡಿದಿರುತ್ತಾರೆ. ಈ ಕುರಿತು ಯಶವಂತಪುರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಈ ಪ್ರಕರಣದಲ್ಲಿ ವಶಕ್ಕೆ ಪಡೆದುಕೊಂಡಿದ್ದ ಮೂರು ಜನ ವ್ಯಕ್ತಿಗಳನ್ನು ಹೆಚ್ಚಿನ ವಿಚಾರಣೆಗೊಳಪಡಿಸಿದಾಗ ಅವರುಗಳ ಬಳಿ ಇರುವ ಮೊಬೈಲ್ ಫೋನ್‌ಗಳು ಕಳವು ಮಾಡಿ ಮಾರಾಟ ಮಾಡಲು ಬಂದಿರುವುದಾಗಿ ತಿಳಿಸಿದರು. ಅಲ್ಲದೆ ಆ ವ್ಯಕ್ತಿಗಳು ನೀಡಿದ ಮಾಹಿತಿ ಮೇರೆಗೆ ಸುಮಾರು 16 ಲಕ್ಷ ಬೆಲೆ ಬಾಳುವ ಒಟ್ಟು 50 ವಿವಿಧ ಕಂಪನಿ ಲ್ಯಾಪ್ ಟಾಪ್‌ಗಳು ಹಾಗೂ ವಿವಿಧ ಕಂಪನಿಯ 7 ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ವಶಕ್ಕೆ ಪಡೆದ ವ್ಯಕ್ತಿಗಳು ಮೂಲತಃ ತಮಿಳುನಾಡು ಮತ್ತು ಆಂಧ್ರಪ್ರದೇಶ ರಾಜ್ಯದವರಾಗಿದ್ದು, ಈ ವ್ಯಕ್ತಿಗಳು ಕಾಲೇಜ್ ವಿದ್ಯಾರ್ಥಿಗಳು ಹೆಚ್ಚಾಗಿ ವಾಸವಾಗಿರುವ ಪ್ರದೇಶಗಳಲ್ಲಿ ಸುತ್ತಾಡಿ ಪಿ.ಜಿ. ಹಾಸ್ಟೆಲ್‌ಗಳನ್ನು ಗುರುತಿಸಿಕೊಂಡು ಅವರುಗಳು ಬೆಳಗಿನ ಸಮಯದಲ್ಲಿ ವಾಯು ವಿಹಾರ ಮತ್ತು ಇತರೆ ಕಡೆಗಳಲ್ಲಿ ಹೋಗುವ ಸಮಯವನ್ನು ಗಮನಿಸಿಕೊಂಡು ಅವರುಗಳ ಕೊಠಡಿಗೆ ಹೋಗಿ ಮೊಬೈಲ್ ಫೋನ್ ಮತ್ತು ಲ್ಯಾಪ್‌ಟಾಪ್‌ಗಳನ್ನು ಕಳವು ಮಾಡುತ್ತಿದ್ದಾಗಿ ತನಿಖೆಯಿಂದ ತಿಳಿದು ಬಂದಿರುತ್ತದೆ.
ಈ ವ್ಯಕ್ತಿಗಳಿಂದ ಯಶವಂತಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ 25 ಲ್ಯಾಪ್‌ಟಾಪ್ ಪ್ರಕರಣಗಳು ಪತ್ತೆಯಾಗಿರುತ್ತವೆ. ಉಳಿದ ಲ್ಯಾಪ್‌ಟಾಪ್ ಮತ್ತು ಮೊಬೈಲ್ ಫೋನ್‌ಗಳ ಕಳವು ಪ್ರಕರಣಗಳ ಮಾಹಿತಿ ಪಡೆಯಲಾಗುತ್ತಿದೆ. ಈ ಪ್ರಕರಣದಲ್ಲಿ ಇನ್ನು 4 ಜನ ವ್ಯಕ್ತಿಗಳು ತಲೆಮರೆಸಿಕೊಂಡಿದ್ದು, ಅವರುಗಳ ಪತ್ತೆ ಕಾರ್ಯ
ಪ್ರಗತಿಯಲ್ಲಿದೆ.
ಪ್ರಕರಣದ ಪತ್ತೆ ಕಾರ್ಯವನ್ನು ಉತ್ತರ ವಿಭಾಗ ಡಿಸಿಪಿ ಶ್ರೀ. ಸೈದಲು ಅಡಾವತ್ ರವರ ಮಾರ್ಗದರ್ಶನದಲ್ಲಿ ಶ್ರೀಮತಿ ಮೇರಿ ಶೈಲಜ, ಎ.ಸಿ.ಪಿ. ಯಶವಂತಪುರ ಉಪವಿಭಾಗ ರವರ ನೇತೃತ್ವದಲ್ಲಿ ಯಶವಂತಪರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಮತ್ತು ಸಿಬ್ಬಂದಿಯುವರುಗಳು ಆರೋಪಿಗಳನ್ನು ದಸ್ತಗಿರಿ ಮಾಡುವಲ್ಲಿ ಯಶಸ್ವಿಯಾಗಿರುತ್ತಾರೆ.