ಹೈ ಗ್ರೌಂಡ್ ಪೊಲೀಸ್ ಠಾಣಾ ಸರಹದ್ದಿನ ಹರೆಕೃಷ್ಣ ರಸ್ತೆಯಲ್ಲಿ ನಿಲ್ಲಿಸಿದ್ಧ ದ್ವಿಚಕ್ರ ವಾಹನ ಕಳ್ಳತನವಾಗಿರುವ ಬಗ್ಗೆ ಪಿರಾದುದಾರರು ದಿನಾಂಕ:11/08/2023 ರಂದು ನೀಡಿದ ದೂರಿನ ಮೇರೆಗೆ ಕಳ್ಳತನ ಪ್ರಕರಣ ದಾಖಲಸಿ, ಕಾರ್ಯಪ್ರವೃತ್ತರಾದ ಹೈಗೌಂಡ್ ಪೊಲೀಸರು ಬೆಂಗಳೂರಿನ ವಿವೇಕನಗರದ ಇಬ್ಬರು ಆರೋಪಿಗಳನ್ನು ದಸ್ತಗಿರಿ ಮಾಡಿ, ಅವರು ನೀಡಿದ ಮಾಹಿತಿ ಮೇಲೆಗೆ ಅವರಿಂದ 4 ಯಮಹ ಆರ್.ಎಕ್ಸ್ ಹಾಗೂ 1 ಹೋಂಡಾ ಡಿಯೋ ದ್ವಿಚಕ್ರ ವಾಹನಗಳನ್ನು ಅಮಾನತ್ತು ಪಡಿಸಿಕೊಂಡಿರುತ್ತದೆ.
ವಿಚಾರಣೆಯ ಸಂದರ್ಭದಲ್ಲಿ ಆರೋಪಿಗಳು ವೀಲಿಂಗ್ ಮಾಡಿ, ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಲೈಕ್ ಮತ್ತು ಕಮೆಂಟ್ಗಳನ್ನು ಪಡೆಯುವ ಉದ್ದೇಶಕ್ಕಾಗಿ, ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡಿ, ನಂಬರ್ ಪ್ಲೇಟ್ಗಳನ್ನು ತೆಗೆದುಹಾಕಿ ರಸ್ತೆಗಳಲ್ಲಿ ವಿಲಿಂಗ್ ಮಾಡುತ್ತಿದ್ದರೆಂದು ತಿಳಿದು ಬಂದಿರುತ್ತದೆ.
ಈ ಕಾರ್ಯಾಚರಣೆಯನ್ನು ಶ್ರೀ ಶ್ರೀನಿವಾಸಗೌಡ ಆರ್. ಉಪ ಪೊಲೀಸ್ ಆಯುಕ್ತರು, ಕೇಂದ್ರ ವಿಭಾಗ, ಬೆಂಗಳೂರು ನಗರ ರವರ ಮಾರ್ಗದರ್ಶನದಲ್ಲಿ – ಎಸಿಪಿ ಶ್ರೀ. ಚಂದನ್ ಕುಮಾರ್, ಶೇಷಾದ್ರಿಪುರಂ ಉಪ ವಿಭಾಗ ರವರ ನೇತೃತ್ವದಲ್ಲ, ಹೈಂಡ್ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಶ್ರೀ ಸಿ.ಚ.ಶಿವಸ್ವಾಮಿ ರವರ ಹಾಗೂ ಸಿಬ್ಬಂದಿರವರ ತಂಡ ಪ್ರಕರಣವನ್ನು ಬೇದಿಸುವಲ್ಲಿ ಯಶಸ್ವಿಯಾಗಿರುತ್ತಾರೆ.
ಈ ಉತ್ತಮ ಕಾರ್ಯವನ್ನು ಇಲಾಖೆಯ ಹಿರಿಯ ಅಧಿಕಾರಿಗಳು ಶ್ಲಾಘಿಸಿರುತ್ತಾರೆ.