ದಾವಣಗೆರೆ ಸ್ಮಾರ್ಟ್ ಸಿಟಿ ಲಿ. ವತಿಯಿಂದ ನಗರದ ಗುರುಭವನ ರಸ್ತೆಯಲ್ಲಿ ಸ್ವಾತಂತ್ರ್ಯ ಸುವರ್ಣ ಮಹೋತ್ಸವ ಅಂಗವಾಗಿ 03 ದಿನಗಳ ಕಾಲ ಹಮ್ಮಿಕೊಂಡಿ ಅಜಾದ್ ಕಾ ಅಮೃತ್ ಮಹೋತ್ಸವದ ಕಾರ್ಯಕ್ರಮದಲ್ಲಿ ದಾವಣಗೆರೆ ಜಿಲ್ಲಾ ಪೊಲೀಸ್ ಇಲಾಖೆಯಿಂದ 112 ದಾವಣಗೆರೆ, ಸೈಬರ್ ಕ್ರೈಂ, ಟ್ರಾಫಿಕ್, ಕ್ರೈಮ್, ಮಾಧಕ ವಸ್ತುಗಳು ಬಗ್ಗೆ ಪೋಸ್ಟರ್ ಗಳ ಮೂಲಕ ಹಾಗೂ ಬಿತ್ತಿಪತ್ರಗಳನ್ನು ಮೂಲಕ ಸಾರ್ವಜನಿಕರಿಗೆ, ವಿದ್ಯಾರ್ಥಿಗಳಿಗೆ ನೀಡಿ ಮಾಹಿತಿ ಜಾಗೃತಿ ಮೂಡಿಸಲಾಯಿತು.

ಕಾರ್ಯಕ್ರಮದಲ್ಲಿ ದಾವಣಗೆರೆ ಜಿಲ್ಲಾ ಪೊಲೀಸ್ ಶ್ವಾನ ದಳದ ಪ್ರದರ್ಶನ ಏರ್ಪಡಿಸಲಾಗಿತ್ತು.ಪೊಲೀಸ್ ಇಲಾಖೆಯ ಜಾಗೃತಿ ಪ್ರದರ್ಶನವನ್ನು ಶ್ರೀ ಎಸ್.ಎ. ರವೀಂದ್ರನಾಥ, ಮಾನ್ಯ ಶಾಸಕರು ಹಾಗೂ ಶ್ರೀ ಶಿವಯೋಗಿಸ್ವಾಮಿ, ಮಾಜಿ ಎಂಎಲ್ಸಿ ರವರು ಉದ್ಘಾಟಿಸಿದರು. ಮಾನ್ಯ ಜಿಲ್ಲಾಧಿಕಾರಿಗಳಾದ ಶ್ರೀ ಮಹಾಂತೇಶ್ ಬೀಳಗಿ, ಪೂಜ್ಯ ಮಹಾ ಪೌರರಾದ ಎಸ್.ಟಿ.ವೀರೇಶ್ , ಸ್ಮಾರ್ಟ್ ಸಿಟಿ ಲಿ. ಮ್ಯಾನೇಜರ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ನಮ್ಮ ಮುಖ್ಯ ವರದಿಗಾರರು ಕರ್ನಾಟಕದಿಂದ,
