ಕೊಡಗು ಜಿಲ್ಲೆಯ ಗೋಣಿಕೊಪ್ಪ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ದರೋಡೆ ಪ್ರಕರಣದ ಆರೋಪಿಗಳನ್ನು ಪತ್ತೆ ಮಾಡುವಲ್ಲಿ ಕೊಡಗು ಜಿಲ್ಲಾ ಪೊಲೀಸ್ ಯಶಸ್ವಿಯಾಗಿದೆ.
ಕೇರಳ ರಾಜ್ಯ ಮಲಪ್ಪುರಂ ಜಿಲ್ಲೆ ನಿವಾಸಿ ಶಮ್ಜಾದ್ ರವರು ಕೇರಳ ರಾಜ್ಯದಿಂದ ಹೆಚ್ಆರ್-26 ಸಿಎಲ್-5200 ರ ಕಾರಿನಲ್ಲಿ ತೆರಳಿ ಮೈಸೂರು ನಗರದ ಆಶೋಕಪುರ ರಸ್ತೆಯಲ್ಲಿರುವ ಯೋಗೇಶ್ ಎಂಬುವವರ ಜ್ಯುವೆಲರ್ಸ್ ಅಂಗಡಿಯಲ್ಲಿ 750 ಗ್ರಾಂ ಚಿನ್ನವನ್ನು ಮಾರಾಟ ಮಾಡಿ ರೂ. 50,00,000/- ಹಣವನ್ನು ಪಡೆದುಕೊಂಡು ಕೇರಳ ರಾಜ್ಯಕ್ಕೆ ತೆರಳುವಾಗ ದಿನಾಂಕ: 09-02-2023 ರ ಬೆಳಗ್ಗಿನ ಸಮಯ ಸುಮಾರು 2-00 ಗಂಟೆಗೆ ಗೋಣಿಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯ ದೇವರಪುರ ಗ್ರಾಮದ ರಾಜ್ಯ ಹೆದ್ದಾರಿಯಲ್ಲಿ ಒಂದು ಪಿಕ್ಅಪ್ ವಾಹನನ್ನು ರಸ್ತೆಗೆ ಅಡ್ಡವಾಗಿ ನಿಲ್ಲಿಸಿ 10-15 ಜನರು ಕಾರನ್ನು ಸುತ್ತುವರೆದು ಕಾರಿನಲ್ಲಿದ್ದ ಶಮ್ಜಾದ್ ಹಾಗೂ ಅಫ್ನುರವರಿಗೆ ಹಲ್ಲೆ ನಡೆಸಿ ಬಲವಂತವಾಗಿ ಕಾರನ್ನು ಮತ್ತು ಕಾರಿನಲ್ಲಿದ್ದ 50,00,000/- ರೂ ನಗದು ಹಣವನ್ನು ದರೋಡೆ ಮಾಡಿರುವ ಕುರಿತು ನೀಡಿದ ದೂರಿನ ಮೇರೆ ಗೋಣಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿರುತ್ತದೆ.
ಕೆ.ರಾಮರಾಜನ್, ಐಪಿಎಸ್, ಪೊಲೀಸ್ ಆಧೀಕ್ಷಕರು, ಕೊಡಗು ಜಿಲ್ಲೆ, ಕೆ.ಎಸ್.ಸುಂದರರಾಜ್, ಅಪರ ಪೊಲೀಸ್ ಅಧೀಕ್ಷಕರು, ಕೊಡಗು ಜಿಲ್ಲೆ ರವರ ಮಾರ್ಗದರ್ಶನದಲ್ಲಿ ಆರ್. ಮೋಹನ್ ಕುಮಾರ್, ಡಿಎಸ್ಪಿ, ವಿರಾಜಪೇಟೆ ರವರ ಉಸ್ತುವಾರಿಯಲ್ಲಿ ಈ ಕೆಳಕಂಡ ಅಧಿಕಾರಿ/ಸಿಬ್ಬಂದಿಗಳ ವಿಶೇಷ ತಂಡವನ್ನು ರಚಿಸಿ ತನಿಖೆ ಕೈಗೊಂಡು ದರೋಡೆ ಪ್ರಕರಣದ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿರುತ್ತಾರೆ.
1. ಗೋವಿಂದರಾಜು, ಸಿಪಿಐ, ಗೋಣಿಕೊಪ್ಪ ವೃತ್ತ.
2. ಶಿವರುದ್ರ .ಬಿ.ಎಸ್, ಸಿಪಿಐ, ವಿರಾಜಪೇಟೆ ವೃತ್ತ.
3. ಮಂಜಪ್ಪ.ಸಿ.ಎ, ಸಿಪಿಐ, ಕುಟ್ಟ ವೃತ್ತ.
4. ರೂಪದೇವಿ ಬಿರಾದರ್, ಪಿಎಸ್ಐ, ಗೋಣಿಕೊಪ್ಪ ಪೊ.ಠಾ.
5. ನವೀನ್.ಜಿ, ಪಿಎಸ್ಐ, ಪೊನ್ನಂಪೇಟೆ ಪೊ.ಠಾ.
6. ಹೆಚ್.ಎಸ್ ಸುಬ್ರಮಣ್ಯ, ಪಿಎಸ್ಐ, ಪೊನ್ನಂಪೇಟೆ ಪೊ.ಠಾ.
7. ರವೀಂದ್ರ, ಪಿಎಸ್ಐ, ವಿರಾಜಪೇಟೆ ನಗರ ಪೊ.ಠಾ.
8. ಸಿ.ಸಿ. ಮಂಜುನಾಥ್, ಪಿಎಸ್ಐ, ವಿರಾಜಪೇಟೆ ಗ್ರಾಮಾಂತರ ಪೊ.ಠಾ.
ಗೋಣಿಕೊಪ್ಪ ಪೊ.ಠಾ, ವಿರಾಜಪೇಟೆ ನಗರ & ಗ್ರಾಮಾಂತರ ಪೊ.ಠಾ, ಪೊನ್ನಂಪೇಟೆ ಪೊ.ಠಾ ಮತ್ತು ಕುಟ್ಟ ಪೊಲೀಸ್ ಠಾಣೆ ಸಿಬ್ಬಂದಿಗಳು ಹಾಗೂ ಡಿಸಿಆರ್ಬಿ & ತಾಂತ್ರಿಕ ವಿಭಾಗದ ಸಿಬ್ಬಂದಿಗಳು.
ಈ ಪ್ರಕರಣ ದ ಆರೋಪಿಗಳ ಪತ್ತೆಗಾಗಿ ವಿಶೇಷ ತನಿಖಾ ತಂಡವು ಹಲವು ಆಯಾಮಗಳಲ್ಲಿ ತನಿಖೆ ನಡೆಸಿ
1. ಆರ್ಜಿ ಗ್ರಾಮದ ನಿವಾಸಿಯಾದ ನಾಗೇಶ್.ಬಿ.ಜಿ,
2. ಬಿಟ್ಟಂಗಾಲ ಗ್ರಾಮದ ಪೆಗ್ಗರೆಕಾಡು ಪೈಸಾರಿ ನಿವಾಸಿಯಾದ ಪ್ರಶಾಂತ್,
3. ಬಿಟ್ಟಂಗಾಲ ಗ್ರಾಮ ಪೆಗ್ಗರೆಕಾಡು ಪೈಸಾರಿ ನಿವಾಸಿಯಾದ ರಮೇಶ್.ಎ.ಕೆ @ ಗಾಂಜಾ ರಮೇಶ್,
4. ವಿರಾಜಪೇಟೆಯ ಅರಸುನಗರದ ನಿವಾಸಿಯಾದ ರಮೇಶ್.ಪಿಸಿ,
5. ಕೇರಳ ರಾಜ್ಯ ಮೂಲದ ತೊನ್ನಪರಂಬಿಲ್ ಜಂಶಬ್,
6. ಕೇರಳ ರಾಜ್ಯ ಮೂಲದ ಕೊನ್ನಪರಂಬಿಲ್ ಅರುಣ, 29 ವರ್ಷ,
ಈ ಆರೋಪಿಗಳನ್ನು ವಿಶೇಷ ತನಿಖಾ ತಂಡವು ದಿನಾಂಕ: 18-12-2023 ರಂದು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿರುತ್ತದೆ ಹಾಗೂ ಅಪರಾಧ ಕೃತ್ಯಕ್ಕೆ ಬಳಸಿದ 02 ವಾಹನಗಳು (ಮಹೀಂದ್ರ ಪಿಕ್ಅಪ್ & ಮಾರುತಿ ಸ್ವಿಫ್ಟ್ ಡಿಸೈ ರ್), 05 ಮೊಬೈಲ್ಗಳು ಮತ್ತು ರೂ. 3 ಲಕ್ಷಗಳ ನಗದನ್ನು ಆರೋಪಿಗಳಿಂದ ವಶಪಡಿಸಿಕೊಳ್ಳಲಾಗಿದೆ.
ಸದರಿ ಪ್ರಕರಣದ ದೂರುದಾರರು ನೀಡಿರುವ ದೂರಿನಲ್ಲಿ 750 ಗ್ರಾಂ ಚಿನ್ನ ಮಾರಾಟ ಮಾಡಿ ರೂ. 50 ಲಕ್ಷ ಹಣ ಪಡೆದಿರುವುದಾಗಿ ತಿಳಿಸಿದ್ದು, 993 ಗ್ರಾಂ ಚಿನ್ನವನ್ನು ಮಾರಾಟ ಮಾಡಿ ರೂ. 61,70,000/- ಗಳನ್ನು ಪಡೆದಿರುವುದಾಗಿ ತನಿಖೆಯಲ್ಲಿ ಕಂಡು ಬಂದಿರುತ್ತದೆ ಹಾಗೂ ಮಾರಾಟ
ಮಾಡಿರುವ ಚಿನ್ನವನ್ನು ವಶಕ್ಕೆ ಪಡೆಯಲಾಗಿರುತ್ತದೆ.
ಈ ಪ್ರಕರಣದಲ್ಲಿ ದೂರುದಾರರು ಚಿನ್ನ ಮಾರಾಟ ಮಾಡಿ ಪಡೆದಿರುವ ಹಣಕ್ಕೆ ಯಾವುದೇ ಬಿಲ್ ಪಡೆಯದೇ ನಗದು ರೂ. 61,70,000/- ಗಳ ವ್ಯವಹಾರಿಸಿರುವ ಕುರಿತು ವಾಣಿಜ್ಯ ತೆರಿಗೆ ಇಲಾಖೆ ಹಾಗೂ ಆದಾಯ ತೆರಿಗೆ ಇಲಾಖೆಗಳಿಗೆ ವರದಿಯನ್ನು ಸಲ್ಲಿಸಲಾಗುವುದು ಮತ್ತು ಬಿಲ್ ಪಡೆಯದಿರುವ ಕುರಿತು ಜಿಎಸ್ಟಿ ಇಲಾಖೆಗೆ ವರದಿಯನ್ನು ಸಲ್ಲಿಸಲಾಗುವುದು.
ಸದರಿ ಪ್ರಕರಣದಲ್ಲಿನ ಬಾಕಿ ಉಳಿದ ಆರೋಪಿಗಳಿಗಾಗಿ ವಿಶೇಷ ತನಿಖಾ ತಂಡದಿಂದ ಪತ್ತೆ ಕಾರ್ಯಪ್ರಗತಿಯಲ್ಲಿ ಇರುತ್ತದೆ.
ಸದರಿ ಪ್ರಕರಣದ ಪತ್ತೆ ಕಾರ್ಯದಲ್ಲಿ ಪಾಲ್ಗೊಂಡ ಎಲ್ಲಾ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿರವರುಗಳ ಕಾರ್ಯವನ್ನು ಕೆ.ರಾಮರಾಜನ್, ಐಪಿಎಸ್, ಪೊಲೀಸ್ ಅಧೀಕ್ಷಕರು, ಕೊಡಗು ಜಿಲ್ಲೆ, ಮಡಿಕೇರಿ ರವರು ಶ್ಲಾಘಿಸಿರುತ್ತಾರೆ.