ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಘಟಕದ ವಾರ್ಷಿಕ ಪೊಲೀಸ್ ಕ್ರೀಡಾಕೂಟವು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ ಬಿ.ಎಂ ಲಕ್ಷ್ಮೀ ಪ್ರಸಾದ್ ಐ.ಪಿ.ಎಸ್ ರವರ ನೇತೃತ್ವದಲ್ಲಿ ದಿನಾಂಕ 15.03.2021 ಮತ್ತು 16.03.2021 ರಂದು ಪೊಲೀಸ್ ಕವಾಯತು ಮೈದಾನ ಮಂಗಳೂರು ಇಲ್ಲಿ ವಿಜೃಂಭನೆಯಿಂದ ನಡೆಯಿತು. ಕ್ರೀಡಾಕೂಟದ ಉದ್ಘಾಟನೆಯನ್ನು ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿ ಶ್ರೀ ಡಾ| ರಾಜೇಂದ್ರ ಕೆ ವಿ ಐ.ಎ.ಎಸ್ ನೆರವೇರಿಸಿದರು. ಮುಖ್ಯ ಅತಿಥಿಯಾಗಿ ಪಶ್ಚಿಮ ವಲಯ ಪೊಲೀಸ್ ಮಹಾನಿರೀಕ್ಷಕರಾದ ಶ್ರೀ ದೇವಜ್ಯೋತಿ ರೇ ಐ.ಪಿ.ಎಸ್ ಹಾಜರಿದ್ದರು.

ಕ್ರೀಡಾಕೂಟದ ಅಂಗವಾಗಿ ಪಥಸಂಚಲನ, ವಿವಿಧ ಬಗೆಯ ಕ್ರೀಡೆಗಳನ್ನು ಆಯೋಜಿಸಲಾಗಿತ್ತು. ದಿನಾಂಕ 16.03.2021 ರ ರಾತ್ರಿ ಜಿಲ್ಲೆಯ ಪೊಲೀಸ್ ಆಧಿಕಾರಿ/ಸಿಬ್ಬಂದಿಗಳಿಗೆ ಮತ್ತು ಅವರ ಕುಟುಂಬ ಸದಸ್ಯರಿಗೆ ಔತಣಕೂಟ ಏರ್ಪಡಿಸಲಾಗಿತ್ತು.
ನಮ್ಮ ಮುಖ್ಯ ವರದಿಗಾರರು ಕರ್ನಾಟಕದಿಂದ,
ಜೆ .ಜಾನ್ ಪ್ರೇಮ್