ಬೆಂಗಳೂರು ನಗರ, ಆಗ್ನೇಯ ವಿಭಾಗದ , ಉಪ ಪೊಲೀಸ್ ಆಯುಕ್ತರು ಶ್ರೀ.ನಾಥ್ ಮಹಾದೇವ್ ಜೋಷಿ ಐ.ಪಿ.ಎಸ್,ಮಡಿವಾಳ ಉಪವಿಭಾಗದ ಸಹಾಯಕ ಪೊಲೀಸ್ ಕಮೀಷನರ್ ಶ್ರೀ .ಸುಧೀರ್ ಎಂ ಹೆಗ್ಡೆ ರವರ ಮಾರ್ಗದರ್ಶನದಲ್ಲಿ ,ಕೋರಮಂಗಲ ಪೊಲೀಸ್ ಠಾಣೆಯ ಪಿ.ಐ ಶ್ರೀ .ರವಿ ಕೆ .ಬಿ ರವರ ನೇತೃತ್ವದಲ್ಲಿ ಮಾದಕ ವಸ್ತು ಮಾರಾಟ ಜಾಲದ ಪತ್ತೆ ಸಂಬಂಧ ವಿಶೇಷ ತಂಡವನ್ನು ನೇಮಕ ಮಾಡಿದ್ದು ಅದರಂತೆ ಕೋರಮಂಗಲ ಪೊಲೀಸರ ವಿಶೇಷ ತಂಡವು ದಿನಾಂಕ :10-4-2021 ರಂದು ಬೆಂಗ್ಳೂರು ನಗರ ಕೋರಮಂಗಲ ಪೊಲೀಸ್ ಠಾಣಾ ಸರಹದ್ದು ,ಕೋರಮಂಗಲ ಒಂದನೇ ಬ್ಲಾಕ್ \’ಬಲ್ಲರೆ ಕಾಲೋನಿ ಬಳಿಯ ಖಾಲಿ ಜಾಗದಲ್ಲಿ ಗಾಂಜಾ ಮಾರಾಟ ಮಾಡಲು ಆಸಾಮಿಗಳು ಬರಬಹುದೆಂದು ನೀಡಿದ ಖಚಿತ ಮಾಹಿತಿಯ ಮೇರೆಗೆ ಶ್ರೀ .ಸಿದ್ಧಪ್ಪ ಪಿ. ಎಸ್ .ಐ. ರವರು ವರದಿಯನ್ನು ನೀಡಿದ್ದು ಸದರಿ ವರದಿಯ ಸಂಬಂಧ ಠಾಣಾ ಎನ್. ಡಿ .ಪಿ .ಎಸ್ .ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ದಾಳಿ ಆಯೋಜನೆ ಮಾಡಿ ಮಾದಕ ವಸ್ತು ಮಾರಾಟ ಮಾಡಲು ತಂದಿದ್ದ ಒಟ್ಟು 141 ಕೆ.ಜಿ 250 ಗ್ರಾಂ ತೂಕದ ಮಾದಕ ವಸ್ತು ಗಾಂಜಾ .1ವಾಹನ 1ಲಾಂಗು ನಗದು ಹಣ ಹಾಗೂ ಗಾಂಜಾ ಮಾರಾಟಕ್ಕೆ ಸಂಬಂಧಿಸಿದ ಇತರ ಪರಿಕರಗಳನ್ನು ವಶಕ್ಕೆ ಪಡಿಸಿಕೊಂಡಿದ್ದಾರೆ .ಅಮಾನತು ಪಡಿಸಿಕೊಂಡಿದ್ದ ಅಂದಾಜು ಬೆಲೆ 84,60,000/- ರೂ .
ಈ ಮೇಲ್ಕಂಡ ಕಾರ್ಯಾ ಚರಣೆಯನ್ನು ಆಗ್ನೇಯ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಶ್ರೀ .ಶ್ರೀನಾಥ್ ಮಹಾದೇವ ಜೋಷಿ ಐ.ಪಿ.ಎಸ್.ಮತ್ತು ಮಡಿವಾಳ ಉಪವಿಭಾಗದ ಸಹಾಯಕ ಪೊಲೀಸ್ ಕಮಿಷನರ್ ಶ್ರೀ .ಸುಧೀರ್ ಎಂ ಹೆಗ್ಡೆ ರವರ ಮಾರ್ಗದರ್ಶನದಲ್ಲಿ ಕೋರಮಂಗಲ ಪೊಲೀಸ್ ಠಾಣೆ ಪೊಲೀಸ್ ಇನ್ಸ್ ಪೆಕ್ಟರ್ ಶ್ರೀ .ರವಿ ಕೆ. ಬಿ. ಪಿ.ಎಸ್ .ಐ .ರವರಾದ ಶ್ರೀ .ಸಿದ್ಧಪ್ಪ . ಪಿ.ಎಸ್ .ಐ.ಶ್ರೀ .ರವೀಂದ್ರ .ಎ .ಎಸ್. ಐ. ಶ್ರೀ. ಜಯಪ್ರಕಾಶ್ \’ಶ್ರೀ ವೆಂಕಟೇಶ್ ಶ್ರೀ ಪ್ರಶಾಂತ್ ಶ್ರೀಕಾರ್ತಿಕ್ ಶ್ರೀ ಜಗದೀಶ್ ರವರುಗಳ ತಂಡವು ಯಶಸ್ವಿಯಾಗಿ ಕಾರ್ಯಾಚರಣೆ ನಡೆಸಿದ್ದಾರೆ .
ನಮ್ಮ ಮುಖ್ಯ ವರದಿಗಾರರು ಕರ್ನಾಟಕದಿಂದ,
ಜೆ .ಜಾನ್ ಪ್ರೇಮ್