ಈ ಕೇಸಿನ ಸಂಕ್ಷಿಪ್ತ ಸಾರಾಂಶವೇನೆಂದರೆ ಪಿತ್ಯಾದುದಾರರಾದ ಶ್ರೀಮತಿ ಗೀತಾಸಿ. ಕೊಂ ರಾಮಚಂದ್ರ ಬಿ.ಜಿ. 34ವರ್ಷ ವಾಸ ನಂ-11, 3ನೇ ಕ್ರಾಸ್, 6ನೇ ಮೈನ್, ಭೈರವೇಶ್ವರನಗರ, ಲಗ್ಗೆರೆ, ಬೆಂಗಳೂರು ರವರು ರಾಜಗೋಪಾಲ ನಗರ ಪೊಲೀಸ್ ಠಾಣೆಗೆ ಹಾಜರಾಗಿ ನನ್ನ ಗಂಡ ರಾಮಚಂದ್ರ ರವರು ಬಿಜಿನೆಸ್ ಕೆಲಸದ ಪ್ರಯುಕ್ತ ದಿನಾಂಕ: 11/12/2023 ರಂದು ಗುಲ್ಬರ್ಗಾಕ್ಕೆ ಹೋಗಿರುತ್ತಾರೆ. ನಾನು ಈ ದಿನ ದಿನಾಂಕ:12/12/2023 ರಂದು ಬೆಳಿಗ್ಗೆ ಸುಮಾರು 08-00 ಗಂಟೆಗೆ ನನ್ನ ಮಗಳನ್ನು ಸ್ಕೂಲ್ ವ್ಯಾನ್‌ನಲ್ಲಿ ಸ್ಕೂಲ್‌ಗೆ ಕಳುಹಿಸಿ ನಾನು ಎಂದಿನಂತೆ ಬೆಳಿಗ್ಗೆ ಸುಮಾರು 08-45 ಗಂಟೆಗೆ ಕೆಲಸಕ್ಕೆ ಹೋಗಿರುತ್ತೇನೆ. ನನ್ನ ಮಗಳು ಸಂಜೆ 04-00ಗಂಟೆಗೆ ಸ್ಕೂಲ್ ಮುಗಿಸಿಕೊಂಡು ವ್ಯಾನ್‌ನಲ್ಲಿ ಹೆಗ್ಗನಹಳ್ಳಿಯಲ್ಲಿರುವ ನಮ್ಮ ತಾಯಿ ಮನೆಗೆ ಹೋಗುತ್ತಾಳೆ. ನಂತರ ನಾನು ಸಂಜೆ ಸುಮಾರು 06-45 ಗಂಟೆಗೆ ಕೆಲಸ ಮುಗಿಸಿಕೊಂಡು ಮನೆಯ ಬಳಿ ಬಂದಾಗ ಮನೆಯ ಗೇಟ್ ಓಪನ್ ಆಗಿದ್ದು ನಂತರ ಮನೆಗೆ ಬರಲಾಗಿ ಮನೆಯ ಬಾಗಿಲು ಹೊಡೆದಿದ್ದು ಬಾಗಿಲು ಓಪನ್ ಆಗಿತ್ತು, ನಂತರ ಒಳ ಹೋಗಿ ನೋಡಲಾಗಿ ಮನೆಯ ಬೆಡ್ ರೂಂನಲ್ಲಿರುವ ಬೀರುವಿನ ಬಾಗಿಲು ಹೊಡೆದಿದ್ದು ಬೀರುವಿನ ಸೇಫ್ ಲಾಕರ್‌ನಲ್ಲಿಟ್ಟಿದ್ದ ಸುಮಾರು 350 ಗ್ರಾಂ ತೂಕದ ಚಿನ್ನಾಬರಣಗಳು ಹಾಗೂ ಸುಮಾರು ಒಂದು ಕೆ.ಜಿ. ತೂಕದ ಬೆಳ್ಳಿಯ ಆಭರಣಗಳು ಇರಲಿಲ್ಲ. ಯಾರೋ ಕಳ್ಳರು ಯಾವುದೋ ಆಯುಧದಿಂದ ಮನೆಯ ಬಾಗಿಲಿನ ಬೀಗ ಹೊಡೆದು ಮನೆಯ ಬೀರುವುನಲ್ಲಿಟ್ಟಿದ್ದ ಚಿನ್ನದ ಆಭರಣಗಳು ಮತ್ತು ಬೆಳ್ಳಿಯ ವಸ್ತುಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ. ಇವುಗಳ ಒಟ್ಟು ಬೆಲೆ ಸುಮಾರು 10,50,000/-ರೂ ಬೆಲೆ ಬಾಳುವುದಾಗಿರುತ್ತವೆ. ಎಂದು ನೀಡಿದ ದೂರನ್ನು ಪಡೆದುಕೊಂಡು ಠಾಣಾ ಮೊ.ಸಂ:434/2023 ಕಲಂ: 454, 380 ಐಪಿಸಿ ರೀತ್ಯ ಪ್ರಕರಣವನ್ನು ದಾಖಲಿಸಿ, ಆರೋಪಿ ಮತ್ತು ಮಾಲು ಕಾರ್ಯ ಕೈಗೊಂಡಿರುತ್ತದೆ.
ಪ್ರಕರಣದ ತನಿಖೆಯ ಸಮಯದಲ್ಲಿ ಎ-2 ಆರೋಪಿಯಾದ ಅಭಿಷೇಕ್,ಜೆ @ ಅಭಿ ಬಿನ್ ಜಯರಾಮ್ 21ವರ್ಷವಾಸ ನಂ-ಇಲ್ಲಾ, ಮೇಘನಾ ಸ್ಟೋರ್ ಹತ್ತಿರ, 3ನೇ ಕ್ರಾಸ್, ಪ್ರೀತಿನಗರ, ಲಗ್ಗೆರೆ, ಬೆಂಗಳೂರು ಈತನನ್ನು ದಿನಾಂಕ: 17.12.2023 ರಂದು ದಸ್ತಗಿರಿ ಮಾಡಿ ಆರೋಪಿಯ ಮಾಹಿತಿಯ ಮೇರೆಗೆ ಕಳವು ಮಾಲು ಸ್ವೀಕಾರ ಮಾಡುತ್ತಿದ್ದಂತಹ ಎ-6 ಆರೋಪಿತೆಯಾದ ಶ್ರೀಮತಿ ಸುಧಾ ಕೋಂ ಲೇಟ್ ಪ್ರಕಾಶ್ 40ವರ್ಷ, ವಾಸ ನಂ-ಇಲ್ಲ, ಶಿವಗಣಪತಿ ದೇವಸ್ಥಾನ ದ ಹತ್ತಿರ, ಲವಕುಶನಗರ, ಲಗ್ಗೆರೆ, ಬೆಂಗಳೂರು, ಎ-7 ಆರೋಪಿತೆಯಾದ ಶ್ರೀಮತಿ ಲಕ್ಷ್ಮಮ್ಮ ಕೋಂ ಲೇಟ್ ಗಂಗಾಧರ. 60ವರ್ಷ ವಾಸ ನಂ-ಇಲ್ಲ. ಶಿವಗಣಪತಿ ದೇವಸ್ಥಾನದ ಹತ್ತಿರ, ಲವಕುಶನಗರ, ಲಗ್ಗೆರೆ, ಬೆಂಗಳೂರು ನಗರ ರವರುಗಳನ್ನು ದಿನಾಂಕ: 18.12.2023 ರಂದು ಹಾಗೂ ಎ-8 ಆರೋಪಿತೆಯಾದ ಶ್ರೀಮತಿ ಕಾವೇರಿ @ ಕಾವ್ಯಶ್ರೀ ಕೋಂ ಮಣಿಕಂಠ 22ವರ್ಷ, ವಾಸ ನಂ-ಇಲ್ಲ, 6ನೇ ಕ್ರಾಸ್, ಬೆಟ್ಟಹಳ್ಳಿ ಮುಖ್ಯರಸ್ತೆ, ಬೃಂದಾವನ ಬಡಾವಣೆ, ಆದಿತ್ಯ ನಗರ, ಎಂ.ಎಸ್.ಪಾಳ್ಯ ಹತ್ತಿರ, ಬೆಂಗಳೂರು ರವರನ್ನು ದಿನಾಂಕ: 19.12.2023 ರಂದು ದಸ್ತಗಿರಿ ಮಾಡಿರುತ್ತದೆ. ಹಾಗೂ ಸದರಿ ಆರೋಪಿಗಳ ಹಾಲಿ ನ್ಯಾಯಾಂಗ ಬಂಧನದಲ್ಲಿರುತ್ತಾರೆ.
ಆರೋಪಿಯ ಸ್ವ ಇಚ್ಛಾ ಹೇಳಿಕೆಯ ಮೇರೆಗೆ ಕಳವು ಮಾಡಿದ 12.00,000/-ರೂ ಬೆಲೆ ಬಾಳುವ 254 ಗ್ರಾಂ ತೂಕದ ಚಿನ್ನಾಭರಣಗಳನ್ನು ಅಮಾನತ್ತು ಪಡಿಸಿಕೊಂಡಿರುತ್ತದೆ.
ಆರೋಪಿಯ ದಸ್ತಗಿರಿಯಿಂದ ರಾಜಗೋಪಾಲನಗರ ಪೊಲೀಸ್ ಠಾಣೆಯ-01 ಪ್ರಕರಣ, ಸೋಲದೇವನಹಳ್ಳಿ ಪೊಲೀಸ್ ಠಾಣೆಯ-01 ಪ್ರಕರಣಗಳು ಪತ್ತೆಯಾಗಿರುತ್ತವೆ. ಹಾಗೂ ಉಳಿದ ಆರೋಪಿಗಳ ಪತ್ತೆ ಕಾರ್ಯ ಮುಂದುವರೆದಿರುತ್ತದೆ.
ಈ ಪತ್ತೆ ಕಾರ್ಯವನ್ನು ಮಾನ್ಯ ಶ್ರೀ ಸೈಮಲು ಆಡಾವತ್ ಐ.ಪಿ.ಎಸ್ ಉಪ ಪೊಲೀಸ್ ಆಯುಕ್ತರು, ಉತ್ತರ ವಿಭಾಗ,
ಬೆಂಗಳೂರು ನಗರ ರವರ ಮಾರ್ಗದರ್ಶನದಲ್ಲಿ ಮಾನ್ಯ ಶ್ರೀ ಸದಾನಂದ ಎ. ತಿಪ್ಪಣ್ಣವರ, ಸಹಾಯಕ ಪೊಲೀಸ್ ಆಯುಕ್ತರು, ಪೀಣ್ಯ ಉಪ-ವಿಭಾಗದ ರವರ ನಿರ್ದೇಶನದಲ್ಲಿ ರಾಜಗೋಪಾಲನಗರ ಪೊಲೀಸ್ ಠಾಣೆ ಪೊಲೀಸ್ ಇನ್ಸ್‌ಪೆಕ್ಟರ್ ಶ್ರೀ ಪುನೀತ್ ಬಿ.ಎನ್ ರವರ ನೇತೃತ್ವದಲ್ಲಿ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ರವರುಗಾಳದ ಶ್ರೀ ರಾಘವೇಂದ್ರ ಉಪರಿ ಮತ್ತು ಶ್ರೀ ಆದರ್ಶಗೌಡ, ಸಿಬ್ಬಂದಿಯವರಾದ ಶ್ರೀ ಹನುಮೇಶ್, ಶ್ರೀ ಪ್ರಸನ್ನ, ಶ್ರೀ ಶ್ರೀಧರ್ ನಿರ್ವಾಣಿ, ಶ್ರೀ ಮಂಜುನಾಥ್ ಕೆ ಎಸ್ . ಶ್ರೀ ಮಹಾಲಿಂಗಪ್ಪ, ಶ್ರೀ ಈಶ್ವರ ಬಾರ್ಕಿ, ಶ್ರೀ ಕಿರಣ್ ಗೌಡ, ಶ್ರೀ ಉಮೇಶ್, ಶ್ರೀ ಯಂಕಪ್ಪ, ಶ್ರೀ ಅಭಿಷೇಕ್, ಶ್ರೀ ವಿಷ್ಣು ಸುತ್ತಾರ, ಶ್ರೀ ರುದ್ರಮುನಿ, ಶ್ರೀ ನಾಗರಾಜು ರವರುಗಳು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿರುತ್ತಾರೆ.
ವರದಿ : ಬಾಲಾಜಿ