ರಾತ್ರಿ ವೇಳೆ ಹ್ಯಾಂಡಲ್ ಲಾಕ್ ಮುರಿದು ದ್ವಿ-ಚಕ್ರ ವಾಹನಗಳನ್ನು
ಕಳ್ಳತನ ಮಾಡುತ್ತಿದ್ದ ಇಬ್ಬರ ಬಂಧನ. 8 ದ್ವಿ-ಚಕ್ರ ವಾಹನಗಳ ವಶ, ಮೌಲ್ಯ 10.71 ಲಕ್ಷ.
ಗಿರಿನಗರ ಪೊಲೀಸ್ ಠಾಣಾ ವ್ಯಾಪ್ತಿಯ ಶಕ್ತಿ ಗಣಪತಿ ದೇವಸ್ಥಾನ, ಗಿರಿನಗರದಲ್ಲಿ ವಾಸವಿರುವ ಪಿರಾದುದಾರರು ದಿನಾಂಕ:26-06-2024 ರಂದು ರಾತ್ರಿ ದ್ವಿ ಚಕ್ರ ವಾಹನವನ್ನು ತಮ್ಮ ಮನೆಯ ಮುಂಭಾಗದಲ್ಲಿ ಬೀಗ ಹಾಕಿ ನಿಲ್ಲಿಸಿದ್ದು, ಮಾರನೆಯ ದಿನ ಬೆಳಿಗ್ಗೆ ನೋಡಲಾಗಿ, ದ್ವಿ-ಚಕ್ರ ವಾಹನವನ್ನು ಯಾರೋ ಅಪರಿಚಿತರು ಕಳುವು ಮಾಡಿಕೊಂಡು ಹೋಗಿರುತ್ತಾರೆಂದು, ದಿನಾಂಕ:27-06-2024 ರಂದು ದೂರನ್ನು ಗಿರಿನಗರ ಪೊಲೀಸ್ ಠಾಣೆಯಲ್ಲಿ ನೀಡಿರುತ್ತಾರೆ. ಈ ಕುರಿತು ದ್ವಿ-ಚಕ್ರ ವಾಹನ ಕಳ್ಳತನ ಪ್ರಕರಣ ದಾಖಲಿಸಿರುತ್ತಾರೆ.
ಈ ಪ್ರಕರಣದ ತನಿಖೆಯನ್ನು ಮುಂದುವರೆಸಿದ ಪೊಲೀಸರು, ವಿವಿಧ ಆಯಾಮಗಳಲ್ಲಿ ತನಿಖೆಯನ್ನು ಕೈಗೊಂಡು, ಭಾತ್ಮೀದಾರರಿಂದ ಮಾಹಿತಿಯನ್ನು ಕಲೆಹಾಕಿ ದಿನಾಂಕ:08-07-2024 ರಂದು ಹೊಸಕೆರೆಹಳ್ಳಿಯ ಕೆರೆಕೋಡಿ ಬಸ್ ನಿಲ್ದಾಣದ ಹತ್ತಿರ ಈ ಪ್ರಕರಣಕ್ಕೆ ಸಂಬಂಧಿಸಿದ ಒಂದು ದ್ವಿ-ಚಕ್ರ ವಾಹನ ಸಮೇತ ಇಬ್ಬರನ್ನು ವಶಕ್ಕೆ ಪಡೆದುಕೊಳ್ಳಲಾಯಿತು. ನಂತರ ಅವರುಗಳನ್ನು ಠಾಣೆಗೆ ಕರೆತಂದು, ವಿಚಾರಣೆ ಮಾಡಲಾಗಿ, ಈ ಪ್ರಕರಣದಲ್ಲಿ ದ್ವಿಚಕ್ರ ವಾಹನವನ್ನು ಕಳ್ಳತನ ಮಾಡಿರುವುದಾಗಿ ತನ್ನೊಪ್ಪಿಕೊಂಡಿರುತ್ತಾರೆ. ಅವರುಗಳನ್ನು ಅದೇ ದಿನ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿ, 6 ದಿನಗಳ ಪೊಲೀಸ್’ ಅಭಿರಕ್ಷೆಗೆ ಪಡೆದುಕೊಳ್ಳಲಾಗಿದೆ. ನಂತರ ಅವರುಗಳನ್ನು ಸುದೀರ್ಘವಾಗಿ ವಿಚಾರಣೆಗೆ ಒಳಪಡಿಸಲಾಗಿ, ಈ ಹಿಂದೆ ಕಳ್ಳತನ ಮಾಡಿದ್ದ 6 ದ್ವಿ-ಚಕ ವಾಹನಗಳನ್ನು ಬ್ಯಾಡರಹಳ್ಳಿ, ಹೇರೋಹಳ್ಳಿಯ ಕೆರೆಯ ಪಕ್ಕದ ಜಾಗದಲ್ಲಿ ಹಾಗೂ 01 ದ್ವಿಚಕ್ರ ವಾಹನವನ್ನು ಗಿರಿನಗರ ವ್ಯಾಪ್ತಿಯ ಆವಲಹಳ್ಳಿಯ ಬಸ್‌ನಿಲ್ದಾಣದ ಬಳಿ ನಿಲ್ಲಿಸಿರುವುದಾಗಿ ತಿಳಿಸಿದ್ದು, ದಿನಾಂಕ:10.07.2024 ರಂದು 07 ದ್ವಿ-ಚಕ್ರ ವಾಹನಗಳನ್ನೂ ಸಹ ವಶಕ್ಕೆ ಪಡೆದುಕೊಳ್ಳಲಾಯಿತು. ಇವುಗಳ ಒಟ್ಟು ಮೌಲ್ಯ 10,71,000/-.00:11.07.2024 ರಂದು ಇಬ್ಬರು ಆರೋಪಿಗಳನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಮಾನ್ಯ ನ್ಯಾಯಾಲಯವು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿರುತ್ತದೆ.
ಈ ಪ್ರಕರಣದಿಂದ 1) ಗಿರಿನಗರ ಪೊಲೀಸ್ ಠಾಣೆಯ 4 ದ್ವಿ-ಚಕ್ರ ವಾಹನ ಕಳ್ಳತನ ಪ್ರಕರಣ 2) ಪೀಣ್ಯ ಪೊಲೀಸ್ ಠಾಣೆಯ 1 ದ್ವಿ-ಚಕ್ರ ವಾಹನ ಕಳ್ಳತನ ಪ್ರಕರಣ 3) ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯ 1 ದ್ವಿ-ಚಕ್ರ ವಾಹನ ಕಳ್ಳತನ ಪ್ರಕರಣ 4) ಅನ್ನಪೂರ್ಣೇಶ್ವರಿನಗರ ಪೊಲೀಸ್ ಠಾಣೆಯ | ದ್ವಿ-ಚಕ್ರ ವಾಹನ ಕಳ್ಳತನ ಪ್ರಕರಣ 5) ಬಸವೇಶ್ವನಗರ ಪೊಲೀಸ್ ಠಾಣೆಯ | ದ್ವಿ-ಚಕ್ರ ವಾಹನ ಕಳ್ಳತನ ಪ್ರಕರಣ ಸೇರಿದಂತೆ ಒಟ್ಟು 8 ದ್ವಿ-ಚಕ್ರ ವಾಹನ ಪ್ರಕರಣಗಳು ಪತ್ತೆಯಾಗಿರುತ್ತದೆ.
ಈ ಕಾರ್ಯಾಚರಣೆಯನ್ನು ದಕ್ಷಿಣ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಶ್ರೀ ಲೋಕೇಶ್ ಭರಮಪ್ಪ ಜಗಳಾಸ ಹಾಗೂ ವಿ.ವಿ.ಪುರಂ ಉಪ-ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀ ಶಾಮಿದ್ ಬಾಷ ರವರ ಮಾರ್ಗದರ್ಶನದಲ್ಲಿ ಗಿರಿನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ರವರಾದ ಶ್ರೀ ಸತೀಶ್ ಕುಮಾರ್.ಯು ರವರ ನೇತೃತ್ವದ ಅಧಿಕಾರಿ/ಸಿಬ್ಬಂದಿಯವರುಗಳು ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ.