ಕಲಬುರಗಿ ನಗರದ ಪೋಲಿಸ್ ಕಮಿಷನರ್ ಕಚೇರಿಯ ಆವರಣದಲ್ಲಿ ರೌಡಿಗಳ ಪರೇಡ್ ನಡೆಸಿದ ಕಮಿಷನರ್, ಕಲಬುರಗಿ ಸಿಟಿ ವ್ಯಾಪ್ತಿಯ \’ಎ\’ ಡಿವಿಷನ್ ನಾಲ್ಕು ಪೊಲೀಸ್ ಠಾಣೆಗಳ ವ್ಯಾಪ್ತಿಯ 100ಕ್ಕೂ ಅಧಿಕ ರೌಡಿಗಳ ಪರೇಡ್ ನಡೆಸಿ ರೌಡಿ ಪರೇಡ್‌ನಲ್ಲಿ ರೌಡಿಗಳಿಗೆ ಬಿಸಿ ಮುಟ್ಟಿಸಿದರು.ಅಲ್ಲದೇ ರೌಡಿಸಂ ಮಾಡೋದಕ್ಕೆ ಗುತ್ತಿಗೆ ಪಡೆದುಕೊಂಡಿದ್ದೀರಾ ಅಂತಾ ತರಾಟೆ ತೆಗೆದುಕೊಂಡರು. ಪಾಲಿಕೆ ಚುನಾವಣೆ ಸಂದರ್ಭದಲ್ಲಿ ಬಾಲ ಬಿಚ್ಚದೇ, ಸೈಲೆಂಟ್ ಆಗಿದ್ರೆ ಒಳ್ಳೆಯದು, ಸಮಾಜಘಾತುಕ ಕೆಲಸದಲ್ಲಿ ಭಾಗಿಯಾದ್ರೆ ಅಪರಾಧ ಕೃತ್ಯಗಳಲ್ಲಿ ಪಾಲ್ಗೊಂಡರೆ ಮುಲಾಜಿಲ್ಲದೆ ಗಡಿಪಾರು ಮಾಡುವುದಾಗಿ ಎಚ್ಚರಿಕೆ ನೀಡಿದರು.
ಕಲಬುರಗಿ ನಗರ ಮಹಾನಗರ ಪಾಲಿಕೆಯ ಚುನಾವಣೆಯ ಹಿನ್ನೆಲೆಯಲ್ಲಿ ಪೊಲೀಸ ಆಯುಕ್ತಾಲಯದ ಕಛೇರಿಯ ಆವರಣದಲ್ಲಿ ಮಾನ್ಯ ಪೊಲೀಸ ಆಯುಕ್ತರಾದ ಶ್ರೀ ಡಾ.ವೈ.ಎಸ್.ರವಿಕುಮಾರ, ಐ.ಪಿ.ಎಸ್.ರವರು ರೌಡಿ ಪರೇಡ ಮಾಡಿದರು. ಚುನಾವಣೆಯ ಸಂದರ್ಭದಲ್ಲಿ ಕಾನೂನು ವಿರೋಧಿ, ಶಾಂತಿ ಕದಡುವಂತಹ ಅಹಿತಕರ ಘಟನೆ ನಡೆಯಬಾರದೆಂದು ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ಉಪ ಪೊಲೀಸ ಆಯುಕ್ತರಾದ ಶ್ರೀ ಅಡ್ಡೂರು ಶ್ರೀನಿವಾಸಲು(ಕಾ&ಸು)ರವರು ಉಪಸ್ಥಿತರಿದ್ದರು.
ನಮ್ಮ ಮುಖ್ಯ ವರದಿಗಾರರು ಕರ್ನಾಟಕದಿಂದ,