ಕಲಬುರಗಿ ನಗರದ ಗ್ರಾಮೀಣ ಪೊಲೀಸ ಠಾಣೆಯ ವ್ಯಾಪ್ತಿಯಲ್ಲಿ ನಡೆದ ಕೊಲೆ ಪ್ರಕರಣ ಭೇಧಿಸುವಲ್ಲಿ ಯಶಸ್ವಿಯಾದ ಗ್ರಾಮೀಣ ಪೊಲೀಸ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಯವರಿಗೆ ಮಾನ್ಯ ಪೊಲೀಸ ಆಯುಕ್ತರಾದ ಶ್ರೀ ಎನ್.ಸತೀಶಕುಮಾರ, ಐ.ಪಿ.ಎಸ್. ರವರು ಮೆಚ್ಚುಗೆ ವ್ಯಕ್ತಪಡಿಸಿರುತ್ತಾರೆ.
ಆರೋಪಿ ತೀರಾ ದಸ್ತಗಿರಿ ಕುರಿತು ಮಾನ್ಯ ಎನ್. ಸತೀಶ್ ಕುಮಾರ್ ಐ.ಪಿ.ಎಸ್. ಪೊಲೀಸ್ ಆಯುಕ್ತರು ಕಲಬುರಗಿ ನಗರ ಮತ್ತು ಮಾನ್ಯ ಡಿ. ಕಿಶೋರ್ ಬಾಬು ಐ.ಪಿ.ಎಸ್. ಪೊಲೀಸ್ ಉಪ ಆಯುಕ್ತರು ಕಲಬುರಗಿ ನಗರ ಮತ್ತು ಮಾನ್ಯ ಶ್ರೀಕಾಂತ್ ಕಟ್ಟಿಮನಿ ಕೆ.ಎಸ್ .ಪಿ .ಎಸ್ ಪೊಲೀಸ್ ಉಪ ಆಯುಕ್ತರು ಕಲಬುರಗಿ ಸಂಚಾರಿ ಮತ್ತು ಅಪರಾಧ ವಿಭಾಗ ಕಲಬುರಗಿ ನಗರ ಹಾಗೂ ಮಾನ್ಯ ಜೆ. ಎಚ್ .ಇನಮದಾರ ಎ .ಸಿ .ಪಿ ಸಾಹೇಬರು \”ಸಿ \”ಉಪ ವಿಭಾಗ ಕಲಬುರ್ಗಿ ನಗರ ಇವರ ಮಾರ್ಗದರ್ಶನದಲ್ಲಿ ಗ್ರಾಮೀಣ ಪೋಲಿಸ್ ಠಾಣಾ ಇನ್ಸ್ಪೆಕ್ಟರ್ ಬಾಸು ಚೌಹಾನ್ ರವರ ನೇತೃತ್ವದಲ್ಲಿ ಈ ಪ್ರಕರಣದ ಕೊಲೆಯಾದ ಓಂಕಾರ ತಂದೆ ಮಹಾಂತಪಾ ಹಣಶೆಟ್ಟಿ ಈತನನ್ನು ಕೊಲೆ ಪ್ರಕರಣ ವನ್ನು ಭೇದಿಸಿದಾಗ ಕೊಲೆಯಾದ ವ್ಯಕ್ತಿಯ ಮಗ ಪಿರ್ಯಾದಿ ಶರಣ ಬಸಪ್ಪ ಹಣ ಶೆಟ್ಟಿ ,ಇನ್ನೊಬ್ಬ ಮಗ ರವಿ ಶೆಟ್ಟಿ ಇವ ರಿಬ್ಬರೂ ತನ್ನ ತಂದೆ ಕಿರಿಕಿರಿ ಮಾಡುತ್ತಿದ್ದಾರೆಂದು ಅವನ ಕೊಲೆ ಮಾಡಲು ಮಸಲತ್ತು ಮಾಡಿ ತಮ್ಮ ಗೆಳೆಯರಾದ ಜೈ ಕರ್ನಾಟಕ ರಕ್ಷಣಾ ವೇದಿಕೆ ವಿದ್ಯಾರ್ಥಿ ಒಕ್ಕೂಟ ಅಧ್ಯಕ್ಷನಾದ ಅವರ ತಂದೆ ಚಂದ್ರಕಾಂತ್ ಈತನ ತನ್ನ ಗೆಳೆಯರಾದ ಹರೀಶ್ ಹಾಗೂ ಸುರೇಶ್ ಇವರಿಗೆ ಕೊಲೆ ಮಾಡಲು ತಿಳಿಸಿದಂತೆ ಅವರ ತಂದೆ ಚಂದ್ರಕಾಂತ್ ಎಂದೊಡೆ ತನ್ನ ಗೆಳೆಯರೊಂದಿಗೆ ದಿನಾಂಕ 23-03-2021 ಸೈಯದ್ ಚಿಂಚೋಳಿ ಕ್ರಾಸ ದಿಂದ ನೊರೋನಾ ರೋಡಿಗೆ ಹೋಗುವಾಗ ಅಷ್ಟಗಿ ಕಸಕ್ಕಿಂತ 1ಕಿಲೋಮೀಟರ್ ಮೊದಲೇ ಓಂಕಾರ್ ಮೋಟಾರ್ ಸೈಕಲ್ ಗೆ ಅಡ್ಡವಾಗಿ ತಡೆದು ನಿಲ್ಲಿಸಿ ಅವರ ಆಟೊ ರಿಕ್ಷಾದಲ್ಲಿ ಓಂಕಾರ್ ಕೂಡಿಸಿಕೊಂಡು ಅಷ್ಟಗಿ ಸಿ ಮಂಥರಾ ಬಿರಾದಾರ ಇವರ ಹೊಲದ ಬಂದಾರಿಯಲ್ಲಿ ಕರೆದುಕೊಂಡು ಹೋಗಿ ಮಧ್ಯಾಹ್ನ ಕಲ್ಲು ಎತ್ತಿಹಾಕಿ ಬರೇ ಗಾಯಗೊಳಿಸಿ ಕೊಲೆ ಮಾಡಿದ ಬಗ್ಗೆ ಕೊಲೆ ಪ್ರಕರಣ ಭೇದಿಸಿ ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದಾರೆ .
ನಮ್ಮ ಮುಖ್ಯ ವರದಿಗಾರರು ಕರ್ನಾಟಕದಿಂದ,
ಜೆ .ಜಾನ್ ಪ್ರೇಮ್