ಕಲಬುರಗಿ ನಗರದ ಎಂ.ಬಿ. ನಗರ ಪೊಲೀಸ ಠಾಣೆಯ ವ್ಯಾಪ್ತಿಯಲ್ಲಿ ಅಕ್ರಮವಾಗಿ ಆಯುಧ ಮಾರುತ್ತಿದ್ದ 5 ಜನ ಆರೋಪಿಗಳನ್ನು ಬಂಧಿಸಿ, ಬಂಧಿತರಿಂದ 2 ನಾಡ ಪಿಸ್ತೊಲಗಳು, 2 ಜೀವಂತ ಮದ್ದುಗುಂಡುಗಳು 5 ಮೋಬೈಲ ಸೇರಿದಂತೆ ಒಟ್ಟು 21,00,000 ಲಕ್ಷ ರೂಪಾಯಿ ಮೌಲ್ಯದ ಮುದ್ದೆ ಮಾಲು ಜಪ್ತಿ ಮಾಡಲಾಗಿರುತ್ತದೆ.
ಕಲಬುರಗಿ ನಗರದ ಎಂ .ಬಿ .ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಸೌಭಾಗ್ಯ ಕಲ್ಯಾಣ ಮಂಟಪದ ಎದುರು ರಸ್ತೆ ಬದಿಯಲ್ಲಿ ಕಾರಿನಲ್ಲಿ ಅಕ್ರಮ ಆಯುಧ ಇಟ್ಟುಕೊಂಡು ಮಾರಾಟದಲ್ಲಿ ತೊಡಗಿರುತ್ತಾರೆ ಎಂದು ಖಚಿತವಾದ ಬಾತ್ಮಿ ಬಂದ ಮೇರೆಗೆ ಶ್ರೀ .ಎನ್. ಸತೀಶ್ ಕುಮಾರ್ ಐ.ಪಿ.ಎಸ್. ಪೊಲೀಸ್ ಆಯುಕ್ತರು ಕಲಬುರಗಿ ನಗರ .ಶ್ರೀ ಡಿ ಕಿಶೋರ್ ಬಾಬು ಐ.ಪಿ.ಎಸ್. ಉಪ ಪೊಲೀಸ್ ಆಯುಕ್ತರು ಕಲಬುರಗಿ ನಗರ .ಶ್ರೀ ಶ್ರೀಕಾಂತ ಕಟ್ಟಿಮನಿ ಕೆ .ಎಸ್. ಪಿ. ಎಸ್ . ( ಆ .ವಿ. & ಸಂಚಾರ ) ಉಪ ಪೊಲೀಸ್ ಆಯುಕ್ತರು ಕಲಬುರಗಿ ನಗರ .ಶ್ರೀ .ಅಂಶುಕುಮಾರ್ ಐ.ಪಿ.ಎಸ್. ಎ ಎಸ್ ಪಿ ಎ ಉಪ ವಿಭಾಗ ಕಲಬುರ್ಗಿ ನಗರ ರವರ ಮಾರ್ಗದರ್ಶನದಲ್ಲಿ ಶ್ರೀ. ಚಂದ್ರಶೇಖರ್ ತಿಗಡಿ ಪಿ .ಐ ಎಂ. ಬಿ ನಗರ ಪೊಲೀಸ್ ಠಾಣಾ ನೇತೃತ್ವದಲ್ಲಿ ಶ್ರೀ .ವಾಹೇದ ಕೊತ್ವಾಲ್ ಪಿ.ಎಸ್. ಐ . ರೌಡಿ ನಿಗ್ರಹ ದಳ ಮತ್ತು ಸಿಬ್ಬಂದಿಯವರಾದ ಶ್ರೀ. ಹುಸೇನ್ ಬಾಷಾ ಎ.ಎಸ್. ಐ ಸಿಪಿಸಿ ಶಿವಾನಂದ,ರಾಜ ಕುಮಾರ್ ,ತೌಸಿಫ್ ,ಇರಾನ್ ಇವರೊಂದಿಗೆ ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿ ಆರೋಪಿಗಳನ್ನು ಹೈದ್ರಾಬಾದ್ ರಾಜ್ಯದಲ್ಲಿ ಹಿಡಿದು ಅವರಿಂದ ಅಕ್ರಮವಾಗಿ ಆಯುಧ ಹೊಂದಿದ್ದ 2ನಾಡ ಪಿಸ್ತೂಲ್ ಗಳು 2ಜೀವಂತ ಗುಂಡುಗಳು 5ಮೊಬೈಲುಗಳು 1ಇನೋವಾ ಹೀಗೆ ಒಟ್ಟು 21 ಲಕ್ಷ ರೂ ಮೌಲ್ಯ ಜಪ್ತಿ ಮಾಡಿಕೊಂಡಿದ್ದು ಇರುತ್ತಾರೆ .ಹೈದರಾಬಾದ್ ನಿವಾಸಿಗಳು ಆಯುಧಗಳು ಖರೀದಿ ಮಾಡಲು ಬಂದಿರುವುದಾಗಿ ತಿಳಿಸಿರುತ್ತಾರೆ .ಅಕ್ರಮ ನಾಡ ಪಿಸ್ತೂಲ್ ಹೊಂದಿದ್ದ ಆರೋಪಿತರಿಗೆ ಮಾರಾಟ ಮಾಡಲು ಬಂದ ಆರೋಪಿತರಿಗೆ ಪತ್ತೆ ಹಚ್ಚಿದ ಅಧಿಕಾರಿ ಮತ್ತು ಸಿಬ್ಬಂದಿ ಅವರಿಗೆ ಮೇಲಾಧಿಕಾರಿಯವರೂ ಮೆಚ್ಚಿಗೆ ವ್ಯಕ್ತ ಪಡಿಸಿರುತ್ತಾರೆ.
ನಮ್ಮ ಮುಖ್ಯ ವರದಿಗಾರರು ಕರ್ನಾಟಕದಿಂದ,
ಜೆ .ಜಾನ್ ಪ್ರೇಮ್