ಬೇಸಿಗೆ ಶಿಬಿರವನ್ನು ದಿನಾಂಕ:05-05-2022 ರಿಂದ ದಿನಾಂಕ 15-05-2022 ರವರೆಗೆ ಒಟ್ಟು 10 ದಿನಗಳ ಕಾಲ ಬೇಸಿಗೆ ಶಿಬಿರವನ್ನು ಶಿಕ್ಷಕರಾದ ರಾಜೇಶ್ವರಿ, ವಂದನಾ,ಸ್ಮಿತೇಶ್ ಹಾಗೂ ಸಮಾಲೋಚಕರಾದ ರಂಜಿತ್ ಜಿ ಟಿ ರವರು ನಡೆಸಿಕೊಟ್ಟರು. ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾಗಿ ಮಾನ್ಯ ಪೊಲೀಸ್ ವರಿಷ್ಟಾಧಿಕಾರಿಗಳಾದ ಶ್ರೀಮತಿ ಸುಮನ್ ಡಿ ಪೆನ್ನೇಕರ್ ಹಾಗೂ ಹೆಚ್ಚುವರಿ ಎಸ್. ಪಿ. ಬದ್ರಿನಾಥ್ ರವರು ಆಗಮಿಸಿದ್ದರು, ಕಾರ್ಯಕ್ರಮದಲ್ಲಿ ಮಕ್ಕಳು ತಯಾರಿಸಿದ ಕರಕುಶಲ ವಸ್ತುಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು. ಶಿಬಿರದಲ್ಲಿ ಮಕ್ಕಳಲ್ಲಿ ಆತ್ಮವಿಶ್ವಾಸ ಹೆಚ್ಚಿಸಲು ಮತ್ತು ಬೆಳೆಸಲು ಸಹಕಾರಿಯಾಗುವಂತ ಚಿತ್ರಕಲೆ, ಟ್ರೇಜರಹಂಟ್, ಸ್ಟೋನ್ ಪೇಂಟಿಂಗ್, ವಾಟರ್ ಗ್ಲಾಸ್ ಕ್ರಾಫ್ಟ್ಸ್ ಮುಂತಾದ ಚಟುವಟಿಕೆಗಳನ್ನು ಶಿಬಿರದಲ್ಲಿ ಪೊಲೀಸರ ಮಕ್ಕಳಿಂದ ನಿರ್ವಹಿಸಲಾಗಿದೆ.ನೃತ್ಯ,ನಾಟಕ, ಗಾಯನ ಮುಂತಾದ ಸಾಂಸ್ಕೃತಿಕ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿತ್ತು. ಶಿಬಿರದಲ್ಲಿ ಮಕ್ಕಳಲ್ಲಿ ಆತ್ಮವಿಶ್ವಾಸ,ಧೈರ್ಯ ಹೆಚ್ಚಾದ ಬಗ್ಗೆ ಮಕ್ಕಳು ಅನಿಸಿಕೆ ಹಂಚಿಕೊಂಡರು. ನಂತರ ಶಿಬಿರದಲ್ಲಿ ಉತ್ತಮ ಚಟುವಟಿಕೆ ನಿರ್ವಹಿಸಿದ ಮಕ್ಕಳಿಗೆ ಬಹುಮಾನ ನೀಡಿ ಪುರಸ್ಕರಿಸಲಾಯಿತು. ಕಾರ್ಯಕ್ರಮದಲ್ಲಿ ಕಾರವಾರ ಉಪವಿಭಾಗದ ಪೊಲೀಸ್ ಉಪಾದಿಕ್ಷಕರಾದ ವೇಲೆಂಟೇಯನ್ಸ್ ಡಿಸೋಜಾ ಹಾಗೂ ಪೊಲೀಸ್ ಅಧಿಕಾರಿ/ಸಿಬ್ಬಂದಿ ವರ್ಗದವರು ಹಾಜರಿದ್ದರು.