ಆಟೋ ಚಾಲಕರು ಅಂದರೆ ನಮಗೆ ತಿಳಿದ ಹಾಗೆ ಏನು? ಮೀಟರ್ ಮೇಲೆ ದುಡ್ಡು ಜಾಸ್ತಿ ಕೇಳ್ತಾರೆ, ಇವರಿಗೆ ಗೊತ್ತಿಲ್ದೆ ಇರೋ ಪ್ಲೇಸ್ ಹೇ ಇಲ್ಲಾ, ಗೂಗಲ್ ಮ್ಯಾಪ್ ಬರೋಕೆ ಮುಂಚೆನೇ ಗೂಗಲ್ ಮ್ಯಾಪ್ ಆಗಿದ್ದ ನಮ್ಮ ಆಟೋ ಚಾಲಕರು, ಹೆಣ್ಣುಮಕ್ಕಳು, ಹೆಂಗಸರು ಭಯ ಪಡದೆ ಹೋಗೋ ಒಂದು ವಾಹನ ಅಂದರೆ ಅದು ಆಟೋ ಮಾತ್ರನೇ ಅಷ್ಟು ನಂಬಿಕೆ ಆಟೋ ಡ್ರೈವರ್ಸ್ ಮೇಲೆ , ಯಾಕೆ ಆಟೋ ಚಾಲಕರ ಬಗ್ಗೆ ಇಷ್ಟು ಹೇಳ್ತಾ ಇದ್ದೇವೆ ಅಂದರೆ. ಸೋಮುವಾರ ಬೆಳಗ್ಗೆ 10 ರಿಂದ 11 ರ ಸಮಯ ತಲಘಟ್ಟಪುರ ಇಂದ ಗುಬ್ಬಳಾಲು ಗೆ ಪ್ಯಾಸೆಂಜರ್ ಬರುತ್ತಾರೆ, ಮನೆಗೆ ಬರುವಷ್ಟರಲ್ಲಿ ಅವರು ಆಟೋದಲ್ಲಿ ಸುಮಾರು 5 ಲಕ್ಷದ ವಡವೆ ಮತ್ತು ಇನ್ನಿತರ ವಸ್ತುಗಳನ್ನು ಮರೆತು ಬಿಟ್ಟು ಹೋಗಿರುತ್ತಾರೆ, ಆಟೋ ಚಾಲಕ ಮುಂದೆ ಬಂದು ಮತ್ತೊಂದು ಪ್ಯಾಸೆಂಜರ್ ಹತ್ತಿಸಿಕೊಂಡು ಹೋಗಿರುತ್ತಾರೆ ಅವರು ಆಟೋ ಇಳಿದಾಗ ಆಟೋ ಚಾಲಕ ನಿಮ್ಮ ವಸ್ತು ಬಿಟ್ಟು ಹೋಗುತ್ತಿದ್ದೀರಿ ಎಂದಾಗ ಅವರು ನಮ್ಮದಲ್ಲ ಎಂದಿದ್ದಾರೆ, ಕೂಡಲೇ ಆಟೋ ಚಾಲಕ ಮನೆಗೆ ಹೋಗಿ ತನ್ನ ಪತ್ನಿ ಬಳಿ ತಿಳಿಸಿದ್ದಾರೆ, ಆಟೋ ಚಾಲಕ ಶಿವುಶಂಕರ್ ಹಾಗೂ ಪತ್ನಿ ಅಂಬುಜಾ ಶಂಕರ್ , ಬ್ಯಾಗ್ ಅಲ್ಲಿ ಏನಿದೆ ಅಂತ ಸಹ ನೋಡದೆ ಅದರಲ್ಲಿ ಚಿನ್ನ, ದುಡ್ಡು, ಬಟ್ಟೆ ಏನಾದರೂ ಇರಲಿ ಅವರಿಗೆ ಕೊಟ್ಟು ಬರೋಣ ಎಂದು ಹೋಗಿ ಪ್ರತಿಯೊಂದು ತಪ್ಪದೇ ವಾಪಾಸ್ ಮಾಡಿ ಪೊಲೀಸ್ ಠಾಣೆಗೆ ಸಹ ತಿಳಿಸಿದ್ದಾರೆ, ತಲಘಟ್ಟಪುರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಧರ್ಮರಾಜ್ ಹಾಗೂ ಪೊಲೀಸ್ ಸಿಬ್ಬಂದಿ ವರ್ಗ, ಆಟೋ ಚಾಲಕರ ನೀಯತ್ತು ಮತ್ತು ಮಾನವೀಯತೆ ಮೆರೆದ ಶಿವುಶಂಕರ್ ಅವರಿಗೆ ಧನ್ಯವಾದಗಳನ್ನು ಹಾಗೂ ಸನ್ಮಾನವನ್ನು ಮಾಡಿದರು.

ಆಟೋ ಚಾಲಕರು ಒಳ್ಳೆಯವರು ಇದ್ದಾರೆ, ಯಾವುದಕ್ಕೂ ಆಸೆ ಪಡದ ಆಟೋ ಚಾಲಕರಾದ ಶಿವಶಂಕರ್ ರವರು ಹಾಗೂ ಅಂಬುಜ ಶಿವಶಂಕರವರಿಗೆ ನಮ್ಮ ಪೊಲೀಸ್ ನ್ಯೂಸ್ ಪ್ಲಸ್ ತಂಡದವರಿಂದ ಅಭಿನಂದನೆಗಳು. ಎಷ್ಟೋ ಆಟೋ ಚಾಲಕರಿಗೆ ನಿಮ್ಮಂಥವರೇ ಪ್ರೇರಣೆ.
ವರದಿ : ಆಂಟೋನಿ ಬೇಗೂರು
