ದಿನಾಂಕ: 07.01.2024 ರಂದು ರಾತ್ರಿ ಸುಮಾರು 00-10 ಗಂಟೆ ಸಮಯದಲ್ಲಿ ಜಗಜೀವನರಾಮ್ (ಜೆ.ಜೆ.) ನಗರ ಪೊಲೀಸ್ ಠಾಣಾ ವ್ಯಾಪ್ತಿಯ, ಸಿರ್ಸಿ ವೃತ್ತದ ಪಾರ್ಕ್ ವೆಸ್ಟ್ ಅಪಾರ್ಟ್ಮೆಂಟ್ನಲ್ಲಿ ಅಕ್ರಮವಾಗಿ ಹಣವನ್ನು ಪಣವನ್ನಾಗಿ ಕಟ್ಟಿಕೊಂಡು ಅಂದರ್ ಬಾಹರ್ ಎಂಬ ಅದೃಷ್ಟದ ಜೂಜಾಟವನ್ನು ಆಡುತ್ತಿದ್ದಾರೆಂಬ ಮಾಹಿತಿಯನ್ನು ಸಿಸಿಬಿ ಪೊಲೀಸರು ಸಂಗ್ರಹಿಸಿರುತ್ತಾರೆ. ನಂತರ ವಿಶೇಷ ವಿಚಾರಣಾ ದಳದ ಅಧಿಕಾರಿ ಮತ್ತು ಸಿಬ್ಬಂದಿಗಳು ಮೇಲೆ ತಿಳಿಸಿದ ಸ್ಥಳಕ್ಕೆ ಹೋಗಿ ದಾಳಿ ಮಾಡಿ, ಅಂದರ್-ಬಾಹರ್ ಜೂಜಾಟ ಆಡುತ್ತಿದ್ದ 06 ವ್ಯಕ್ತಿಗಳನ್ನು ವಶಕ್ಕೆ ಪಡೆದುಕೊಂಡಿರುತ್ತಾರೆ. ಜೂಜಾಟಕ್ಕೆ ಸಂಬಂಧಪಟ್ಟಂತೆ ನಗದು ₹1,48,300/- ಹಣವನ್ನು ಮತ್ತು ಇತರೆ ಜೂಜಾಟದ ವಸ್ತುಗಳನ್ನು ವಶಪಡಿಸಿಕೊಂಡಿರುತ್ತಾರೆ.
ಈ ದಾಳಿ ಸಮಯದಲ್ಲಿ ಯಾವುದೇ ದಾಖಲೆಗಳಿಲ್ಲದ ₹ 85,39,500/- ನಗದು ಹಣ ಇರುವ ಎರಡು ಬ್ಯಾಗ್ಗಳು ಪತ್ತೆಯಾಗಿರುತ್ತದೆ. ಈ ಹಣಕ್ಕೆ ಯಾವುದೇ ಸೂಕ್ತ ದಾಖಲಾತಿಗಳಿಲ್ಲದೆ ಇರುವುದರಿಂದ ಹಣವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಮನೆಯ ಮಾಲೀಕನು ತಲೆಮರೆಸಿಕೊಂಡಿರುತ್ತಾನೆ. ಈ ಪ್ರಕರಣದಲ್ಲಿ ಒಟ್ಟು ₹ 86,87,800/– ಹಣವನ್ನು ವಶಪಡಿಸಿಕೊಳ್ಳಲಾಗಿರುತ್ತದೆ. ಈ ಕುರಿತು ಜಗಜೀವನರಾಮ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ತನಿಖೆ ಮುಂದುವರೆದಿದೆ.