ಅಂತರಾಷ್ಟ್ರೀಯ ಡಗ್ ಪೆಡರ್‌ಗಳು ಸೇರಿದಂತೆ ಒಟ್ಟು 4 ಡಗ್ ಪೆಡರ್‌ಗಳ ವಶ,
2,35,36,000 ಮೌಲ್ಯದ ನಿಷೇಧಿತ ಮಾದಕ ವಸ್ತುಗಳು ಮತ್ತು ಇತರೆ ವಸ್ತುಗಳ ವಶ.
ಬೆಂಗಳೂರು ನಗರ ಸಿಸಿಬಿ ಘಟಕದ ಮಾದಕ ದ್ರವ್ಯ ನಿಗ್ರಹ ದಳದ ಅಧಿಕಾರಿ ಮತ್ತು ಸಿಬ್ಬಂದಿಗಳ ತಂಡವು ಡ್ರಗ್ ಪೆಡ್ಲರ್‌ಗಳ ವಿರುದ್ಧದ ಕಾರ್ಯಾಚರಣೆಯನ್ನು ಕೈಗೊಂಡಿರುತ್ತಾರೆ. ಅದರ ಭಾಗವಾಗಿ ಬೆಂಗಳೂರು ನಗರದ ಸೋಲದೇವನಹಳ್ಳಿ ಮತ್ತು ಆರ್.ಎಂ.ಸಿ.ಯಾರ್ಡ್ ಪೊಲೀಸ್ ಠಾಣಾ ಸರಹದ್ದುಗಳಲ್ಲಿ ಕ್ಷಿಪ್ರ ಕಾರ್ಯಾಚರಣೆಯನ್ನು ನಡೆಸಿ, ವಿದೇಶಿ ಮೂಲದ 3 ಡ್ರಗ್ ಪೆಡ್ಲರ್‌ಗಳು ಸೇರಿದಂತೆ ಒಟ್ಟು 4 ಡ್ರಗ್ ಪೆಕ್ಟರ್‌ಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ವಶಕ್ಕೆ ಪಡೆದ 4 ಡ್ರಗ್ ಪೆಡ್ಲರ್‌ಗಳಿಂದ ಒಟ್ಟು 2,35,36,000/- (ಎರಡು ಕೋಟಿ ಮೂವತ್ತೈದು ಲಕ್ಷದ ಮೂವತ್ತಾರು ಸಾವಿರ ರೂಪಾಯಿ) ಮೌಲ್ಯದ ನಿಷೇಧಿತ ಮಾದಕ ವಸ್ತುಗಳಾದ 730 ಗ್ರಾಂ ಎಂ.ಡಿ.ಎಂಎ ಕ್ರಿಸ್ಟೆಲ್, 1273 ಎಕ್ಸ್‌ಟಿಸಿ ಪಿಲ್ಸ್‌ಗಳು, 42 ಗ್ರಾಂ ಹೈಡೋಗಾಂಜಾ ಮತ್ತು ಕೃತ್ಯಕ್ಕೆ ಬಳಸಲಾಗುತ್ತಿದ್ದ 4 ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ.
1) ಸೋಲದೇವನಹಳ್ಳಿ ಪೊಲೀಸ್ ಠಾಣೆಯ ಪ್ರಕರಣದಲ್ಲಿ ವಶಕ್ಕೆ ಪಡೆದಿರುವ ಇಬ್ಬರು ವಿದೇಶಿ ಡ್ರಗ್ ಪೆಡ್ಲರ್‌ಗಳು ಪ್ರವಾಸಿ ವೀಸಾದಡಿ ಭಾರತಕ್ಕೆ ಬಂದಿದ್ದು. ಒಬ್ಬಾತನು ಮೊದಲಿಗೆ ಮುಂಬೈನಲ್ಲಿ ನೆಲೆಸಿ ಎನ್‌ಡಿಪಿಎಸ್ ಪ್ರಕರಣದಲ್ಲಿ ಜೈಲಿನಲ್ಲಿದ್ದನು. ಈತನು ಜೈಲಿನಿಂದ ಬಿಡುಗಡೆಯಾದ ನಂತರ ಬೆಂಗಳೂರಿಗೆ ಬಂದು ಮತ್ತೊಬ್ಬ ವಿದೇಶಿ ಡ್ರಗ್ ಪೆಡ್ಲರ್‌ನ ಜೊತೆಗೂಡಿ ಪರಿಚಯಸ್ಥ ಗಿರಾಕಿಗಳಿಗೆ ವಿವಿಧ ರೀತಿಯ ನಿಷೇಧಿತ ಮಾದಕ ವಸ್ತುಗಳನ್ನು ಸರಬರಾಜು ಮಾಡುವ ಮೂಲಕ ಅಕ್ರಮ ಹಣ ಸಂಪಾದನೆಯಲ್ಲಿ ತೊಡಗಿರುತ್ತಾರೆಂದು ತನಿಖೆಯಿಂದ ತಿಳಿದು ಬಂದಿರುತ್ತದೆ. ಈ ಪ್ರಕರಣದಲ್ಲಿ 51 ಲಕ್ಷ ಮೌಲ್ಯದ 500 ಗ್ರಾಂ ಎಂಡಿಎಂಎ ಕ್ರಿಸ್ಟೆಲ್, 2 ಮೊಬೈಲ್ ಫೋನ್‌ಗಳು ಹಾಗೂ ಮತ್ತಿತರೆ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
2) ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ವರದಿಯಾಗಿರುವ ಮತ್ತೊಂದು ಪ್ರಕರಣದಲ್ಲಿ ಓರ್ವ ವಿದೇಶಿ ಡ್ರಗ್ ಪೆಡ್ಲರ್ 2023 ಫೆಬ್ರವರಿಯಲ್ಲಿ ಬ್ಯುಸಿನೆಸ್ ವೀಸಾ ಪಡೆದು ಭಾರತಕ್ಕೆ ಬಂದಿದ್ದು, ಇಲ್ಲಿನ ಪರಿಚಯಸ್ಥ ಮತ್ತು ಇತರೆ ವಿದೇಶಿ ಪ್ರಜೆಗಳಿಂದ ಕಡಿಮೆ ಬೆಲೆಗೆ ಮಾದಕ ವಸ್ತುಗಳನ್ನು ಖರೀದಿಸಿ ಅವುಗಳನ್ನು ಪರಿಚಯಸ್ಥ ಗಿರಾಕಿಗಳಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡಿ ಅಕ್ರಮ ಹಣ ಸಂಪಾದನೆಯಲ್ಲಿ ತೊಡಗಿದ್ದರೆಂಬ ಅಂಶವು ತನಿಖೆಯಿಂದ ತಿಳಿದುಬಂದಿರುತ್ತದೆ. ಈ ವ್ಯಕ್ತಿಯಿಂದ 1,81,36,000/-(ಒಂದು ಕೋಟಿ ಎಂಬತ್ತೊಂದು ಲಕ್ಷದ ಮೂವತ್ತಾರು ಸಾವಿರ ರೂಪಾಯಿ) ಮೌಲ್ಯದ 236 ಗ್ರಾಂ ಎಂಡಿಎಂಎ ಕ್ರಿಸ್ಟಲ್, 1273 ಎಕ್ಸ್‌ಟಿಸಿ ಪಿಲ್ಸ್‌ಗಳು ಮತ್ತು ಕೃತ್ಯಕ್ಕೆ ಬಳಸುತ್ತಿದ್ದ ಒಂದು ಮೊಬೈಲ್ ಫೋನ್‌ನ್ನು ವಶಪಡಿಸಿಕೊಳ್ಳಲಾಗಿದೆ.
3) ಆರ್.ಎಂ.ಸಿ.ಯಾರ್ಡ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ಓರ್ವನು ಇಂಡಿಯನ್ ಪೋಸ್ಟ್ ಮೂಲಕ ಹೈಡೋಗಾಂಜಾವನ್ನು ಖರೀಧಿಸಿ ತರಿಸಿಕೊಂಡಿರುತ್ತಾನೆಂದು ಖಚಿತ ಮಾಹಿತಿಯ ಮೇರೆಗೆ, ಆತನನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ವಶಕ್ಕೆ ಪಡೆದ ವ್ಯಕ್ತಿಯಿಂದ ೯ 3 ಲಕ್ಷ ಮೌಲ್ಯದ 42 ಗ್ರಾಂ ಹೈಡೋಗಾಂಜಾ ಮತ್ತು ಕೃತ್ಯಕ್ಕೆ ಬಳಸಿದ್ದ ಮೊಬೈಲ್ ಫೋನ್‌ನ್ನು ವಶಪಡಿಸಿಕೊಳ್ಳಲಾಗಿದೆ.
ಈ ಕಾರ್ಯಾಚರಣೆಯನ್ನು ಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳದ ಅಧಿಕಾರಿ ಮತ್ತು ಸಿಬ್ಬಂದಿಗಳ ತಂಡವು ಯಶಸ್ವಿಯಾಗಿ ಕೈಗೊಂಡಿರುತ್ತಾರೆ.