ಆಟೋ ಚಾಲಕರು ತಮ್ಮ ಆಟೋಗಳಲ್ಲಿ ಸಾಮರ್ಥ್ಯಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಶಾಲಾ ಮಕ್ಕಳನ್ನು ಕರೆದುಕೊಂಡು ಹೋಗಬಾರದೆಂದು ಈಗಾಗಲೇ ಸುಮಾರು ಸಲ ತಿಳಿ ಹೇಳಿದರು ಕೂಡಾ, ಕೆಲವು ಆಟೋ ಚಾಲಕರು ಇಂದು ಬೀದರ ನಗರದಲ್ಲಿ ತಮ್ಮ ಆಟೋಗಳಲ್ಲಿ ನಿಗದಿತ ಮಿತಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಶಾಲಾ ಮಕ್ಕಳನ್ನು ಕರೆದುಕೊಂಡು ಹೋಗುತ್ತಿದ್ದನ್ನು ಕಂಡು, ಶ್ರೀ ಬಾಪುಗೌಡ ಎಸ್. ಪಾಟೀಲ್ ಪಿ.ಐ. ಬೀದರ ಸಂಚಾರ ಪೊಲೀಸ್ ಠಾಣೆ ರವರ ನೇತೃತ್ವದಲ್ಲಿ ಬೀದರ ಸಂಚಾರ ಪೊಲೀಸ್ ಠಾಣೆಯ ಅಧಿಕಾರಿ/ಸಿಬ್ಬಂದಿಯವರನ್ನು ಒಳಗೊಂಡ ಒಂದು ತಂಡವನ್ನು ರಚಿಸಿ, ನಗರದ ವಿವಿಧ ಸ್ಥಳಗಳಲ್ಲಿ Special Driveನ್ನು ಮಾಡಿ, ರಸ್ತೆ ಸುರಕ್ಷತೆ ಕ್ರಮ ಕುರಿತು 10 ಪ್ರತ್ಯೆಕ ಪ್ರಕರಣಗಳನ್ನು ದಾಖಲು ಮಾಡಲಾಗಿರುತ್ತದೆ ಮತ್ತು ಚಾಲಕರ ಪಕ್ಕದಲ್ಲಿ ಹೆಚ್ಚುವರಿಯಾಗಿ ಅಳವಡಿಸಿರುವ ಸೀಟಗಳನ್ನು ತೆಗೆಯಿಸಿ, ಚಾಲಕರಿಗೆ ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುವಂತೆ ಕಟ್ಟೆಚ್ಚರ ನೀಡಲಾಗಿರುತ್ತದೆ.
ಆದ್ದರಿಂದ ಬೀದರ ಜಿಲ್ಲೆಯ ಎಲ್ಲಾ ಆಟೋ ಚಾಲಕರು ಸಾಮರ್ಥ್ಯಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಶಾಲಾ ಮಕ್ಕಳನ್ನು ಕರೆದುಕೊಂಡು ಹೋಗಬಾರದೆಂದು ಈ ಮೂಲಕ ಮತ್ತೊಮ್ಮೆ ಸೂಚಿಸಲಾಗಿರುತ್ತದೆ.
Special Drive ತಂಡದಲ್ಲಿ ಭಾಗವಹಿಸಿರುವ ಬೀದರ ಸಂಚಾರ ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಯವರಿಗೆ ಶ್ಲಾಘಿಸಲಾಗಿರುತ್ತದೆ.
ಬೀದರ ಜಿಲ್ಲಾ ಪೊಲೀಸ್ ಸದಾ ನಿಮ್ಮ ಸೇವೆಯಲ್ಲಿ
ಪ್ರದೀಪ್ ಗುಂಟಿ, ಐ.ಪಿ.ಎಸ್.,*
ಪೊಲೀಸ್ ವರೀಷ್ಠಾಧಿಕಾರಿಗಳು,
ಬೀದರ ಜಿಲ್ಲೆ, ಬೀದರ