ದಿನಾಂಕ 27/09/2025 ರಂದು ಮಲ್ಪೆ ಪೊಲೀಸ್ ಠಾಣಾ ಸರಹದ್ದಿನ ಕೊಡವೂರಿನಲ್ಲಿ AKMS ಬಸ್ ಮಾಲೀಕ ಸೈಫುದ್ದೀನ್ ಕೊಲೆ ನಡೆದಿದ್ದು, ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಠಾಣಾ ಅಪರಾಧ ಕ್ರಮಾಂಕ : 108/2025 ಕಲಂ 103, ಜೊತೆಗೆ 3(5) ರಂತೆ ಪ್ರಕರಣ ದಾಖಲಾಗಿ ತನಿಖೆಯಲ್ಲಿರುತ್ತದೆ.

ಸದ್ರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ 04 ಜನ ಆರೋಪಿತರುಗಳನ್ನು ದಸ್ತಗಿರಿ ಮಾಡಿ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಆರೋಪಿತರು ನ್ಯಾಯಾಂಗ ಬಂಧನದಲ್ಲಿರುತ್ತಾರೆ. ಇನ್ನೋರ್ವ ಆರೋಪಿಯಾದ ಮಾಲಿ ಮೊಹಮ್ಮದ್ ಸಿಯಾನ್(31), ತಂದೆ: ಮೊಹಮದ್ ಹುಸೈನ್, ವಾಸ: ಪ್ಲಾಟ್ ನಂಬ್ರ 502, ಬಿ-ಬ್ಲಾಕ್, ಸಿಟಿಗೇಟ್ ವೇ ಅಪಾರ್ಟ್ ಮೆಂಟ್, ಮಿಶನ್ ಕಂಪೌಂಡ್ ಬಳಿ, ಶಾಂತಿ ನಗರ ಕ್ರಾಸ್, ಉಡುಪಿ ತಾಲೂಕು ಮತ್ತು ಜಿಲ್ಲೆ ಇತನನ್ನು ದಿನಾಂಕ 15/12/2025 ರಂದು ಬೆಳಗ್ಗೆ 10.30 ಗಂಟೆಗೆ MGM ಕಾಲೇಜು ಬಸ್ ಸ್ಟ್ಯಾಂಡ್ ಬಳಿಯಲ್ಲಿ ಸಿಬ್ಬಂದಿಯವರಾದ ಎಎಸ್ ಐ ಹರೀಶ್ ಮತ್ತು ಪಿಸಿ ಶರಣಬಸಪ್ಪರವರ ದಸ್ತಗಿರಿ ಮಾಡಿದ್ದು, ಆರೋಪಿತನು ಕೃತ್ಯಕ್ಕೆ ಬಳಸಿದ KA20MF207ನೇ ಗ್ಲಾಂಜಾ ಕಾರನ್ನು ಹಾಗೂ ಕೃತ್ಯಕ್ಕೆ ಬಳಸಿದ ಮೊಬೈಲ್ ಪೋನ್‌ನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಯನ್ನು ಮಾನ್ಯ ನ್ಯಾಯಾಲಕ್ಕೆ ಹಾಜರುಪಡಿಸಲಾಗುವುದು.
ಉಡುಪಿಯ ನಮ್ಮ ವರದಿಗಾರ,

ವಿಲ್ಸನ್ ಡಿ’ಸೋಜ





