ಮಡಿಕೇರಿ ನಗರದ ರಾಣಿಪೇಟೆಯ ಮನೆಯೊಂದರಲ್ಲಿ ವ್ಯಕ್ತಿಯೊಬ್ಬ ಅಕ್ರಮ ಗಾಂಜಾ ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಸಂಗ್ರಹಿಸಿದ ಜಿಲ್ಲಾ ಡಿಸಿಐಬಿ ಪೊಲೀಸರು ದಾಳಿ ನಡೆಸಿ 6 ಮಂದಿ ಆರೋಪಗಳನ್ನು ಬಂಧಿಸಿ ಅವರಿಂದ ಅಂದಾಜು 50 ಸಾವಿರ ರೂ. ಮೌಲ್ಯದ 415 ಗ್ರಾಂ ತೂಕದ ಗಾಂಜಾವನ್ನು ಮತ್ತು 35,760 ರೂ. ನಗದನ್ನು ವಶಪಡಿಸಿಕೊಳ್ಳಲು ಯಶಸ್ವಿಯಾಗಿ ದ್ದಾರೆ. ಈ ಪ್ರಕರಣದಲ್ಲಿ 1) ಎಂ.ಅಸ್ಗರ್ ಅಲಿ, ತಂದೆ ಎಂ.ಎಸ್ ಅಬ್ಬಾಸ್, ತ್ಯಾಗರಾಜ ಕಾಲೋನಿ, ಮಡಿಕೇರಿ, 2) ಅಬ್ದುಲ್ ರಹೀಂ, ತಂದೆ ಮೊಹ್ಮದ್, ತ್ಯಾಗರಾಜ ಕಾಲೋನಿ, ಮಡಿಕೇರಿ, 3) ಸಫಾನ್ ಅಹಮ್ಮದ್, ತಂದೆ ಅಬ್ದುಲ್ ರಶೀದ್, ಅಯ್ಯಪ್ಪ ದೇವಸ್ಥಾನದ ಹತ್ತಿರ, ಸುಂಟಿಪೊಪ್ಪ, 4) ನೌಶಾದ್ ಆಲಿ ಎಂ.ಕೆ, ತಂದೆ ಖಾದರ್, ಆಜಾದ್ ನಗರ, ಮಡಿಕೇರಿ, 5) ಜಬೀವುಲ್ಲಾ ಎಂ, ತಂದೆ W.M. ಶರೀಫ್, ಮಹದೇವಪೇಟೆ ಮಡಿಕೇರಿ ಮತ್ತು 6) ಡಿ.ಆರ್.ಸುರೇಶ್, ತಂದೆ ಡಿ.ಎಸ್. ರಾಜು, ಭಗವತಿನಗರ ಮಡಿಕೇರಿ ಇವರನ್ನು ಬಂಧಿಸಿ ಮುಂದಿನ ಕ್ರಮ ಕೈಗೊಳ್ಳಲಾಗಿದೆ.
ಜಿಲ್ಲೆಯಲ್ಲಿ ಅಕ್ರಮ ಗಾಂಜಾ ಮಾರಾಟ ಪ್ರಕರಣಗಳನ್ನು ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಲಾಗಿದ್ದು ಅದರಂತೆ ಡಿಸಿಐಬಿ ವೃತ್ತ ನಿರೀಕ್ಷಕ ಕುಮಾರ್ ಆರಾಧ್ಯ ನೇತೃತ್ವದಲ್ಲಿ ನಡೆಸಿದ ಈ ಕಾರ್ಯಾಚರಣೆಯಲ್ಲಿ ಎಎಸ್ಐ ಹಮೀದ್, ಸಿಬ್ಬಂದಿಗಳಾದ ಯೋಗೇಶ್ ಕುಮಾರ್, ನಿರಂಜನ್, ವಸಂತ, ಅನಿಲ್ ಕುಮಾರ್, ವೆಂಕಟೇಶ್, ಶರತ್ ರೈ, ಶಶಿಕುಮಾರ್ ಮತ್ತು ಮಹೇಶ್ ಭಾಗಿಯಾಗಿದ್ದು ಇವರ ಕಾರ್ಯವೈಖರಿ ಯನ್ನು ಶ್ಲಾಘಿಸಲಾಗಿದೆ.
ನಮ್ಮ ಮುಖ್ಯ ವರದಿಗಾರರು ಕರ್ನಾಟಕದಿಂದ,
ಜೆ .ಜಾನ್ ಪ್ರೇಮ್